ಭಾನುವಾರ, ಜನವರಿ 19, 2020
25 °C

ದುಬೈನಲ್ಲಿ ಕಥಕ್ಕಳಿ ಗಾಳಿಪಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ಇಲ್ಲಿ ನಡೆಯುತ್ತಿರುವ ಮೊದಲ ಅಂತರರಾಷ್ಟ್ರೀಯ ಗಾಳಿಪಟ ಸ್ಪರ್ಧೆಯಲ್ಲಿ ಭಾರತ, ಕುವೈತ್ ಮತ್ತು ಅಮೆರಿಕದ ಗಾಳಿಪಟ ತಂಡಗಳು ಪಾಲ್ಗೊಂಡಿವೆ.ಏಷ್ಯಾದಲ್ಲಿಯೇ ಅತಿದೊಡ್ಡ ಗಾಳಿಪಟ ಎಂದು ಬಿಂಬಿತವಾಗಿರುವ ಹಾಗೂ ಲಿಮ್ಕಾ ದಾಖಲೆ ಪುಸ್ತಕದಲ್ಲಿ ದಾಖಲಾಗಿರುವ `ಕಥಕ್ಕಳಿ~ ಗಾಳಿಪಟ ಕೇಂದ್ರ ಬಿಂದುವಾಗಿದ್ದು, ದುಬೈನ ಆಕಾಶದಲ್ಲಿ ಹಾರಾಡಿದೆ.ಈ ಸ್ಪರ್ಧೆಯಲ್ಲಿ ಮಂಗಳೂರಿನ ತಂಡವು ಪಾಲ್ಗೊಂಡಿರುವುದು ವಿಶೇಷವಾಗಿದೆ. ರಂಗು ರಂಗಿನ, ವಿವಿಧ ಕಲಾ ಪ್ರಾಕಾರದ ಹಾಗೂ ವಿವಿಧ ಸಂದೇಶಗಳನ್ನು ಹೊತ್ತ ಗಾಳಿಪಟಗಳನ್ನು ವಿಭಿನ್ನ ತಂಡಗಳು ಹಾರಿಸಿವೆ.

ಅಮೆರಿಕದ ಗೋಮ್‌ಬರ್ಗ್ ಗಾಳಿಪಟ ತಂಡ, ಕುವೈತ್‌ನ ಬುಹಮದ್ ಗಾಳಿಪಟ ತಂಡಗಳು ದೊಡ್ಡ ದೊಡ್ಡ ಗಾಳಿಪಟಗಳನ್ನು ಹಾರಿಸುವ ಮೂಲಕ ಸಾವಿರಾರು ಪ್ರೇಕ್ಷಕರ ಮನಸೂರೆಗೊಂಡವು.ಮಂಗಳೂರಿನ `ಕಥಕ್ಕಳಿ~ ತಂಡದವರು ಜಿಲ್ಲೆಯ ಜಾನಪದ ನ್ಯತ್ಯಗಳ ಚಿತ್ರ ಇರುವ ಗಾಳಿಪಟಗಳನ್ನು ಹಾರಿಸುವ ಮೂಲಕ ಜನರ ಗಮನ ಸೆಳೆದರು.

 

ಪ್ರತಿಕ್ರಿಯಿಸಿ (+)