ಬುಧವಾರ, ಮೇ 18, 2022
23 °C

ದೇಶದಲ್ಲಿ ತಜ್ಞ ವೈದ್ಯರ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಳ್ಳಾಲ: ‘ಭಾರತೀಯ ವೈದ್ಯರು ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದರೂ, ದೇಶದಲ್ಲಿ ತಾವು ಸಾಧಿಸಿ ನಿರ್ವಹಿಸಬೇಕಾದ ಅನೇಕ ಜವಾಬ್ದಾರಿಗಳಿವೆ, ತಜ್ಞ ವೈದ್ಯರ ಕೊರತೆಯನ್ನು ದೇಶ ಎದುರಿಸುತ್ತಿದೆ’ ಎಂದು  ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಅಭಿಪ್ರಾಯಪಟ್ಟರು.ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ 7ನೇ ಘಟಿಕೋತ್ಸವದಲ್ಲಿ 100 ಪದವೀಧರ ಹಾಗೂ 11 ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.‘ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ಜಾಸ್ತಿಯಾಗಬೇಕಿದೆ, ಜನರ ನಿರೀಕ್ಷೆ ಬಹಳಷ್ಟಿದ್ದು, ಇದಕ್ಕಾಗಿ ಭವಿಷ್ಯದ ವೈದ್ಯರು ಸಮಾಜಕ್ಕಾಗಿ ಏನಾದರೂ ಕೊಡುಗೆ ನೀಡುವಂತಹ ಸೇವೆಯನ್ನು ಮಾಡಬೇಕಿದೆ. ಮಾನವೀಯ ಸೇವೆಗೆ ವೈದ್ಯಕೀಯ ಕ್ಷೇತ್ರ ಸರಿಯಾದ ಆಯ್ಕೆ’ ಎಂದರು.ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.  ಜನರಲ್ ಮೆಡಿಸಿನ್  ಮತ್ತು ಪೇಡಿಯಾಟ್ರಿಕ್ಸ್ ವಿಭಾಗದಲ್ಲಿ ಡಾ.ಜಿ.ಎಂ.ನಿತಾಷ ಭಟ್, ಜನರಲ್ ಸರ್ಜರಿಯಲ್ಲಿ ಡಾ.ಲಾವಣ್ಯ ಪಿ. ಶರ್ಮ, ಅಂತಿಮ ವರ್ಷದ ಎಂಬಿಬಿಎಸ್‌ನಲ್ಲಿ  ಹಾಗೂ ಒಬಿಜಿ ವಿಭಾಗದಲ್ಲಿ ಡಾ.ಕರೇನ್ ಜಾನಿಸ್ ಮೊರಾಸ್ ಚಿನ್ನದ ಪದಕ ಪಡೆದರು. ಅತ್ಯುತ್ತಮ ಸಾಧಕ ವಿದ್ಯಾರ್ಥಿ ಪುರಸ್ಕಾರವನ್ನು ಡಾ. ಎಚ್.ಸಿ ರಂಜಿತ್ ಪಡೆದರು. ನಿಟ್ಟೆ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಶಾಂತರಾಮ ಶೆಟ್ಟಿ, ಮಣಿಪಾಲ ವಿವಿ ಉಪಕುಲಪತಿ ಡಾ.ಕೆ.ರಾಮನಾರಾಯಣ್  ಕಾಲೇಜಿನ ಡೀನ್ ಪ್ರೊ.ಅರುಣಾಚಲಂ ಕುಮಾರ್, ವೈಸ್ ಡೀನ್ ಡಾ.ಸತೀಶ್ ಭಂಡಾರಿ, ಡಾ.ಜಯಪ್ರಕಾಶ್ ಶೆಟ್ಟಿ, ಡಾ.ಜೆ.ಎಚ್ ಮಕ್ಕಣ್ಣನವರ್, ವೈದ್ಯಕೀಯ ಅಧೀಕ್ಷಕ ಡಾ.ಸಂಪತ್ ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.