ಭಾನುವಾರ, ಏಪ್ರಿಲ್ 18, 2021
31 °C

ದಕ್ಷಿಣ ಆಫ್ರಿಕದ ಮೇಲೆ ಅಂತರ್ರಾಷ್ಟ್ರೀಯ ನಿರ್ಬಂಧ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾನುವಾರ, 10-4-1961ದಕ್ಷಿಣ ಆಫ್ರಿಕದ ಮೇಲೆ ಅಂತರ್ರಾಷ್ಟ್ರೀಯ ನಿರ್ಬಂಧ?

ಜೋಹಾನ್ಸ್‌ಬರ್ಗ್, ಏ. 9- ಕಾಮನ್‌ವೆಲ್ತ್ ತ್ಯಜಿಸಲು ಡಾ. ವೆರ್ವೋರ್ಡ್ ಅವರು ನಿರ್ಧರಿಸಿರುವುದರಿಂದ ದಕ್ಷಿಣ ಆಫ್ರಿಕದ ಮೇಲೆ ಅಂತರ್ರಾಷ್ಟ್ರೀಯ ನಿರ್ಬಂಧ ಹೇರುವ ನಿರೀಕ್ಷೆ ಇದೆ. ದಕ್ಷಿಣ ಆಫ್ರಿಕದ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೇಳುವುದಕ್ಕಾಗಿ ವಿವಿಧ ರಾಷ್ಟ್ರಗಳಿಗೆ ದಕ್ಷಿಣ ಆಫ್ರಿಕ ಯುನೈಟೆಡ್ ಫ್ರಂಟ್ ಪ್ರತಿನಿಧಿಗಳನ್ನು ಕಳುಹಿಸಲಿದೆ.ಭಾರತದ ಅಲಿಪ್ತ ನೀತಿ ಬಗ್ಗೆ ಪಾಶ್ಚಾತ್ಯರ ಆಸಕ್ತಿ

 ‘ಭಾರತದ ಆಲಿಪ್ತ ನಿಲುವಿನ ತತ್ವ’ (PHILOSOPHY OF NON ALIGNMENT) ಅನೇಕ ಮಂದಿ ಅಮೆರಿಕನರ ಮನವಿಯನ್ನು ಆಕರ್ಷಿಸಿರುವ ತತ್ವ; ಯೂರೋಪಿನ ಹಲವು ರಾಷ್ಟ್ರಗಳ ವಿಚಾರವಂತ ಜನತೆಯಲ್ಲಿ ಪ್ರಶಂಸೆಯನ್ನು ಪ್ರೇರೇಪಿಸಿರುವ ತತ್ವ.ಇದು ನಮ್ಮ ಕನ್ನಡನಾಡಿನ ರಾಜ್ಯಪಾಲ ಶ್ರೀ ಜಯಚಾಮರಾಜ ಒಡೆಯರ್ ಅವರ ಅಭಿಪ್ರಾಯ. ಈ ಅಭಿಪ್ರಾಯಕ್ಕೆ ಸಮರ್ಥನೆಯಾಗಿ ಈ ಬಾರಿಯ ವಿದೇಶ ಪ್ರವಾಸದ ಕಾಲದಲ್ಲಿ ಶ್ರೀ ಜಯಚಾಮರಾಜರು ಅಮೆರಿಕದ ಸಾಂಸ್ಕೃತಿಕ -ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಮತ್ತು ಯುರೋಪಿನ ಕೆಲವು ರಾಷ್ಟ್ರಗಳ ಪ್ರವಾಸ ಕಾಲದಲ್ಲಿ ನೀಡಲಿರುವ ಉಪನ್ಯಾಸಗಳ ವಿಶೇಷವೇ ಇದು  ‘ಭಾರತದ ಆಲಿಪ್ತ ನಿಲುವಿನ ತತ್ವ’.ಕಮ್ಯುನಿಸ್ಟ್ ಪಕ್ಷದ ಭವಿಷ್ಯ ನೀತಿ ಬಗ್ಗೆ ನಿರ್ಧಾರ ಮುಂದಕ್ಕೆ

ಲುಮುಂಬನಗರ (ವಿಜಯವಾಡ), ಏ. 9- ಕಮ್ಯುನಿಸ್ಟ್ ಪಕ್ಷದ ಭವಿಷ್ಯ ನೀತಿ ಬಗ್ಗೆ ಸುಮಾರು 12 ಗಂಟೆಗಳ ಕಾಲ ನಡೆದ ಚರ್ಚೆ ಪೂರ್ಣವಾಗದೆ ಇದರ ಪರಿಶೀಲನೆಯನ್ನು ಮುಂದಕ್ಕೆ ತಳ್ಳಲಾಯಿತು.ರಾಜ್ಯ ವಿಧಾನಸಭೆಗೆ 125 ಕ್ಷೇತ್ರಗಳಲ್ಲಿ ಪಿ.ಎಸ್.ಪಿ. ಸ್ಪರ್ಧೆ

ಬೆಂಗಳೂರು, ಏ. 9- ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸಿರುವ ಷರತ್ತುಗಳನ್ನು ಪೂರೈಸುವ ಸುಮಾರು 125 ಕ್ಷೇತ್ರಗಳಲ್ಲಿ ರಾಜ್ಯದ ವಿಧಾನಸಭೆಗೆ ಮುಂದಿನ ಮಹಾಚುನಾವಣೆಯಲ್ಲಿ ಪಕ್ಷದ ಸ್ಪರ್ಧಿಗಳನ್ನು ನಿಲ್ಲಿಸಬೇಕೆಂದು ಶ್ರೀ ಕೆ. ಕಣ್ಣನ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪಿ.ಎಸ್.ಪಿ. ಪಾರ್ಲಿಮೆಂಟರಿ ಸಮಿತಿ ನಿರ್ಧರಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.