ಶುಕ್ರವಾರ, ಮೇ 7, 2021
27 °C

ದಿನೇಶ್ ಅಮಿನ್ ಮಟ್ಟು ಅವರಿಗೆ ಪಾಂಡೇಶ್ವರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಅವನಿ ರಸಿಕರ ರಂಗ ವೇದಿಕೆ ಹಾಗೂ ಗಣಪತ್ ರಾವ್‌ಪಾಂಡೇಶ್ವರ ಪ್ರತಿಷ್ಠಾನ ನೀಡುವ ಜಿ.ಆರ್.ಪಾಂಡೇಶ್ವರ ಪ್ರಶಸ್ತಿಗೆ `ಪ್ರಜಾವಾಣಿ~ ಪತ್ರಿಕೆಯ ಸಹಾಯಕ ಸಂಪಾದಕ ದಿನೇಶ್ ಅಮಿನ್ ಮಟ್ಟು ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 5000 ರೂಪಾಯಿ ನಗದು, ಫಲಕ ಒಳಗೊಂಡಿದೆ.2010 ನೇ ಸಾಲಿನ ಪ್ರಶಸ್ತಿಗೆ ದಿನೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ 23 ರಂದು ಬೆಳಿಗ್ಗೆ 11ಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಭಾಭವನದಲ್ಲಿ ನಡೆಯಲಿದೆ. ಪ್ರೊ. ಎಂ.ಗಂಗಾಧರಪ್ಪ ಅಧ್ಯಕ್ಷತೆ ವಹಿಸುವರು. ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿ ಪ್ರದಾನ ಮಾಡುವರು ಎಂದು ಅವನಿ ರಸಿಕರ ರಂಗ ವೇದಿಕೆಯ ಕಾರ್ಯಾಧ್ಯಕ್ಷ ಎನ್.ಪಿ.ಭಟ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.