ರಿಯೊ ಡಿ ಜನೈರೊ (ಎಪಿ):  ಅಮೆರಿಕದ ಮೈಕಲ್ ಫೆಲ್ಪ್ಸ್ ಒಲಿಂಪಿಕ್ಸ್ನಲ್ಲಿ 23 ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದಾರೆ.

ಶನಿವಾರ ರಾತ್ರಿ ನಡೆದ 4X100 ಮೀಟರ್ಸ್ ಮೆಡ್ಲೆ ರಿಲೇ ತಂಡ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಫೆಲ್ಪ್ಸ್ ಈ ಕೀರ್ತಿಗೆ ಪಾತ್ರರಾದರು.
ಒಲಿಂಪಿಕ್ಸ್ನಲ್ಲಿ ಫೆಲ್ಪ್ಸ್ ಗೆದ್ದ ಒಟ್ಟಾರೆ 28ನೇ ಪದಕ ಇದಾಗಿದೆ. ಇದರಲ್ಲಿ ಮೂರು ಬೆಳ್ಳಿ ಮತ್ತು ಎರಡು ಕಂಚು ಸೇರಿದೆ.

ರಿಯೊದಲ್ಲಿ ಅಮೆರಿಕದ ‘ಚಿನ್ನದ ಮೀನು’ ಫೆಲ್ಪ್ಸ್ ಗೆದ್ದ ಐದನೇ ಚಿನ್ನ ಇದು. ಇದು ಫೆಲ್ಪ್ಸ್ ಅವರ ಕೊನೆಯ ಒಲಿಂಪಿಕ್ಸ್ ಆಗಿದ್ದ ಕಾರಣ 4X100 ಮೀಟರ್ಸ್ ಮೆಡ್ಲೆ ರಿಲೇ ಸ್ಪರ್ಧೆಯನ್ನು ನೋಡಲು ಅಮೆರಿಕದ ಎಲ್ಲಾ ಈಜು ಪಟುಗಳು ಕ್ರೀಡಾಂಗಣದಲ್ಲಿ ನೆರೆದಿ ದ್ದರು. ಫೆಲ್ಪ್ಸ್ ಅವರ ಪತ್ನಿ ನಿಕೊಲೆ ಜಾನ್ಸನ್ ತಮ್ಮ ಮಗು ಬೂಮರ್ ಜೊತೆ ಕ್ರೀಡಾಂಗಣದಲ್ಲಿ ಹಾಜರಿದ್ದರು.

ತಮ್ಮನ್ನು ಬೆಂಬಲಿಸಲು ಸೇರಿದ್ದ ವರಿಗೆ ಫೆಲ್ಪ್ಸ್, ರ್ಯಾನ್ ಮರ್ಫಿ, ಕೋಡಿ ಮಿಲ್ಲರ್ ಮತ್ತು ನಥಾನ್ ಆಡ್ರಿಯನ್ ಅವರಿದ್ದ ತಂಡ ನಿರಾಸೆ ಮಾಡಲಿಲ್ಲ. ಇವರು 3ನಿಮಿಷ 27.95 ಸೆಕೆಂಡುಗಳಲ್ಲಿ ಗುರಿ ಸೇರಿ ಒಲಿಂಪಿಕ್ಸ್ ದಾಖಲೆ ನಿರ್ಮಿಸಿದರು. ಬ್ಯಾಕ್ಸ್ಟ್ರೋಕ್ ವಿಭಾಗದಲ್ಲಿ ಭಾಗವಹಿಸಿದ್ದ ಮರ್ಫಿ ದಾಖಲೆಯ ಸಮಯದಲ್ಲಿ ಗುರಿ ಮುಟ್ಟಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಆದರೆ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಬ್ರಿಟನ್ನ ಆ್ಯಡಮ್ ಪೀಟಿ ಮೊದ ಲಿಗರಾಗಿ ಗುರಿ ಸೇರಿದರು. ಹೀಗಾಗಿ ಬಟರ್ಫ್ಲೈ ವಿಭಾಗದಲ್ಲಿ ಸ್ಪರ್ಧಿಸಿದ್ದ ಫೆಲ್ಪ್ಸ್ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಮೊದಲ ಲ್ಯಾಪ್ನಲ್ಲಿ ಫೆಲ್ಪ್ಸ್ ಹಿನ್ನಡೆ ಅನುಭವಿಸಿದ್ದರು. ಆದರೆ ಎರಡನೇ ಲ್ಯಾಪ್ನ ವೇಳೆ ಮಿಂಚಿನ ಗತಿಯಲ್ಲಿ ಮುನ್ನುಗ್ಗಿದ ಅವರು ಬ್ರಿಟನ್ನ ಜೇಮ್ಸ್ ಗಯ್ ಅವರನ್ನು ಹಿಂದಿಕ್ಕಿದರು.

ಫ್ರೀಸ್ಟೈಲ್ನಲ್ಲಿ ನಥಾನ್ ಆ್ಯಡ್ರಿ ಯನ್ ಮೊದಲಿಗರಾಗಿ ಗುರಿ ಮುಟ್ಟುತ್ತಿ ದ್ದಂತೆ ಖುಷಿಯ ಅಲೆ ಎದ್ದಿತು.

ಮಹಿಳಾ ತಂಡಕ್ಕೂ ಚಿನ್ನ: ಮಹಿಳಾ ವಿಭಾಗದ 4X100 ಮೀಟರ್ಸ್ ಮೆಡ್ಲೆ ರಿಲೇ ಸ್ಪರ್ಧೆಯಲ್ಲೂ ಅಮೆರಿಕ ತಂಡ ಚಿನ್ನ ಗೆದ್ದಿತು.

ಕ್ಯಾಥಲೀನ್ ಬೇಕರ್, ಲಿಲಿ ಕಿಂಗ್, ಡಾನ ವೊಲ್ಮರ್ ಮತ್ತು ಸಿಮೊನ್ ಮ್ಯಾನುಯೆಲ್ ಅವರಿದ್ದ ತಂಡ 3 ನಿಮಿಷ 53.13 ಸೆಕೆಂಡುಗಳಲ್ಲಿ ಗುರಿ ತಲುಪಿತು. ಅಮೆರಿಕ ಒಲಿಂಪಿಕ್ಸ್ನಲ್ಲಿ ಗೆದ್ದ 1,000ನೇ ಚಿನ್ನ ಇದಾಗಿದೆ.

ಕಾನ್ನರ್ಗೆ ಬೆಳ್ಳಿ: ಪುರುಷರ 1500 ಮೀಟರ್ಸ್ ಫ್ರೀಸ್ಟೈಲ್ನಲ್ಲಿ ಅಮೆರಿಕದ ಕಾನ್ನರ್ ಜಾಯೆಗರ್ ಬೆಳ್ಳಿ ಜಯಿಸಿದರು. ಈ ಬಾರಿ ಅಮೆರಿಕ ಈಜು ವಿಭಾಗದಲ್ಲಿ ಗೆದ್ದ 33ನೇ ಪದಕ ಇದಾಗಿದೆ. 2000 ರಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಕೂಟದಲ್ಲೂ ತಂಡ ಇಷ್ಟೇ ಪದಕಗಳನ್ನು ಗೆದ್ದಿತ್ತು.

ಬ್ಲೂಮ್ ಸಾಧನೆ: ಮಹಿಳೆಯರ 50 ಮೀಟರ್ಸ್ ಫ್ರೀಸ್ಟೈಲ್ನಲ್ಲಿ ಡೆನ್ಮಾರ್ಕ್ನ ಪರ್ನಿಲ್ಲೆ ಬ್ಲೂಮ್ ಚಿನ್ನ ಗೆದ್ದರು.

ಮುಖ್ಯಾಂಶಗಳು
* ಒಲಿಂಪಿಕ್ಸ್ನಲ್ಲಿ ಫೆಲ್ಪ್ಸ್ ಒಟ್ಟು 28 ಪದಕ ಗೆದ್ದ ಸಾಧನೆ ಮಾಡಿದ್ದಾರೆ
* ಒಲಿಂಪಿಕ್ಸ್ನಲ್ಲಿ ಒಟ್ಟು 1000 ಚಿನ್ನ ಗೆದ್ದಅಮೆರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.