ಮಂಗಳವಾರ, ಏಪ್ರಿಲ್ 13, 2021
31 °C

ದರೋಡೆಕೋರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ದರೋಡೆಕೋರರನ್ನು ಬಂಧಿಸಿರುವ ಸುಬ್ರಹ್ಮಣ್ಯಪುರ ಪೊಲೀಸರು ಲಾರಿ ಸೇರಿದಂತೆ ಸುಮಾರು 61 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕ್ರಿಸ್ಟಿ ಅಲಿಯಾಸ್ ಕ್ರಿಸ್ಟಿ ಮೈಕ್ (28), ಕೃಷ್ಣ ಉರುಫ್ ಜ್ಯೋತಿಕೃಷ್ಣ (20), ಸುರೇಶ್ (24), ರವಿ (20) ಮತ್ತು ಶರತ್ (19) ಬಂಧಿತರು.ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿಗಳನ್ನು ಅಡ್ಡಗಟ್ಟುತ್ತಿದ್ದ ಆರೋಪಿಗಳು, ಚಾಲಕರನ್ನು ಕಟ್ಟಿ ಹಾಕಿ ಲಾರಿಯೊಂದಿಗೆ ಪರಾರಿಯಾಗುತ್ತಿದ್ದರು.ಅಲ್ಲದೇ ಹಣ ಮತ್ತು ಮೊಬೈಲ್ ದರೋಡೆ ಮಾಡುತ್ತಿದ್ದರು. ಅಂತೆಯೇ ಅವರು ಕನಕಪುರ ಮುಖ್ಯರಸ್ತೆಯಲ್ಲಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಡಿಸ್ಕೊಥೆಕ್ ಮೇಲೆ ದಾಳಿ

ನಗರದ ವಿವಿಧೆಡೆ ಡಿಸ್ಕೊಥೆಕ್‌ಗಳ ಮೇಲೆ ದಾಳಿ ನಡೆಸಿದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದಾರೆ.ಲಿಂಗರಾಜಪುರದ ರಾಜೇಶ್ (25), ಕುಮಾರಸ್ವಾಮಿಲೇಔಟ್‌ನ ಚಾರ್ಲ್ಸ್ (24), ಚಾಮರಾಜಪೇಟೆಯ ದಿನೇಶ (28), ದೊಮ್ಮಲೂರಿನ ಅಯ್ಯಪ್ಪ (24), ಕಾಕ್ಸ್‌ಟೌನ್‌ನ ನಂದ (27), ಜೆ.ಪಿ.ನಗರದ ಶ್ಯಾಮರಾಜ್ (52), ದಿವಾನರಪಾಳ್ಯದ ಸಿದ್ದಗುರು (30) ಮತ್ತು ವಿವೇಕನಗರದ ಗಿರಿ (27) ಬಂಧಿತರು.ಆರೋಪಿಗಳು ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ `ಲಾಂಜ್ 579~ ಹೆಸರಿನ ಬಾರ್‌ನಲ್ಲಿ ಮತ್ತು ಬ್ರಿಗೇಡ್ ರಸ್ತೆಯ `ಆಕ್ಸಿಜನ್~ ಬಾರ್‌ನಲ್ಲಿ ಡಿಸ್ಕೊಥೆಕ್ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಆ ಬಾರ್‌ಗಳ ಮೇಲೆ ದಾಳಿ ನಡೆಸಲಾಯಿತು. ಬಾರ್‌ಗಳ ಮಾಲೀಕರಾದ ಪ್ರವೀಣ್‌ಕುಮಾರ್ ಮತ್ತು ರವಿಕುಮಾರ್ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಬಂಧಿತರ ವಿರುದ್ಧ ಅಶೋಕನಗರ ಹಾಗೂ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.