ನವದೆಹಲಿ, (ಪಿಟಿಐ): ಶಸ್ತ್ರಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಲಂಡನ್ನಿಂದ ಗುರುವಾರ ಬೆಳಿಗ್ಗೆ ನವದೆಹಲಿಗೆ ಆಗಮಿಸಿದರು.ತಿಂಗಳ ಹಿಂದೆಯೇ ಕಾಯಿಲೆಯೊಂದರ ಶಸ್ತ್ರಚಿಕಿತ್ಸೆಗಾಗಿ ಅವರು ವಿದೇಶಕ್ಕೆ ತೆರಳಿದ್ದರು. ಆದರೆ ಯಾವ ಕಾಯಿಲೆ ಎಂದು ಬಹಿರಂಗಪಡಿಸಿರಲಿಲ್ಲ.
`ಕಾಂಗ್ರೆಸ್ ಅಧ್ಯಕ್ಷೆ ಗುರುವಾರ ಬೆಳಿಗ್ಗೆ ಆಗಮಿಸಿದ್ದು, ಅವರು ಆರೋಗ್ಯವಾಗಿದ್ದಾರೆ~ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಹೇಳಿದರು.

ಆದರೆ ಸೋನಿಯಾ ಅವರಿಗೆ ಯಾವ ಕಾಯಿಲೆ ಇತ್ತು, ಯಾವ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.64 ವರ್ಷದ ಸೋನಿಯಾ, ಲಂಡನ್ನಿಂದ ಬ್ರಿಟಿಷ್ ಏರ್ವೇಸ್ ವಿಮಾನದ ಮೂಲಕ ಬೆಳಿಗ್ಗೆ 6.20ಕ್ಕೆ ಇಲ್ಲಿಗೆ ತಲುಪಿದರು. ಇನ್ನೂ ಕೆಲ ಕಾಲ ಅವರು ಯಾರನ್ನೂ ಭೇಟಿಯಾಗುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸೋನಿಯಾ ವಿದೇಶಕ್ಕೆ ತೆರಳಿದ ತಕ್ಷಣವೇ ಕಾಂಗ್ರೆಸ್ ಹೇಳಿಕೆಯೊಂದನ್ನು ನೀಡಿ, `ಅವರಿಗೆ ರೋಗ ಇರುವುದು ಪತ್ತೆಯಾಗಿದೆ ಮತ್ತು ಶಸ್ತ್ರಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದಾರೆ~ ಎಂದು ತಿಳಿಸಿತ್ತು.

ವಿದೇಶಕ್ಕೆ ತೆರಳಿದ ಬಳಿಕ ಪಕ್ಷದ ಹೊಣೆಯನ್ನು ಸೋನಿಯಾ ಅವರು ರಾಹುಲ್ ಗಾಂಧಿ, ಹಿರಿಯ ಮುಖಂಡ ಎ.ಕೆ. ಆಂಟನಿ, ಅಹ್ಮದ್ ಪಟೇಲ್ ಮತ್ತು ದ್ವಿವೇದಿ ಅವರಿಗೆ ಹೊರಿಸಿದ್ದರು. ಅನಾರೋಗ್ಯಕ್ಕೀಡಾದ ತಾಯಿಯನ್ನು ಭೇಟಿಯಾಗಿ ರಾಹುಲ್ ಈಚೆಗೆ ಭಾರತಕ್ಕೆ ಮರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.