ನವದೆಹಲಿ (ಪಿಟಿಐ): ದಸರಾ, ದೀಪಾವಳಿ ಸೇರಿದಂತೆ ಹಬ್ಬಗಳ ಸಾಲಿನ ಭರ್ಜರಿ ಕೊಡುಗೆಯಿಂದ ಅಕ್ಟೋಬರ್ನಲ್ಲಿ ಒಟ್ಟು 1,72,459 ಕಾರು ಮತ್ತು 9,36,122 ದ್ವಿಚಕ್ರ ವಾಹನ ಮಾರಾಟವಾಗಿದ್ದು, ಕ್ರಮವಾಗಿ ಶೇ 23 ಮತ್ತು ಶೇ 7ರಷ್ಟು ಪ್ರಗತಿ ದಾಖಲಿಸಿವೆ.

`ತಿಂಗಳ ಲೆಕ್ಕದಲ್ಲಿ ಕಳೆದ ಎರಡು ವರ್ಷಗಳಲ್ಲಿಯೇ ಈಗಿನದು ಗರಿಷ್ಠ ಕಾರು ಮಾರಾಟದ ದಾಖಲೆ~ ಎಂದು ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್ಐಎಎಂ) ಹೇಳಿದೆ.

ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ, ಒಟ್ಟು 79,811 ಕಾರು ಮಾರಾಟ ಮಾಡಿದೆ. ಶೇ 93ರಷ್ಟು ದಾಖಲೆ ಪ್ರಮಾಣದ ಪ್ರಗತಿ ಕಂಡಿದೆ. 35,722 ಕಾರುಗಳನ್ನು ಮಾರಾಟ ಮಾಡಿ ಶೇ 8ರಷ್ಟು ಹೆಚ್ಚಳ ಕಂಡಿರುವ ಹುಂಡೈ ಮೋಟಾರ್ ಇಂಡಿಯಾ ಎರಡನೇ ಸ್ಥಾನದಲ್ಲಿದೆ. ಟಾಟಾ ಮೋಟಾರ್ಸ್ನ 16,444 ಕಾರುಗಳಷ್ಟೇ ಮಾರಾಟವಾಗಿದ್ದು, ಕಂಪೆನಿ ಶೇ 21ರಷ್ಟು ಕುಸಿತ ಕಂಡಿದೆ.

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿ 25,379 ಯುಟಿಲಿಟಿ ವಾಹನಗಳನ್ನು ಮಾರಾಟ ಮಾಡಿ ಶೇ 49ರ ಪ್ರಗತಿ ತೋರಿದೆ.

ದ್ವಿಚಕ್ರ ವಾಹನ
ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೊ ಮೋಟೊ ಕಾರ್ಪ್ ಮುಂಚೂಣಿಯಲ್ಲಿದ್ದು, 4,59,203 ವಾಹನಗಳು ಮಾರಾಟವಾಗಿವೆ. ಬಜಾಜ್ ಆಟೊ ಮತ್ತು ಹೋಂಡಾ ಕಂಪೆನಿ ಕ್ರಮವಾಗಿ ಶೇ 7 ಮತ್ತು ಶೇ 69ರಷ್ಟು ಮಾರಾಟ ಪ್ರಗತಿ ಕಂಡಿವೆ.

ದೀಪಾವಳಿ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಸೇರಿದಂತೆ ಹಲವು ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸಲು ಕೊಡುಗೆಗಳನ್ನು ಪ್ರಕಟಿಸಿದೆ. ಈ ಎಲ್ಲ ಸಂಗತಿಗಳಿಂದ ಒಟ್ಟಾರೆ ವಾಹನ ಮಾರಾಟ ಚೇತರಿಸಿಕೊಂಡಿದೆ ಎಂದು `ಎಸ್ಐ ಐಎಂ~ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.