ಸೋಮವಾರ, ಮೇ 17, 2021
22 °C

ದರ್ಶನ- ದರ್ಪಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ತೆರೆಸುವ ಲೇಖನ

ಮೋಹನ್ ಕುಮಾರ್ ಅವರ `ಮನವೊಲಿಕೆ ಮಂತ್ರ ; ಕೆರೆ ಉಳಿಸುವ ತಂತ್ರ~ ಲೇಖನದ ಹಿಂದಿನ ಸತ್ಯವನ್ನು ಅರಿತು ಪ್ರತಿಯೊಬ್ಬರೂ ಸಕಲ ಜೀವರಾಶಿಗಳ ಆಧಾರವಾದ ನೀರಿನ ಸಂರಕ್ಷಣೆಗೆ ಟೊಂಕಕಟ್ಟಿ ನಿಲ್ಲಬೇಕು.

 

ಊರಿಗೊಂದು ಕೆರೆ, ನೀರಿಗಿಲ್ಲ ಬರ ಎಂಬ ಮಾತಿನಂತೆ ಪ್ರತಿಯೊಂದು ಕೆರೆಗಳ ಉಳಿವಿಗೆ ಕಾರಣರಾಗಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಕಡೆಗೆ ಗಮನ ಹರಿಸಬೇಕು. ಮುಖ್ಯವಾಗಿ  ಪ್ರಜ್ಞಾವಂತ ಯುವಕರು ಈ ಕಾರ್ಯಕ್ಕೆ ಮುಂದಾಗಬೇಕು. ಒಟ್ಟಾರೆ ಇದು ಕಣ್ತೆರೆಸುವ ಲೇಖನ.

 -ನಾಗೇಶ್ ಕಾರ್ಯ,ನಂಜನಗೂಡುಮಾದರಿ ಅಧಿಕಾರಿ

ಸರ್ಕಾರಿ ಅಧಿಕಾರಿಗೆ ಕೆಲಸದಲ್ಲಿ ಬದ್ಧತೆ, ಅರ್ಪಣಾ ಮನೋಭಾವ ಹಾಗೂ ಆತ್ಮವಿಶ್ವಾಸವಿದ್ದಲ್ಲಿ ಏನೆಲ್ಲಾ ಸಾಧನೆ ಮಾಡಬಹುದು ಎಂಬುದಕ್ಕೆ ಡಾ. ಉದಯ್‌ಕುಮಾರ್ ಶೆಟ್ಟಿಯವರೇ ಸಾಕ್ಷಿ. ಅವರ ಕಾರ್ಯತತ್ಪರತೆಗೆ ಅಭಿನಂದನೆಗಳು.

 -ಪಿ.ಎ.ಸುಧೀಂದ್ರ, ಬೆಂಗಳೂರು.ಉತ್ತಮ ನಿದರ್ಶನ


ಮಾ. 27ರಂದು ಪ್ರಕಟವಾದ `ಮನವೊಲಿಕೆ ಮಂತ್ರ; ಕೆರೆ ಉಳಿಸುವ ತಂತ್ರ~ ಗಮನ ಸೆಳೆಯಿತು. ರೈತರು ಸ್ವಯಂ ಪ್ರೇರಣೆಯಿಂದ `ಕೆರೆಯ ಉಳಿವಿಗಾಗಿ ಭೂಮಿ ಬಿಟ್ಟುಕೊಟ್ಟಿರುವುದು ಸಂತೋಷದ ಸಂಗತಿ. ಕೆರೆಗಳನ್ನು ಮುಚ್ಚಿ ಪರಿಸರ ಹಾಗೂ ಅಂತರ್ಜಲ ನಾಶ ಮಾಡುವವರಿಗೆ ಇದೊಂದು ಅನುಕರಣೀಯ. ಇಂತಹ ಲೇಖನಗಳು ಹೆಚ್ಚು ಪ್ರಕಟಗೊಳ್ಳಲಿ.

 -ಅನಾರ್ಕಲಿ ಸಲೀಂ ಚಿಣ್ಯ, ಶ್ರೀರಂಗಪಟ್ಟಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.