ಶನಿವಾರ, ಜೂನ್ 12, 2021
22 °C

ದಂಟಿನ ಬೇಸಾಯ: ಗಿರಿಜನರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಗಿರಿಜನರು ದಂಟಿನ ಬೀಜದ ಕೃಷಿಯನ್ನು ಅಳವಡಿಸಿಕೊಂಡು ಬೀಜವನ್ನು ಸ್ವತ: ಆಹಾರದಲ್ಲಿ ಉಪಯೋಗಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಶಿವಶಂಕರಸ್ವಾಮಿ ಹೇಳಿದರು.ತಾಲ್ಲೂಕಿನ ಹಗ್ಗದಹಳ್ಳ ಗ್ರಾಮದ ಗಿರಿಜನರ ಪೋಡಿನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ, ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಪರಿಷತ್‌ಗಳು ಸಂಯುಕ್ತವಾಗಿ ಬುಧವಾರ ಹಮ್ಮಿಕೊಂಡಿದ್ದ ಬೀಜದ ದಂಟು ಬೆಳೆಯ ಬೇಸಾಯ, ಪೌಷ್ಟಿಕತೆ ಮತ್ತು ಮೌಲ್ಯವರ್ಧನೆ ಕುರಿತ ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, `ಮನುಷ್ಯರಿಗೆ ಸೊಪ್ಪಿನ ತರಕಾರಿಗಳು ಬಹಳ ಅವಶ್ಯಕ, ಆದರೆ ಈ ಬೇಸಾಯದ ಬಗ್ಗೆ ಎಲ್ಲೆಡೆ ನಿರ್ಲಕ್ಷ ಇದೆ. ಇದನ್ನು ತೊಡೆದು ಹಾಕಿ ನಿಮ್ಮಲ್ಲಿರುವ ಸ್ಥಳಾವಕಾಶದಲ್ಲಿ ದಂಟಿನ ಬೆಳೆಯನ್ನು ಬೆಳೆಯಲು ಮುಂದಾಗಬೇಕು~ ಎಂದು ಸಲಹೆ ನೀಡಿದರು.ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ. ನಿರಂಜನಮೂರ್ತಿ ಮಾತನಾಡಿ, `ದಂಟಿನ ಬೆಳೆಯಿಂದ ಅನೇಕ ಪ್ರಯೋಜನಗಳಿವೆ, ಗಿರಿಜನರಾದ ನೀವು ಈ ಬೆಳೆಯನ್ನು ಬೆಳೆದು ಪಟ್ಟಣ ಪ್ರದೇಶಗಳಲ್ಲಿ ಮಾರಾಟ ಮಾಡಬಹುದು.ಕಾಡಂಚಿನ ಪ್ರದೇಶದಲ್ಲಿರುವ ನಿಮಗೆ ಲಭ್ಯವಿರುವ ಜಮೀನಿನಲ್ಲಿ ಮತ್ತು ಕೈತೋಟದ ಮೂಲಕ ಬೆಳೆಯಬಹುದು~ ಎಂದು ಸಲಹೆ ನೀಡಿದರು.ವಲಯ ಅರಣ್ಯಾಧಿಕಾರಿ ಶಶಿಧರ್, ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಂಜಯ್ಯ, ಎಂ. ಶ್ರೀಧರ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.