ಕೂಲ್ ಕೂಲ್ ಲಸ್ಸಿ
ಉತ್ತಮ ತ್ರಾಣಿಕ ಹಾಗೂ ದಾಹ ನಿವಾರಕವಾದ ಮೊಸರು ದೇಹಕ್ಕೆ ತಂಪನ್ನು ನೀಡಿ ನಿಶ್ಯಕ್ತಿ ಕಳೆದು ಚೈತನ್ಯ ತುಂಬುವ ಅಮೃತ. ಬೇಸಿಗೆಯಲ್ಲಿ ಇದರ ಸೇವನೆಯಿಂದ ಮೂತ್ರಾಂಗ ಸಂಬಂಧ ರೋಗ ಗುಣವಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಹಲವು ತರಕಾರಿ, ಹಣ್ಣುಗಳನ್ನು ಉಪಯೋಗಿಸಿ ಮೊಸರಿನಿಂದ ಮಾಡಿದ ವಿವಿಧ ಲಸ್ಸಿಗಳು ನಿಮಗಾಗಿ ಇಲ್ಲಿವೆ.
- ಗೀತಸದಾ ಮೋಂತಿಮಾರು

ದಾಳಿಂಬೆ ವಿದ್ ಕ್ಯಾರೆಟ್ ಲಸ್ಸಿ
ಬೇಕಾಗುವ ಪದಾರ್ಥ: ದಾಳಿಂಬೆ ಬೀಜ ಐದು ಚಮಚ, ಪುದೀನ ಒಂದು ಚಮಚ, ಕ್ಯಾರೆಟ್ತುರಿ ಮೂರು ಚಮಚ, ಜೇನುತುಪ್ಪ ಎರಡು ಚಮಚ, ಮೊಸರು ಒಂದುಕಪ್, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಮೊಸರಿನ ಜೊತೆ ದಾಳಿಂಬೆ, ಕ್ಯಾರೆಟ್ತುರಿ, ಪುದಿನ, ಉಪ್ಪು ಮತ್ತು ಬೇಕಾದಷ್ಟು ಐಸ್ಫೀಸ್ ಸೇರಿಸಿ ಮಿಕ್ಸಿ ಜಾರಿಗೆ ಹಾಕಿ ರುಬ್ಬಿ ಚೆನ್ನಾಗಿ ನೊರೆ ಬರಿಸಿ. ಸರ್ವಿಂಗ್ ಕಪ್ಗೆ ಹಾಕಿ ಒಂದು ಚಮಚ ಜೇನುತುಪ್ಪ ಸೇರಿಸಿ ಸವಿಯಲು ಕೊಡಿ. ಕಬ್ಬಿಣಾಂಶದಿಂದ ಕೂಡಿದ ಈ ಲಸ್ಸಿಯ ಸೇವನೆ ರಕ್ತಹೀನತೆಗೆ ಉತ್ತಮ ಪರಿಹಾರ.

ಬೀಟ್ರೂಟ್ ಲಸ್ಸಿ
ಪದಾರ್ಥ: ಬೀಟ್ರೂಟ್ತುರಿ ನಾಲ್ಕು ಚಮಚ, ಮೊಸರು ಒಂದು ಕಪ್, ಖರ್ಜೂರ ಎರಡು, ಶುಂಠಿ ಅರ್ಧ ಇಂಚು, ತಂಪಿನ ಬೀಜ ಒಂದು ಚಮಚ, ಬ್ಲಾಕ್ ಸಾಲ್ಟ್ ಒಂದು ಚಮಚ.

ವಿಧಾನ: ತಂಪಾದ ಮೊಸರಿಗೆ ಬೇಕಷ್ಟು ನೀರು ಸೇರಿಸಿ ಬೀಟ್ರೂಟ್ತುರಿ, ಶುಂಠಿ, ಖರ್ಜೂರ ಸೇರಿಸಿ ನುಣ್ಣಗೆ ರುಬ್ಬಿ ನೊರೆ ಬರಿಸಿ. ಸರ್ವಿಂಗ್ ಕಪ್ಗೆ ಹಾಕಿ ಮೇಲಿನಿಂದ ತಂಪಿನ ಬೀಜ ಹಾಗೂ ಬ್ಲಾಕ್ಸಾಲ್ಟ್ ಸೇರಿಸಿ ನೀಡಿ.

ಬೂದುಗುಂಬಳ ಲಸ್ಸಿ
ಸಾಮಗ್ರಿ: ಮೊಳಕೆ ಕಟ್ಟಿದ ಹೆಸರುಕಾಳು ಎರಡು ಚಮಚ, ಬೂದುಕುಂಬಳ ತುರಿ ನಾಲ್ಕು ಚಮಚ, ಮೊಸರು ಒಂದು ಕಪ್, ವೈಟ್ಪೆಪ್ಪರ್ ಒಂದು ಚಮಚ, ಜಲ್ಜೀರಪುಡಿ ಎರಡು ಚಮಚ, ಉಪ್ಪು ರುಚಿಗೆ.

ವಿಧಾನ: ಮೇಲಿನ ಎಲ್ಲಾ ಸಾಮಗ್ರಿಗಳನ್ನು ಮಿಕ್ಸಿ ಜಾರಿಗೆ ಐಸ್ಪೀಸ್ ಜೊತೆ ಹಾಕಿ ರುಬ್ಬಿ. ನಂತರ ಇದನ್ನು ಸರ್ವಿಂಗ್ ಕಪ್ಗೆ ಹಾಕಿ ಮೇಲಿನಿಂದ ವೈಟ್ಪೆಪ್ಪರ್ ಹಾಗೂ ಪುದಿನ ಸೇರಿಸಿ ಸವಿಯಲು ಕೊಡಿ. ಈ ಲಸ್ಸಿಯ ಸೇವನೆಯಿಂದ ಉರಿಮೂತ್ರ ಶಮನವಾಗುತ್ತದೆ.

ನೀರುಸೌತೆ ಲಸ್ಸಿ
ಪದಾರ್ಥ: ಹೆಚ್ಚಿದ ನೀರು ಸೌತೆ ಹೋಳುಗಳು ಅರ್ಧಕಪ್, ಹೆಚ್ಚಿದ ಈರುಳ್ಳಿ ನಾಲ್ಕು ಚಮಚ, ಮೊಸರು ಒಂದುಕಪ್, ಸಕ್ಕರೆ ಒಂದು ಚಮಚ, ಕೊತ್ತಂಬರಿ ಸೊಪ್ಪು ಸುವಾಸನೆಗೆ, ಉಪ್ಪು ರುಚಿಗೆ, ಕಾಳುಮೆಣಸಿನ ಪುಡಿ ಒಂದು ಚಮಚ, ಲಿಂಬೆರಸ ಒಂದು ಚಮಚ.

ವಿಧಾನ: ಮೇಲಿನ ಎಲ್ಲಾ ಸಾಮಗ್ರಿಗಳನ್ನು ತಣ್ಣನೆಯ ನೀರು ಸೇರಿಸಿ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿ. ನಂತರ ಇದನ್ನು ಸರ್ವಿಂಗ್ ಕಪ್ಗೆ ಹಾಕಿ ಲಿಂಬೆ ರಸ ಸೇರಿಸಿ ಸವಿಯಲು ಕೊಡಿ. ದೇಹವನ್ನು ತಂಪು ಮಾಡುವ ಈ ಲಸ್ಸಿಯ ಸೇವನೆಯಿಂದ ಉಷ್ಣದ ಹಲವು ತೊಂದರೆಗಳು ಶಮನವಾಗುತ್ತವೆ.

ಸೋರೆಕಾಯಿ ಜ್ಯೂಸ್
ಪದಾರ್ಥ: ಒಂದು ಬಟ್ಟಲು ಸೋರೆಕಾಯಿ ಹೋಳುಗಳು, ಒಂದು ಬಟ್ಟಲು ಬೆಲ್ಲದ ಪುಡಿ, ಒಂದು ಚಿಟಿಕೆ ಕರಿಮೆಣಸು ಪುಡಿ, ಒಂದು ಚಿಟಿಕೆ ಶುಂಠಿ ಪುಡಿ, ಎರಡು ಚಮಚ ನಿಂಬೆರಸ, ನಾಲ್ಕು ಬಟ್ಟಲು ನೀರು.

ವಿಧಾನ: ನೀರಿನೊಂದಿಗೆ ಎಲ್ಲವನ್ನು ಸೇರಿಸಿ ರುಬ್ಬಿ ಶೋಧಿಸಿ ತಣ್ಣಗೆ ಮಾಡಿ ಕುಡಿಯಿರಿ. ಇದು ಬಾಯಾರಿಕೆಯನ್ನು ಕಡಿಮೆಮಾಡಿ ಆಯಾಸವನ್ನು ಶಮನಗೊಳಿಸುವುದರ ಜೊತೆಗೆ ದೇಹದ ತೂಕವನ್ನೂ ಕಡಿಮೆ ಮಾಡುತ್ತದೆ.

ಸಬ್ಬಕ್ಕಿ ಜ್ಯೂಸ್
ಪದಾರ್ಥ: ಕಾಲು ಬಟ್ಟಲು ಸಬ್ಬಕ್ಕಿ, ಒಂದು ಬಟ್ಟಲು ಹಾಲು, ಎರಡು ಚಮಚ ಸಕ್ಕರೆ, ಒಂದು ಚಿಟಿಕೆ ಏಲಕ್ಕಿ ಪುಡಿ, ನಾಲ್ಕು ಬಟ್ಟಲು ನೀರು.

ವಿಧಾನ: ಸಬ್ಬಕ್ಕಿಯನ್ನು ಒಂದು ಗಂಟೆ ನೀರಿನೊಂದಿಗೆ ನೆನಸಿ ಕುಕ್ಕರಿನಲ್ಲಿ ಬೇಯಿಸಿ. ಅರಿದನಂತರ ಹಾಲು, ನೀರು ಸಕ್ಕರೆ ಬೆರಸಿ ರುಬ್ಬಿ. ಅದಕ್ಕೆ ಏಲಕ್ಕಿ ಪುಡಿ ಬೆರಸಿ ತಣ್ಣಗೆ ಮಾಡಿ ಕುಡಿಯಿರಿ.

ಕೂಲ್ ಕಲ್ಲಂಗಡಿ
ಪದಾರ್ಥ: ನಾಲ್ಕು ಬಟ್ಟಲು ಕಲ್ಲಂಗಡಿ ಹಣ್ಣಿನ ಹೋಳುಗಳು, ಎರಡು ಬಟ್ಟಲು ನೀರು, ಒಂದು ಬಟ್ಟಲು ಕಲ್ಲುಸಕ್ಕರೆ ಪುಡಿ, ಒಂದು ಚಿಟಿಕೆ ಉಪ್ಪು, ಒಂದು ಚಿಟಿಕೆ ಕರಿಮೆಣಸು ಪುಡಿ, ಒಂದು ಇಂಚು ಶುಂಠಿ, ಒಂದು ಚಮಚ ನಿಂಬೆರಸ.

ವಿಧಾನ: ಕಲ್ಲಂಗಡಿ, ಶುಂಠಿಯನ್ನು ರುಬ್ಬಿ ಶೋಧಿಸಿ. ಇದಕ್ಕೆ ಕಲ್ಲುಸಕ್ಕರೆ ಪುಡಿ, ಚಿಟಿಕೆ ಉಪ್ಪು, ಚಿಟಿಕೆ ಮೆಣಸುಪುಡಿ, ನಿಂಬೆರಸ ಬೆರೆಸಿ ಸವಿಯಿರಿ.

ದೇಹ ತಂಪಾಗಲು...
ಬೇಸಿಗೆಯ ಧಗೆಯಿಂದ ದೇಹ ತಂಪಾಗಿಸಲು ಮನೆಯಲ್ಲಿಯೇ ತಯಾರಿಸುವ ಕೆಲವೊಂದು ಪಾನೀಯಗಳು ಇಲ್ಲಿವೆ...
- ಸವಿತಾ ರಮಾನಂದ

ಹೆಸರು ಕಾಳಿನ ಜ್ಯೂಸ್
ಪದಾರ್ಥ: ಒಂದು ಕಪ್ ಹೆಸರು ಕಾಳು, ಅರ್ಧ ಕಪ್ ಬೆಲ್ಲದ ತುರಿ, ಏಲಕ್ಕಿ ತುರಿ, ಏಲಕ್ಕಿ ಬೀಜ ನಾಲ್ಕು.

ಮಾಡುವ ವಿಧಾನ: ಹೆಸರು ಕಾಳನ್ನು ಐದು ಘಂಟೆ ನೀರಿನಲ್ಲಿ ನೆನಸಿಡಬೇಕು. ನಂತರ ಬೆಲ್ಲದ ತುರಿ ಮತ್ತು ಏಲಕ್ಕಿ ಬೀಜದ ಜೊತೆ ಮಿಕ್ಸಿಯಲ್ಲಿ ರುಬ್ಬಬೇಕು, ಬೇಕಾಗುವಷ್ಟು ನೀರನ್ನು ಸೇರಿಸಿದರೆ ಹೆಸರುಕಾಳಿನ ಜ್ಯೂಸ್ ರೆಡಿ. ಹೆಸರುಕಾಳು ದೇಹವನ್ನು ತಂಪಾಗಿಸುತ್ತದೆ, ಪಚನಕ್ರಿಯೆಗೂ ಸಹಕಾರಿ.

ಕ್ಯಾರೆಟ್ ಜ್ಯೂಸ್
ಪದಾರ್ಥ: ಒಂದು ಕಪ್ ಕ್ಯಾರೆಟ್ ತುರಿ, ಅರ್ಧ ಕಪ್ ಹಾಲು, ಮುಕ್ಕಾಲು ಕಪ್ ಸಕ್ಕರೆ, ಏಲಕ್ಕಿ ಬೀಜ ನಾಲ್ಕು.

ಮಾಡುವ ವಿಧಾನ: ಕ್ಯಾರೆಟ್ ತುರಿಯನ್ನು ಹಾಲಿನೊಡನೆ ಬೆರೆಸಿಕೂಳ್ಳಬೇಕು. ತಣ್ಣಗಾದ ನಂತರ ಏಲಕ್ಕಿ ಬೀಜ ಸೇರಿಸಿ ಮಿಕ್ಸಿಯಲ್ಲಿ ರುಬ್ಬಬೇಕು. ನಂತರ ಬೇಕಾಗುವಷ್ಟು ನೀರನ್ನು ಸೇರಿಸಬೇಕು. ಕ್ಯಾರೆಟ್ ಸೇವನೆಯಿಂದ ಆರೋಗ್ಯ ರಕ್ಷಣೆಯ ಜೊತೆಗೆ ಸೌಂದರ್ಯ ವೃದ್ಧಿಯಾಗುತ್ತದೆ.

ಅಂಜೂರದ ಹಣ್ಣಿನ ಜ್ಯೂಸ್
ಪದಾರ್ಥ: ಒಂದು ಕಪ್ ಅಂಜೂರದ ಹೋಳು, ಅರ್ಧ ಕಪ್ ಸಕ್ಕರೆ.

ಮಾಡುವ ವಿಧಾನ: ಅಂಜೂರದ ಹೋಳುಗಳನ್ನು ಸಕ್ಕರೆಯೊಡನೆ ಮಿಕ್ಸಿಯಲ್ಲಿ ಸ್ವಲ್ಪ ನೀರು ಹಾಕಿ ರುಬ್ಬಬೇಕು. ರುಬ್ಬಿದ ನಂತರ ದಪ್ಪ ಆಗುವುದರಿಂದ ಸ್ವಲ್ಪ ಹೆಚ್ಚಿಗೆ ನೀರು ಸೇರಿಸಬಹುದು, ಬೇಕಾದರೆ ಸ್ವಲ್ಪ ಹಾಲು ಸೇರಿಸಬಹುದು. ಅಂಜೂರದಲ್ಲಿ ರಕ್ತವನ್ನು ವೃದ್ಧಿಸುವ ಗುಣವಿದೆ ಮತ್ತು ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.