ಮಂಗಳವಾರ, ಜನವರಿ 28, 2020
22 °C

ದರ್ಶನ್ ಹೊಸಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಗಜ~ ಚಿತ್ರ ನಿರ್ಮಿಸಿದ್ದ ನಿರ್ಮಾಪಕ ಡಿ.ಸುರೇಶ್ ಗೌಡ ಮತ್ತು ಪಿ.ಎಸ್. ಶ್ರಿನಿವಾಸಮೂರ್ತಿ ದರ್ಶನ್ ನಾಯಕರಾಗಿರುವ ಚಿತ್ರ ನಿರ್ಮಿಸಲಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಫೆ.16 ರಂದು ಸಿನಿಮಾ ಸೆಟ್ ಏರಲಿದೆ. ಕೆ. ಮಾದೇಶ್ ಈ ಚಿತ್ರದ ನಿರ್ದೇಶಕರು. ಹರಿಕೃಷ್ಣ ಸಂಗೀತ ಈ ಚಿತ್ರಕ್ಕೆ ಇದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಭರದಿಂದ ಸಾಗಿದೆ.ಪ್ರಥಮ ಹಂತ ಮುಗಿಸಿದ `ರ‌್ಯಾಸ್ಕಲ್~


ಜೈ ಜಗದೀಶ್ ಹಾಗೂ ವಿಜಯಲಕ್ಷ್ಮೀ ಸಿಂಗ್ ನಿರ್ಮಿಸುತ್ತಿರುವ `ರ‌್ಯಾಸ್ಕಲ್~ ಚಿತ್ರದ ಪ್ರಥಮ ಹಂತದ ಚಿತ್ರೀಕರಣವು ಮುಕ್ತಾಯಗೊಂಡಿತು. 15 ದಿವಸ ನಡೆದ ಚಿತ್ರದ ಚಿತ್ರೀಕರಣದಲ್ಲಿ ಆದಿತ್ಯ, ನವನಟಿ ಪಲ್ಲವಿ, ಶೋಭರಾಜ್, ಸುಧಾಕರ್ ಮತ್ತಿತರರು ಭಾಗವಹಿಸಿದ ಹಲವಾರು ಸನ್ನಿವೇಶಗಳನ್ನು ಬೆಂಗಳೂರು ಸುತ್ತಮುತ್ತ ವಂಶಿ ಛಾಯಾಗ್ರಹಣದಲ್ಲಿ ನಿರ್ದೇಶಕ ಮಾದೇಶ್ ಚಿತ್ರಿಸಿಕೊಂಡರು. ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಜನವರಿ ಮಧ್ಯ ಭಾಗದಲ್ಲಿ ಆರಂಭವಾಗಲಿದೆ.ಚಿತ್ರಕ್ಕೆ ರಮಣಿ ಕಥೆ, ಎಂ.ಎಸ್. ರಮೇಶ್ ಸಂಭಾಷಣೆ, ಈಶ್ವರಿಕುಮಾರ್ ಕಲೆ, ರವಿವರ್ಮ ಸಾಹಸ, ಪಿ.ಎಸ್. ಕುಮಾರ್ ಸಂಕಲನ, ರುದ್ರೇಶ್ ನಿರ್ದೇಶನ ಸಹಕಾರ, ಮೂರ್ತಿ ನಿರ್ಮಾಣ ನಿರ್ವಹಣೆ ಇದ್ದು, ಮಾದೇಶ್ ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.ತಾರಾಗಣದಲ್ಲಿ ಆದಿತ್ಯ, ರಂಗಾಯಣ ರಘು, ಶೋಭರಾಜ್, ಸಾಧುಕೋಕಿಲ, ಪ್ರತಾಪ್, ಸುನೀಲ್ ಮುಂತಾದವರಿದ್ದಾರೆ. ಪಲ್ಲವಿ ಎಂಬ ಹೊಸ ಹುಡುಗಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಪ್ರತಿಕ್ರಿಯಿಸಿ (+)