ಮಂಗಳವಾರ, ಮೇ 11, 2021
19 °C

ದೆಹಲಿ ತಲುಪಿದ ಜರ್ದಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಒಂದು ದಿನದ ಭೇಟಿಗಾಗಿ ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಮಧ್ಯಾಹ್ನ ಬಂದಿಳಿದರು.ಇವರೊಂದಿಗೆ ಇವರ ಪುತ್ರ ಬಿಲ್ವಾಲ್ ಭುಟ್ಟೊ ಜರ್ದಾರಿ ಹಾಗೂ ಒಳಾಡಳಿತ ಸಚಿವ ರೆಹಮಾನ್ ಮಲ್ಲಿಕ್ ಸೇರಿದಂತೆ 40 ಮಂದಿಯ ನಿಯೋಗವು ಆಗಮಿಸಿದ್ದು, ಇವರನ್ನು ಸಚಿವ ಪಿ.ಕೆ ಬನ್ಸಲ್, ವಿದೇಶಾಂಗ ಕಾರ್ಯದರ್ಶಿ ರಂಜನ್ ಮಾತಯ್ ಹಾಗೂ ಪಾಕಿಸ್ತಾನದ ಹೈಕಮಿಷನರ್ ಶಹೀದ್ ಮಲ್ಲಿಕ್ ವಿಮಾನನಿಲ್ದಾಣದಲ್ಲಿ ಬರಮಾಡಿಕೊಂಡರು.ಜರ್ದಾರಿ ಅವರು ನೇರವಾಗಿ ರೇಸ್‌ಕೋರ್ಸ್ ರಸ್ತೆಯಲ್ಲಿನ ಪ್ರಧಾನಮಂತ್ರಿ ಅವರ ನಿವಾಸಕ್ಕೆ ತೆರಳಿದರು.

ಮಧ್ಯಾಹ್ನ ಪ್ರಧಾನಿ ಮನಮೋಹನಸಿಂಗ್ ಅವರೊಂದಿಗೆ ಭೋಜನಕೂಟದಲ್ಲಿ ಪಾಲ್ಗೊಳ್ಳುವ ಜರ್ದಾರಿ ಅವರು ನಂತರ ಅಜ್ಮೀರ್‌ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಭೇಟಿ ನೀಡುವರು.ಭಾರತಕ್ಕೆ ಹೊರಡುವ ಮುನ್ನ ಜರ್ದಾರಿ ಅವರು ಪಾಕಿಸ್ತಾನದಲ್ಲಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಹಾಗೂ ಸೇನಾ ಮುಖ್ಯಸ್ಥ ಜನರಲ್ ಅಶ್ಫಕ್ ಪರ್ವೇಜ್ ಕಯಾನಿ ಅವರೊಂದಿಗೆ ಮಾತುಕತೆ ನಡೆಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.