ಗುರುವಾರ , ಏಪ್ರಿಲ್ 15, 2021
21 °C

ದೊಡ್ಡಬಿದರಕಲ್ಲು: ಮಕ್ಕಳಿಗೆ ಶಾಲಾ ಪರಿಕರ ಉಚಿತ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೀಣ್ಯ ದಾಸರಹಳ್ಳಿ: `ನಿಜಗುಣ ಟ್ರಸ್ಟ್ ನಿಂದ ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳ ಮಕ್ಕಳಿಗೆ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಸಮವಸ್ತ್ರ, ನೋಟ್ ಪುಸ್ತಕ ಇನ್ನಿತರ ಶಾಲಾ ಪರಿಕರಗಳನ್ನು ವಿತರಿಸುತ್ತ್ದ್ದಿದೇವೆ~ ಎಂದು ಟ್ರಸ್ಟ್ ಅಧ್ಯಕ್ಷ ಜವರಾಯಿಗೌಡ ತಿಳಿಸಿದರು.ದೊಡ್ಡಬಿದರಕಲ್ಲು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಶಾಲಾ ಪರಿಕರಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದ ಅವರು, `ಪ್ರಚಾರಕೋಸ್ಕರ ಪುಸ್ತಕಗಳನ್ನು ವಿತರಿಸುವುದಿಲ್ಲ. ಬಡ ಮಕ್ಕಳ ಶಿಕ್ಷಣಕ್ಕೆ ಕೈಲಾದ ಸೇವೆ ಮಾಡಬೇಕೆಂಬುದೇ ನಮ್ಮ ಉದ್ದೇಶ~ ಎಂದರು.ಪಾಲಿಕೆ ಸದಸ್ಯರಾದ ಗಾಯಿತ್ರಿ ಜವರಾಯಿಗೌಡ, ಹನುಮಂತೇಗೌಡ, ಮುಖಂಡರಾದ ಹನುಮಂತರಾಯಪ್ಪ, ಲಕ್ಕಣ್ಣ, ಗಂಗರಾಜು, ತಿಪ್ಪನಹಳ್ಳಿ ಮಂಜು, ಅಂಧ್ರಹಳ್ಳಿ ರಮೇಶ್, ಹೊಸಹಳ್ಳಿ ನಾರಾಯಣಪ್ಪ, ಅರುಣ್‌ಗೌಡ ಅಜಯ ಇತರರು ಹಾಜರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.