ಮಂಗಳವಾರ, ಜನವರಿ 28, 2020
19 °C

ದರೋಡೆ: ಇಬ್ಬರು ಕಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಇಬ್ಬರು ಕಳ್ಳರನ್ನು ಬಂಧಿಸಿರುವ ಸ್ಥಳೀಯ ಪೊಲೀಸರು ಅವರಿಂದ ₨ 20,000 ನಗದು, 30 ಗ್ರಾಂ ಚಿನ್ನದ ಆಭರಣ ಹಾಗೂ ಆಟೋ­­ರಿಕ್ಷಾ ಒಂದನ್ನು ವಶಪಡಿಸಿ­ಕೊಂಡಿದ್ದಾರೆ.ಬೆಂಗಳೂರು ಜಯನಗರ 9ನೇ ಬ್ಲಾಕ್ ಬಳಿಯ ಕಾರ್ಪೋರೇಷನ್ ಕಾಲೊನಿಯ ವಿಜಯ್ (27) ಹಾಗೂ ಮುನಿಸ್ವಾಮಿ (45) ಬಂಧಿತರು.ಭಾನುವಾರ ಕಾಡುಗೋಡಿಯಿಂದ ಹೊಸಕೋಟೆಗೆ ಬರುತ್ತಿದ್ದ ಓಬಳ­ಹಳ್ಳಿಯ ಹನುಮಯ್ಯ ಎಂಬು­ವವರು ಇಲ್ಲಿನ ಕೆಇಬಿ ವೃತ್ತದ ಬಳಿ ಬಸ್‌ನಿಂದ ಇಳಿಯುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಅವರ ಜೇಬಿನಲ್ಲಿದ್ದ ₨ 70,000 ಹಣ­ವನ್ನು ಕಸಿದು ಅಲ್ಲೇ ನಿಂತಿದ್ದ ಆಟೋ­ರಿಕ್ಷಾ ಏರಿದರು. ತಕ್ಷಣ ಆಟೋರಿಕ್ಷಾ ಸಂಖ್ಯೆ ದಾಖಲಿಸಿಕೊಂಡ ಹನುಮಯ್ಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.ಕಾರ್ಯಪ್ರವೃತ್ತರಾದ ಪೊಲೀಸರು ಬೆಂಗಳೂರು ರಸ್ತೆಯಲ್ಲಿ ಆಟೋವನ್ನು ವಶಪಡಿಸಿಕೊಂಡು ಅದರಲ್ಲಿದ್ದ ಇಬ್ಬ­ರನ್ನು ಹಿಡಿಯುವಲ್ಲಿ ಸಫಲ­ರಾದರು. ಆರೋಪಿ­ಗಳ ಬಂಧನ­ದಿಂದ ಕಳೆದ ತಿಂಗಳು ಹೊಸಕೋಟೆ ಬಳಿ ನಡೆದ ಮತ್ತೊಂದು ಪ್ರಕರಣ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಇನ್ನಿಬ್ಬರು ಆರೋಪಿಗಳು ತಲೆ ಮರೆಸಿ­ಕೊಂಡಿದ್ದು ಶೋಧ ಕಾರ್ಯ ನಡೆದಿದೆ.ಶವ ಪತ್ತೆ: ಆವಲಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮಂಡೂರು ಗ್ರಾಮದ ಬಳಿಯ ಕುಂಟೆಯಲ್ಲಿ ವ್ಯಕ್ತಿಯೊಬ್ಬರ ಶವ ಬುಧವಾರ ಪತ್ತೆ­ಯಾಗಿದೆ. ಮೃತ­ರನ್ನು ಮಂಡೂರು ಗ್ರಾಮದ ನಾಗೇಶ (38) ಎಂದು ಗುರುತಿಸಲಾಗಿದೆ. ಟೆಂಪೊ ಒಂದನ್ನು ಬಾಡಿಗೆಗೆ ಓಡಿಸುತ್ತಿದ್ದ ಅವರು ಭಾನುವಾರದಿಂದ ಕಾಣೆಯಾ­ಗಿ­ದ್ದರು. ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)