ಜೋಹಾನ್ಸ್ಬರ್ಗ್: ಸರಣಿ ಜಯದ ಕನಸು ಹೊತ್ತು ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದ ಭಾರತ ತಂಡಕ್ಕೆ ಮೊದಲ ಪಂದ್ಯದಲ್ಲಿಯೇ ಆಘಾತ ಎದುರಾಗಿದೆ. ಆತಿಥೇಯರ ವೇಗದ ಬೌಲಿಂಗ್ಗೆ ತಿರುಗೇಟು ನೀಡಲು ದೋನಿ ಬಳಗಕ್ಕೆ ಸಾಧ್ಯವಾಗಲಿಲ್ಲ.

ವಾಂಡರರ್ಸ್ ಕ್ರೀಡಾಂಗಣದಲ್ಲಿ ಗುರುವಾರ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ 50 ಓವರ್ಗಳಲ್ಲಿ 4 ವಿಕೆಟ್ಗೆ 358 ರನ್ ಕಲೆಹಾಕಿತು. ಆದರೆ ಈ ಭಾರಿ ಗುರಿ ಎದುರು ಪ್ರವಾಸಿ ಭಾರತ 41 ಓವರ್ಗಳಲ್ಲಿ 217 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ನಾಯಕ ದೋನಿ (65) ಹೋರಾಟ ಸಾಕಾಗಲಿಲ್ಲ. 141 ರನ್ಗಳ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ.

ಕ್ವಿಂಟನ್ ಡಿ ಕಾಕ್ (135, 121 ಎಸೆತ, 18 ಬೌಂ, 3 ಸಿಕ್ಸರ್) ಗಳಿಸಿದ ಶತಕ ಹಾಗೂ ಆಮ್ಲಾ, ಎಬಿ ಡಿವಿಲಿಯರ್ಸ್ ಮತ್ತು ಡುಮಿನಿ ಅವರ ಅರ್ಧ ಶತಕಗಳು ಆತಿಥೇಯ ತಂಡದ ಭಾರಿ ಮೊತ್ತಕ್ಕೆ ಕಾರಣ. ಉತ್ತಮ ಆರಂಭ: ಟಾಸ್ ಗೆದ್ದ ದೋನಿ ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಕಳುಹಿಸಿದರು. ಆದರೆ ಅವರ ನಿರ್ಧಾರ ತಲೆಕೆಳಗಾಯಿತು.

ಕ್ವಿಂಟನ್ ಡಿ ಕಾಕ್ ಮತ್ತು ಹಾಶಿಮ್ ಆಮ್ಲಾ (65, 88 ಎಸೆತ, 5 ಬೌಂ, 1 ಸಿಕ್ಸರ್) ಮೊದಲ ವಿಕೆಟ್ಗೆ 29.3 ಓವರ್ಗಳಲ್ಲಿ 152 ರನ್ಗಳ ಜೊತೆಯಾಟ ನೀಡಿ ತಂಡದ ಇನಿಂಗ್ಸ್ಗೆ ಭದ್ರ ಬುನಾದಿ ಹಾಕಿಕೊಟ್ಟರು. ಇಲ್ಲಿನ ಪಿಚ್ ವೇಗ ಹಾಗೂ ಬೌನ್ಸ್ಗೆ ನೆರವು ನೀಡುತ್ತಿದ್ದರೂ ಇವರಿಬ್ಬರು ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತರು. ಮೋಹಿತ್ ಶರ್ಮ ಮತ್ತು ಭುವನೇಶ್ವರ್ ಕುಮಾರ್ ಅವರ ಆರಂಭಿಕ ದಾಳಿಯನ್ನು ಇವರು ಎಚ್ಚರಿಕೆಯಿಂದ ಎದುರಿಸಿದರು.

ಭಾರತಕ್ಕೆ ಮೊದಲ ಯಶಸ್ಸು 30ನೇ ಓವರ್ನಲ್ಲಿ ಲಭಿಸಿತು. ಮೊಹಮ್ಮದ್ ಶಮಿ ಎಸೆತದಲ್ಲಿ ಆಮ್ಲಾ ಕ್ಲೀನ್ಬೌಲ್ಡ್ ಆದರು. ಬಳಿಕ ಬಂದ ಜಾಕ್ ಕಾಲಿಸ್ (10) ಕೂಡಾ ಶಮಿಗೆ ವಿಕೆಟ್ ಒಪ್ಪಿಸಿ ಬೇಗನೇ ಮರಳಿದರು. ಕ್ವಿಂಟನ್ ಅವರನ್ನು ಕೂಡಿಕೊಂಡ ನಾಯಕ ಎಬಿ ಡಿವಿಲಿಯರ್ಸ್ ಮೂರನೇ ವಿಕೆಟ್ಗೆ 75 ರನ್ಗಳ ಜೊತೆಯಾಟ ನೀಡಿದರು. ಭಾರತದ ಎಲ್ಲ ಬೌಲ ರ್ಗಳು ವಿಫಲರಾದಾಗ ದೋನಿ ಅವರು ವಿರಾಟ್ ಕೊಹ್ಲಿಗೆ ಚೆಂಡು ನೀಡಿದರು. ಇದು ಫಲ ನೀಡಿತು. ಕ್ವಿಂಟನ್ ಅವರ ಭರ್ಜರಿ ಆಟಕ್ಕೆ ಕೊಹ್ಲಿ ತೆರೆ ಎಳೆದರು.

ವಿಲಿಯರ್ಸ್, ಡುಮಿನಿ ಅಬ್ಬರ: ಆದರೆ ಕ್ವಿಂಟನ್ ಔಟಾದರೂ ಭಾರತದ ಆಟಗಾರರ ಸಂಭ್ರಮ ಹೆಚ್ಚುಹೊತ್ತು ಇರಲಿಲ್ಲ. ಡಿವಿಲಿಯರ್ಸ್ (77, 47 ಎಸೆತ, 6 ಬೌಂ, 4 ಸಿಕ್ಸರ್) ಮತ್ತು ಜೆಪಿ ಡುಮಿನಿ (ಅಜೇಯ 54, 29 ಎಸೆತ, 2 ಬೌಂ, 5 ಸಿಕ್ಸರ್) ಕೊನೆಯಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು.

ಇವರಿಬ್ಬರು ನಾಲ್ಕನೇ ವಿಕೆಟ್ಗೆ 7.4 ಓವರ್ಗಳಲ್ಲಿ 105 ರನ್ಗಳನ್ನು ಸೇರಿಸಿದರು. ಆತಿಥೇಯ ತಂಡ ಕೊನೆಯ 10 ಓವರ್ಗಳಲ್ಲಿ 135 ರನ್ ಪೇರಿಸಿತು. ಇದರಿಂದ ಮೊತ್ತ 350ರ ಗಡಿ ದಾಟಿತು. 68 ರನ್ಗಳಿಗೆ ಮೂರು ವಿಕೆಟ್ ಪಡೆದ ಶಮಿ ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ಮೋಹಿತ್ 10 ಓವರ್ಗಳಲ್ಲಿ 82 ರನ್ ಬಿಟ್ಟುಕೊಟ್ಟರು.

ಸ್ಕೋರ್ ವಿವರ:
ದಕ್ಷಿಣ ಆಫ್ರಿಕಾ: 50 ಓವರ್ಗಳಲ್ಲಿ 4 ವಿಕೆಟ್ಗೆ 358
ಹಾಶಿಮ್ ಆಮ್ಲಾ ಬಿ ಮೊಹಮ್ಮದ್ ಶಮಿ 65
ಕ್ವಿಂಟನ್ ಡಿ ಕಾಕ್ ಸಿ ಮತ್ತು ಬಿ ವಿರಾಟ್ ಕೊಹ್ಲಿ 135
ಜಾಕ್ ಕಾಲಿಸ್ ಸಿ ಜಡೇಜ ಬಿ ಮೊಹಮ್ಮದ್ ಶಮಿ 10
ಎಬಿ ಡಿವಿಲಿಯರ್ಸ್ ಬಿ ಮೊಹಮ್ಮದ್ ಶಮಿ 77
ಜೆಪಿ ಡುಮಿನಿ ಔಟಾಗದೆ 59
ಡೇವಿಡ್ ಮಿಲ್ಲರ್ ಔಟಾಗದೆ 05
ಇತರೆ (ಲೆಗ್ಬೈ-2, ವೈಡ್-4, ನೋಬಾಲ್-1) 07
ವಿಕೆಟ್ ಪತನ: 1-152 (ಆಮ್ಲಾ; 29.3), 2-172 (ಕಾಲಿಸ್; 32.5), 3-247 (ಡಿ ಕಾಕ್; 41.5), 4-352 (ವಿಲಿಯರ್ಸ್; 49.3)
ಬೌಲಿಂಗ್: ಮೋಹಿತ್ ಶರ್ಮ 10-0-82-0, ಭುವನೇಶ್ವರ್ ಕುಮಾರ್ 9-0-68-0, ಮೊಹಮ್ಮದ್ ಶಮಿ 10-1-68-3, ಆರ್. ಅಶ್ವಿನ್ 10-0-58-0, ರವೀಂದ್ರ ಜಡೇಜ 8-0-58-0, ಸುರೇಶ್ ರೈನಾ 1-0-7-0, ವಿರಾಟ್ ಕೊಹ್ಲಿ 2-0-15-1 (ವಿವರ ಅಪೂರ್ಣ)

ಭಾರತ 41 ಓವರ್ಗಳಲ್ಲಿ 217
ರೋಹಿತ್ ಶರ್ಮ ರನ್ಔಟ್ (ಮಿಲ್ಲರ್) 18
ಶಿಖರ್ ಧವನ್ ಸಿ ಡಿ ಕಾಕ್ ಬಿ ಮಾರ್ನ್ ಮಾರ್ಕೆಲ್ 12
ವಿರಾಟ್ ಕೊಹ್ಲಿ ಸಿ ಜಾಕ್ ಕಾಲಿಸ್ ಬಿ ಮೆಕ್ಲಾರೆನ್ 31
ಯುವರಾಜ್ ಸಿಂಗ್ ಬಿ ಮೆಕ್ಲಾರೆನ್ 00
ಸುರೇಶ್ ರೈನಾ ರನ್ಔಟ್ (ಸ್ಟೇನ್/ಡಿ ಕಾಕ್) 14
ಎಂ.ಎಸ್.ದೋನಿ ಬಿ ಡೇಲ್ ಸ್ಟೇನ್ 65
ರವೀಂದ್ರ ಜಡೇಜ ಬಿ ಜಾಕ್ ಕಾಲಿಸ್ 29
ಆರ್.ಅಶ್ವಿನ್ ಸಿ ಡಿ ಕಾಕ್ ಬಿ ಮೆಕ್ಲಾರೆನ್ 1 9
ಭುವನೇಶ್ವರ್ ಕುಮಾರ್ ಸಿ ಜಾಕ್ ಕಾಲಿಸ್ ಬಿ ಡೇಲ್ ಸ್ಟೇನ್ 00
ಮೋಹಿತ್ ಶರ್ಮ ಔಟಾಗದೆ 00
ಮೊಹಮ್ಮದ್ ಶಮಿ ಸಿ ಆ್ಯಂಡ್ ಬಿ ಡೇಲ್ ಸ್ಟೇನ್ 00
ಇತರೆ (ಬೈ–4, ಲೆಗ್ಬೈ–1, ವೈಡ್–24) 29
ವಿಕೆಟ್ ಪತನ: 1–14 (ಧವನ್; 5.1); 2–60 (ಕೊಹ್ಲಿ; 14.4); 3–60 (ಯುವರಾಜ್; 14.6); 4–65 (ರೋಹಿತ್; 15.4); 5–108 (ರೈನಾ; 22.3); 6–158 (ಜಡೇಜ; 29.5); 7–183 (ಅಶ್ವಿನ್; 34.4); 8–190 (ಭುವನೇಶ್ವರ್; 36.2); 9–217 (ದೋನಿ; 40.2); 10–217 (ಶಮಿ; 40.6).
ಬೌಲಿಂಗ್: ಡೇಲ್ ಸ್ಟೇನ್ 8–3–25–3 (ವೈಡ್–2), ಲೊನ್ವಾಬೊ ಸೊಸೊಬೆ 9–0–52–0 (ವೈಡ್–1), ಮಾರ್ನ್ ಮಾರ್ಕೆಲ್ 8–1–29–1, ರ್ಯಾನ್ ಮೆಕ್ಲಾರೆನ್ 8–0–49–3 (ವೈಡ್–8), ವೇಯ್ನ್ ಪಾರ್ನೆಲ್ 5–0–37–0 (ವೈಡ್–6), ಜಾಕ್ ಕಾಲಿಸ್ 3–0–20–1 (ವೈಡ್–3).

ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 141 ರನ್ಗಳ ಗೆಲುವು ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.