ಶುಕ್ರವಾರ, ಮೇ 7, 2021
27 °C

ದೀಪಸ್ತಂಭ ರಕ್ಷಣೆ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಕರ್ನಾಟಕ ಇತಿಹಾಸ ಅಕಾಡೆಮಿ ಹಮ್ಮಿಕೊಂಡಿರುವ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಅಂಗವಾಗಿ ಸ್ಥಳೀಯ ಬಿಎಲ್‌ಡಿಇಎ ಕಾಲೇಜಿನ ಎನ್‌ಎಸ್‌ಎಸ್ ಘಟಕ ಹಾಗೂ ಪರಂಪರೆ ಕೂಟ ಇವರ ಸಹಯೋಗದಲ್ಲಿ ಇಲ್ಲಿನ ರಾಮತೀರ್ಥ ಅರಮನೆಯ ಆವರಣದಲ್ಲಿರುವ ರಾಮೇಶ್ವರ ದೇವಸ್ಥಾನದ ಐತಿಹಾಸಿಕ ದೀಪಸ್ತಂಭ ರಕ್ಷಣೆ ಅಭಿಯಾನ ನಡೆಸಿದರು.ದೀಪಸ್ತಂಭದ ಮೇಲೆ ಬೆಳೆದ ಗಿಡಗಳನ್ನು ಎನ್‌ಎಸ್‌ಎಸ್ ಸ್ವಯಂ ಸೇವಕರು ಕಿತ್ತು ತೆಗೆದರು. ಬೇರುಗಳು ಮತ್ತೆ ಚಿಗುರದಂತೆ ಬೇರುಗಳ ಮೇಲೆ ಅಸಿಡ್ ಹಾಕಿದರು. ರಾಮೇಶ್ವರ ದೇವಸ್ಥಾನದ ಆವರಣ ಮತ್ತು ದೀಪಸ್ತಂಭದ ಸುತ್ತಲೂ ಸ್ವಚ್ಛತಾ ಅಭಿಯಾನ ಕೈಕೊಂಡರು.ಐತಿಹಾಸಿಕ ಸ್ಮಾರಕಗಳ ರಕ್ಷಣೆಯ ಮಹತ್ವ ಸಾರುವ ಭಿತ್ತಿಫಲಕಗಳನ್ನು ಅರಮನೆಯ ಆವರಣದಲ್ಲಿ ಅಲ್ಲಲ್ಲಿ ಅಂಟಿಸಿದರು. ಕೋಟೆ ಕೊತ್ತಲಗಳ ಕಲ್ಲು ಕಿತ್ತರೆ ಪ್ರಾಚೀನ ಪರಂಪರೆಯ ಪಂಚಾಂಗ ಕಿತ್ತಂತೆ ಎಂಬ ಸಂಗತಿಯನ್ನು ಅಲ್ಲಿನ ಸಾರ್ವಜನಿಕರ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಎಸ್.ಎಸ್. ಸುವರ್ಣಖಂಡಿ ಮಾತನಾಡಿ, ಐತಿಹಾಸಿಕ ಸ್ಮಾರಕಗಳ ಮೇಲೆ ಹಾಗೂ ಯಾವುದೇ ಕಟ್ಟಡಗಳ ಮೇಲೆ ಗಿಡಗಳು ಬೆಳೆಯುವುದರಿಂದ ಕಟ್ಟಡದ ಕಲ್ಲುಗಳು ಸಡಿಲುಗೊಂಡು ಕಟ್ಟಡದ ಆಯುಷ್ಯ ಕಡಿಮೆಯಾಗುತ್ತದೆ. ಕಾರಣ ಕಟ್ಟಡಗಳ ಮೇಲೆ ಗಿಡಗಳು ಬೆಳೆಯದಂತೆ ಜಾಗೃತಿ ವಹಿಸಬೇಕು ಎಂದರು.ಎನ್‌ಎಸ್‌ಎಸ್ ಅಧಿಕಾರಿ ಪ್ರೊ. ಎ.ವಿ. ಸೂರ್ಯವಂಶಿ, ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯ, ಪರಂಪರೆ ಕೂಟದ ಸಂಚಾಲಕ ಪ್ರೊ. ಕೆ. ಚನ್ನಬಸಪ್ಪ ಹಾಗೂ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಟಿ.ಪಿ. ಗಿರಡ್ಡಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.