70ನೇ ಸ್ವಾತಂತ್ರ್ಯ ದಿನಕ್ಕಾಗಿ ಸಿದ್ಧಪಡಿಸಿರುವ ‘ಲವ್ ಯುವರ್ ಕಂಟ್ರಿ’ ದೇಶಭಕ್ತಿ ಹುಟ್ಟಿಸುವ ವಿಡಿಯೊ ಈಗ ಯೂಟ್ಯೂಬ್ನಲ್ಲಿ ಜನಪ್ರಿಯವಾಗಿದೆ. ಆ.12ರಂದು ಅಪ್ಲೋಡ್ ಆದ ವಿಡಿಯೊವನ್ನು ಈವರೆಗೆ ವೀಕ್ಷಿಸಿದವರ ಸಂಖ್ಯೆ 50 ಸಾವಿರ ದಾಟಿದೆ.

ಬಾಲಿವುಡ್ ಬೆಡಗಿ, ಗುಂಗುರು ಕೂದಲಿನ ಸುಂದರಿ ಕಂಗನಾ ರನೋಟ್ ತ್ರಿವರ್ಣ ಧ್ವಜವನ್ನು ಹಿಡಿದು ‘ಲವ್ ಯುವರ್ ಕಂಟ್ರಿ’ ಎಂದು ಮಿಂಚಿದ್ದಾರೆ. ಪಾಪ್ ಸಂಗೀತದಂತೆ ಕೇಳಿಸುವ ಈ ಗೀತೆ, ಶಾಲಾ ಮಕ್ಕಳಲ್ಲಿ, ದಿನಗೂಲಿ ನೌಕರರಲ್ಲಿ, ಗೃಹಿಣಿಯರಲ್ಲಿ ಹಾಗೂ ಜನಸಾಮಾನ್ಯರಲ್ಲಿ ದೇಶದ ಬಗ್ಗೆ ಹೆಮ್ಮೆ ಮೂಡಿಸುವಂತಿದೆ.

ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಕಾಫಿ ಕುಡಿಯುವ ವೇಳೆಗೆ ಪತ್ರಿಕೆ ನಮ್ಮ ಎದುರಿಗಿರುತ್ತದೆ. ಪತ್ರಿಕೆಯ ಪುಟಪುಟದಲ್ಲೂ ಭ್ರಷ್ಟಾಚಾರ, ಕೊಲೆ, ವರದಕ್ಷಿಣೆ ಕಿರುಕುಳ, ಅತ್ಯಾಚಾರ, ಬಾಲ್ಯವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯದ ಸುದ್ದಿಗಳನ್ನು ನೋಡುವ ನಾವು ಯಾವ ದೇಶದಲ್ಲಿದ್ದೇವೆ ಎಂದು ದಿಗ್ಭ್ರಾಂತರಾಗುವ ಸ್ಥಿತಿ ನಿರ್ಮಾಣವಾಗಿದೆ.

‘ಶಾಂತಿ, ಸಹಬಾಳ್ವೆ, ಸ್ತ್ರೀಯರನ್ನು ಗೌರವಿಸುವ ದೇಶದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಮಕ್ಕಳಿಂದಲೇ ಸನ್ನಡತೆ ಕಲಿಸಬೇಕು, ದೇಶದ ಬಗ್ಗೆ ಹೆಮ್ಮೆ ಇರಬೇಕು, ಮತ ಚಲಾಯಿಸುವ ಮೂಲಕ ಉತ್ತಮ ಅಭ್ಯರ್ಥಿಯನ್ನು ಗೆಲ್ಲಿಸಬೇಕು, ಸೈನ್ಯಕ್ಕೆ ಸೇರಿ ದೇಶಸೇವೆ ಮಾಡಿ’ ಎಂಬ ಸಂದೇಶವಿದೆ.

2:23 ನಿಮಿಷದ ಈ ವಿಡಿಯೊವನ್ನು ರೀಟಾ ಡಿ ಗುಪ್ತಾ ಅವರು ನಿರ್ಮಿಸಿದ್ದು, ಗೀತೆಯನ್ನೂ ರಚಿಸಿದ್ದಾರೆ. ‘ದಿ ನೆಟ್ವರ್ಕ್ ತಂಡ ನಿರ್ದೇಶಿಸಿದೆ. ಈ ವಿಡಿಯೊಗೆ ಟೈಮ್ಸ್ ಮ್ಯೂಸಿಕ್ ಲೇಬಲ್ ಇದೆ. ಸಿದ್ಧಾರ್ಥ್ ಶರ್ಮಾ, ಪಿಯೂಶ್ ವಾಶ್ನಿಕ್ ಹಾಗೂ ಯಶ್ ಚೌಹಾಣ್ ಹಾಡನ್ನು ಸೊಗಸಾಗಿ ಹಾಡಿದ್ದಾರೆ.
ವಿಡಿಯೊ ನೋಡಲು: bit.ly/2bfcktU ಲಿಂಕ್ ಬಳಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.