ಬುಧವಾರ, ಸೆಪ್ಟೆಂಬರ್ 18, 2019
21 °C

ದೆಹಲಿ ಸ್ಫೋಟ: ಕಾಶ್ಮೀರದಲ್ಲಿ ಇನ್ನಿಬ್ಬರ ಬಂಧನ

Published:
Updated:

ಜಮ್ಮು (ಪಿಟಿಐ): ದೆಹಲಿ ಹೈಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಜಿ ಹೆಸರಿನಲ್ಲಿ ಇ-ಮೇಲ್ ಕಳುಹಿಸಿದ್ದ ಪ್ರಕರಣದಲ್ಲಿ ಇನ್ನೂ ಇಬ್ಬರು ಯುವಕರನ್ನು ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಲಾಗಿದೆ.ಸಾಧಿಕ್ ಅಹ್ಮದ್ ಮತ್ತು ಅಬೀದ್ ಹುಸೇನ್ ಎನ್ನುವ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಿದ್ದಾರೆ. ಇವರಿಬ್ಬರೂ ಈಗಾಗಲೇ ಶರಣಾಗಿರುವ ಭಯೋತ್ಪಾದಕರಾದ ಇರ್ಷಾದ್ ಅಹ್ಮದ್ ಮತ್ತು ಫಾರೂಕ್ ಅಹ್ಮದ್ ಹತ್ತಿರದ ಸಂಬಂಧಿಗಳು. ಶರಣಾಗಿರುವ ಭಯೋತ್ಪಾದಕರನ್ನೂ ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ.ಹುಜಿ ಹೆಸರಿನಲ್ಲಿ ಇ-ಮೇಲ್ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಜಮ್ಮು-ಕಾಶ್ಮೀರ ಪೊಲೀಸರು ಒಟ್ಟು ಹನ್ನೊಂದು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು ಐವತ್ತಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿದೆ.

 

Post Comments (+)