ಮಂಗಳವಾರ, ಜೂನ್ 22, 2021
27 °C

ದೇಶದಾದ್ಯಂತ ‘ವಿವಿಪಿಎಟಿ’ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌): ಲೋಕ ಸಭಾ ಚುನಾವಣೆಯನ್ನು ನ್ಯಾಯಸಮ್ಮ ತವಾಗಿ ನಡೆಸುವ ದಿಸೆಯಲ್ಲಿ, ಮತದಾನ ಕ್ರಮಬದ್ಧವಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವ  ಮತದಾನ ಯಂತ್ರಗಳನ್ನು (ವಿವಿಪಿಎಟಿ)   ಪೂರೈ ಸಲು ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್‌ ತಿಳಿಸಿದರು.‘ನಾಗಾಲ್ಯಾಂಡ್‌ ಹಾಗೂ ಮಿಜೋ ರಾಂ ರಾಜ್ಯಗಳ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಇಂತಹ ಯಂತ್ರಗಳನ್ನು ಬಳಸಲಾಗಿದ್ದು ಉತ್ತಮ ಪ್ರತಿಕ್ರಿಯೆ ಬಂದಿರುವುದರಿಂದ ದೇಶಾ ದಾದ್ಯಂತ ಇಂತಹ ಯಂತ್ರಗಳನ್ನು ಪರಿಕ್ಷಾ ರ್ಥವಾಗಿ ಬಳಸಲಾಗುವುದು. 20 ಸಾವಿರ ಹೊಸ ಯಂತ್ರ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.‘ವೋಟರ್‌ ವೆರಿಫೈಯೇಬಲ್‌ ಪೇಪರ್‌ ಆಡಿಟ್‌ ಟ್ರಯಲ್‌–ವಿವಿಪಿಎಟಿ ಗಳು ಸರಬರಾಜು ಆಗು ವುದನ್ನೇ ನಾವು ಎದುರು ನೋಡುತ್ತಿ ದ್ದೇವೆ. ಇವುಗಳನ್ನು ಎಷ್ಟು ಕ್ಷೇತ್ರಗಳಲ್ಲಿ ಸಾಧ್ಯವೊ ಅಲ್ಲಿ ಬಳಸಲಾಗುವುದು. ಈ ತಿಂಗಳ 31 ರೊಳಗೆ ಯಂತ್ರಗಳು ಸರಬರಾಜು ಆಗುವ ಸಾಧ್ಯತೆ ಇದೆ’ ಎಂದರು.ಏನಿದು ವಿವಿಪಿಎಟಿ ?: ವಿದ್ಯುನ್ಮಾನ ಮತ ಯಂತ್ರದ (ಇವಿಎಂ) ಮೂಲಕ ಮತ ಚಲಾಯಿಸುವಾಗ, ಅಭ್ಯರ್ಥಿ ಹೆಸರಿನ ಮುಂದೆ ಗುಂಡಿ ಒತ್ತಿದಾಗ ಆಯ್ಕೆ ಮಾಡಿಕೊಂಡ ಅಭ್ಯರ್ಥಿ ಹಾಗೂ ಪಕ್ಷದ ಚಿಹ್ನೆ ಒಳ ಗೊಂಡ ಕಾಗದದ ತುಂಡೊಂದು ಇದೇ ಯಂತ್ರದಿಂದ 10 ಸೆಕೆಂಡ್‌ವರೆಗೆ ಕಾಣಿಸಿಕೊಳ್ಳುತ್ತದೆ.ಅಭ್ಯರ್ಥಿ ಚಲಾಯಿಸಿದ ಮತ ಚಿಹ್ನೆ ಸರಿಯಾಗಿದೆಯೇ ಎನ್ನುವುದನ್ನು ತಾಳೆ ನೋಡುವ ವ್ಯವಸ್ಥೆ ಇದಾಗಿದ್ದು ಹತ್ತು ಸೆಕೆಂಡ್‌ಗಳ ನಂತರ ಈ ಕಾಗದದ ತುಂಡು ಮತಯಂತ್ರಕ್ಕೆ ಹೊಂದಿಕೊಂಡೇ ಇರುವ, ಸೀಲ್‌ ಮಾಡಲಾದ ಮತ ಪೆಟ್ಟಿಗೆಯಲ್ಲಿ ಸ್ವಯಂಚಾಲಿತವಾಗಿ ಸೇರಿ ಕೊಳ್ಳುತ್ತದೆ. ಇಂತಹ ಯಂತ್ರಗಳ ಬಳಕೆ ಕುರಿತು ಈಗಾಗಲೇ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಗತ್ಯ ಮಾಹಿತಿ ನೀಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.