ಮಂಗಳವಾರ, ಮೇ 17, 2022
27 °C

ದೇವದಾಸಿಯರಿಗೆ ದಕ್ಕದ ಆಶ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಡೂರ: ‘ದೇವದಾಸಿಯರಿಗೆ ಮುಂಜೂರಾಗಿರುವ ಆಶ್ರಮ ಮನೆಗಳನ್ನು ಕೊಡಲು ಅಧಿಕಾರಿಗಳು ಮಂದೆ ಬರುತ್ತಿಲ್ಲ. ಆದ್ದರಿಂದ ರಾಜ್ಯದಲ್ಲಿರುವ ಸಾವಿರಾರು ದೇವದಾಸಿ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ’ ಎಂದು ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಅಧ್ಯಕ್ಷೆ ಬಿ.ಮಾಳಮ್ಮ  ‘ಪ್ರಜಾವಾಣಿ’ ಎದುರು ವಿಷಾದ ವ್ಯಕ್ತಪಡಿಸಿದರು.

ದೇವದಾಸಿಯರ ಸರ್ವೆ 2007ರಲ್ಲಿ ನಡೆದ ನಂತರ, ಹೊಸಪಟ್ಟಿ ಬಿಡುಗಡೆಯಾಗಿಲ್ಲ. 1993-1994ರ ಸರ್ವೆ ಆಧರಿಸಿ ರಾಜ್ಯದ 23 ಸಾವಿರ ದೇವದಾಸಿ ಮಹಿಳೆಯರಿಗೆ 400 ರೂಪಾಯಿಗಳ ಮಾಸಾಶನ ನೀಡಲು ನಿಗದಿ ಮಾಡಲಾಗಿದೆ. ಹತ್ತು ಸಾವಿರ ರೂಪಾಯಿ ಸಹಾಯಧನ ಸೇರಿದಂತೆ 20 ಸಾವಿರ ರೂಪಾಯಿಗಳ ಸಾಲ ಯೋಜನೆ ಕೂಡ ಸಂಪೂರ್ಣವಾಗಿ ಅನುಷ್ಠಾನ ಗೊಂಡಿಲ್ಲ. ದೇವದಾಸಿಯರಿಗೆ ಹಲವು ಸೌಲಭ್ಯಗಳನ್ನು ನೀಡುವಂತೆ ಮಾಡಿರುವ ಹೋರಾಟಗಳು, ಮನವಿಗಳು ವಿಫಲವಾಗಿವೆ. ಸರ್ಕಾರ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ಪ್ರತಿ ದೇವಾದಾಸಿ ಮಹಿಳೆಗೆ ಮನೆ ಕಟ್ಟಿಸಿ ಕೊಡಬೇಕು, ಅಂತ್ಯೋದಯ ಕಾರ್ಡ್ ನೀಡಿಕೆ, ಪಿಂಚಣಿಗೆ ನಿಗದಿ ಪಡಿಸಿರುವ ವಯೋಮಿತಿ ಸಡಿಲಿಕೆ, ಕನಿಷ್ಠ ತಲಾ 2 ಎಕರೆ ಕೃಷಿ ಜಮೀನು, ಹೆಣ್ಣುಮಕ್ಕಳ ಮದುವೆಗೆ ಸಹಾಯಧನ, ಸ್ವಯಂ ಉದ್ಯೋಗ ಕ್ಯೆಗೊಂಡು ಸ್ವಾವಲಂಬಿಯಾಗಿ ಬದುಕಲು ನೆರವಾಗು ವಂತಹ 12 ಬೇಡಿಕೆಗಳನ್ನು  ಈಡೇರಿಸಬೇಕು. ದೇವದಾಸಿ ಮಹಿಳೆಯರ ಸರ್ವೆ ನಡೆಸಿ ಹೊಸಪಟ್ಟಿ ಬಿಡುಗಡೆಗೆ ಮಾಡಬೇಕು ಎಂಬ ಬೇಡಿಕೆ ಮಾಳಮ್ಮ ಅವರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.