ಭಾನುವಾರ, ಮಾರ್ಚ್ 7, 2021
31 °C

ದೆಹಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್: ಬಿನ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್: ಬಿನ್ನಿ

ನವದೆಹಲಿ (ಪಿಟಿಐ): ಆಮ್ ಆದ್ಮಿ ಪಕ್ಷದಿಂದ (ಎಎಪಿ - ಆಪ್) ಉಚ್ಚಾಟಿತರಾದ ಶಾಸಕ ವಿನೋದ ಕುಮಾರ್ ಬಿನ್ನಿ ಅವರು ದೆಹಲಿ ಸರ್ಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭ್ರಷ್ಟ ವ್ಯಕ್ತಿಗಿಂತಲೂ 'ಹೆಚ್ಚು ಅಪಾಯಕಾರಿ' ಎಂದು ಅವರು ದೂರಿದ್ದಾರೆ.'ಕೇಜ್ರಿವಾಲ್ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿ ಈದಿನ ನಾನು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರಿಗೆ  ಪತ್ರ ಬರೆಯುತ್ತೇನೆ. ಕೇಜ್ರಿವಾಲ್ ಅವರು ಭ್ರಷ್ಟ ವ್ಯಕ್ತಿಗಿಂತಲೂ ಅಪಾಯಕಾರಿ ವ್ಯಕ್ತಿ. ಅವರು ಸುಳ್ಳುಗಳನ್ನು ಹೇಳುತ್ತಿದ್ದಾರೆ ಮತ್ತು ದೆಹಲಿಯ ನಾಗರಿಕರನ್ನು ಮಾತ್ರವೇ ಅಲ್ಲ ಇಡೀ ರಾಷ್ಟ್ರದ ಜನರನ್ನು ವಂಚಿಸುತ್ತಿದ್ದಾರೆ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಏನಿದ್ದರೂ ಜನಲೋಕಪಾಲ ಮಸೂದೆ ವಿಚಾರದಲ್ಲಿ ಸರ್ಕಾರವನ್ನು ಬೆಂಬಲಿಸುವುದಾಗಿ ಬಿನ್ನಿ ನುಡಿದರು.ಸರ್ಕಾರವು ಅಣ್ಣಾ (ಹಜಾರೆ) ಅವರ ಜನಲೋಕಪಾಲ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕಾರಕ್ಕಾಗಿ ಮಂಡಿಸಿದರೆ, ನಾನು ಅದನ್ನು ಬೆಂಬಲಿಸುತ್ತೇನೆ' ಎಂದು ಅವರು ಹೇಳಿದರು.'ಆಶಿಸ್ತಿಗಾಗಿ' ಆಮ್ ಆದ್ಮಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಿನ್ನಿ ಪಕ್ಷವು ವಿಧಾನಸಭಾ ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಈಡೇರಿಸುವುದೂ ಸೇರಿದಂತೆ ದೆಹಲಿ ಸರ್ಕಾರದ ಮುಂದೆ ಬೇಡಿಕೆಗಳ ಸರಮಾಲೆಯನ್ನೇ ಮುಂದಿಟ್ಟಿದ್ದರು.ಕನಿಷ್ಠ ಐವರು ಶಾಸಕರ ಬೆಂಬಲ ತಮಗಿರುವುದಾಗಿ ಭಾನುವಾರ ಪ್ರತಿಪಾದಿಸಿದ್ದ ಬಿನ್ನಿ ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ 48 ಗಂಟೆಗಳ ಒಳಗಾಗಿ ಸರ್ಕಾರವನ್ನು ಬೀಳಿಸುವುದಾಗಿ ಬೆದರಿಸಿದ್ದರು.ವಿದ್ಯುತ್ ಮತ್ತು ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತತ್ ಕ್ಷಣ ಬಗೆಹರಿಸುವಂತೆ ಅವರು ಸರ್ಕಾರವನ್ನು ಒತ್ತಾಯಿಸಿದರು. ವಿದ್ಯುತ್ ಮೇಲೆ ವಿಧಿಸಲಾಗಿರುವ ಶೇಕಡಾ 8 ಸರ್ಚಾರ್ಜ್ ಗೆ ಸಹಾಯಧನ (ಸಬ್ಸಿಡಿ) ಒದಗಿಸುವಂತೆ ಅವರು ಆಗ್ರಹಿಸಿದರು.ದೆಹಲಿ ವಿದ್ಯುತ್ ನಿಯಂತ್ರಣ ನಿಗಮವು (ಡಿಇಆರ್ ಸಿ) ಈ ತಿಂಗಳಿನಿಂದ ಸರ್ಚಾರ್ಜ್ ನ್ನು ಶೇಕಡಾ 8ರಷ್ಟು ಏರಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.