ಸಿನಿಮಾರಂಗದಲ್ಲಿ ಕೆಲಸ ಮಾಡಬೇಕು ಅಂತ ಇತ್ತು. ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಯಾವತ್ತೂ ನಿರೀಕ್ಷಿಸಿರಲಿಲ್ಲ. ನನಗೆ ದೊರೆತಿದ್ದೆಲ್ಲವೂ ಅನಿರೀಕ್ಷಿತವಾದುದು ಅಂತ ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಉದ್ಗರಿಸಿದ್ದಾರೆ.

ಶುಕ್ರವಾರ ತಮ್ಮ 47ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಶಾರುಖ್, ಮಾಧ್ಯಮದವರೊಂದಿಗೆ ಮಾತನಾಡುತ್ತ ತಮ್ಮ ಸಿನಿಮಾ ಪಯಣದ ಬಗ್ಗೆ ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ಅದೃಷ್ಟವೇ ಎಲ್ಲವನ್ನೂ ನಿರ್ಧರಿಸುತ್ತದೆ ಎಂಬುದು ಸರಿಯಲ್ಲ. ಈ ರಂಗವೂ ಪರಿಶ್ರಮವನ್ನು ಬೇಡುತ್ತದೆ. ಮೊದಲ ದಿನಗಳಲ್ಲಿ ನಾನೂ ಕಷ್ಟಪಟ್ಟಿದ್ದೇನೆ. ಜನರು ನನ್ನ ನಟನೆಯನ್ನು ಮೆಚ್ಚಿಕೊಂಡರು. ನನ್ನ ಮ್ಯಾನರಿಸಂ ಹಾಗೂ ಶೈಲಿಯನ್ನು ಜನರು ಇಷ್ಟಪಟ್ಟರು. ನಿರ್ದೇಶಕರು ಅವಕಾಶ ನೀಡಿದರು. ಪ್ರತಿ ಪಾತ್ರವೂ ಭಿನ್ನವಾಗಿರುವಂತೆ ಗಮನ ಹರಿಸಿದೆ. ಪಾತ್ರಗಳಿಗೆ ಜೀವತುಂಬಲು ಸಾಕಷ್ಟು ಪ್ರಯತ್ನ ಪಡುತ್ತೇನೆ ಎಂದು ಡಾನ್ ಹೇಳಿಕೊಂಡಿದ್ದಾರೆ.

ಕಳೆದೆರಡು ದಶಕಗಳಿಂದ ಚಿತ್ರರಂಗದಲ್ಲಿದ್ದು, 70 ಚಿತ್ರಗಳಲ್ಲಿ ನಟಿಸಿರುವ ಶಾರುಖ್ ಖಾನ್ಗೆ ಪ್ರತಿದಿನವೂ ದೇವರ ಕೊಡುಗೆ ಎನಿಸುತ್ತದಂತೆ. `ಪ್ರತಿ ದಿನ ಎದ್ದಾಗಲೂ ಆ ದಿನದ ಕೆಲಸಕ್ಕಾಗಿ ಪ್ರಾರ್ಥಿಸುತ್ತೇನೆ. ಅಕ್ಕರಾಸ್ಥೆಯಿಂದ ಕೆಲಸವನ್ನು ಮಾಡುತ್ತೇನೆ. ಜನರಿಂದ ನನಗೆ ದೊರೆತಿರುವ ಪ್ರೀತಿ ವಿಶ್ವಾಸಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ~ ಎಂದು ಹೇಳಿಕೊಂಡಿದ್ದಾರೆ.

ಯಶ್ ಚೋಪ್ರಾ ಅವರ ನಿಧನದಿಂದ ಆತ್ಮೀಯರೊಬ್ಬರನ್ನು ಕಳೆದುಕೊಂಡಂತೆ ಆಗಿದೆ. ಅವರೊಂದಿಗೆ ಶಾರುಖ್ ಖಾನ್ ಬಾಂಧವ್ಯ ನಿರ್ದೇಶಕ-ನಟನಿಗಿಂತಲೂ ಹೆಚ್ಚಾಗಿತ್ತು. `ಡರ್~ ಚಿತ್ರದಿಂದ ಆರಂಭವಾದ ಸಂಬಂಧ `ಜಬ್ ತಕ್ ಹೈ ಜಾನ್~ ಚಿತ್ರದವರೆಗೂ ಮುಂದುವರಿದಿತ್ತು. ಮೊಹಬ್ಬತೇಂ, ದಿಲ್ ತೋ ಪಾಗಲ್ ಹೈ ಮುಂತಾದ ಚಿತ್ರಗಳಲ್ಲಿ ಶಾರುಖ್ ನಟಿಸಿದ್ದರು. ಯಶ್ಜೀ ಅವರ ವಿಶೇಷ ಸಂದರ್ಶನ ಮಾಡುವ ಅದೃಷ್ಟವೂ ಈ ಬಾದ್ಶಾಗೆ ದೊರೆತಿತ್ತು.

ಯಶ್ ಅವರ ನಿಧನದಿಂದಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸದ ಶಾರುಖ್ `ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವಷ್ಟು ದೊಡ್ಡವನೇನೂ ನಾನಲ್ಲ. ಆದರೆ, ಪ್ರತಿ ವರ್ಷವೂ ನಮ್ಮ ವಯಸ್ಸನ್ನು ನೆನಪಿಸುವಂತೆ ಮಾಧ್ಯಮದವರು ಈ ದಿನ ಬಂದು ಸೇರುತ್ತಾರೆ. ಕೆಲ ಪ್ರಶ್ನೆಗಳನ್ನು ಕೇಳುತ್ತಾರೆ.

ಇದೊಂದು ಪರಂಪರೆ ಎಂಬಂತೆ ಆಗಿದೆ. ಅವಕಾಶವಿದ್ದರೆ ಸ್ನೇಹಿತರೊಂದಿಗೆ ಹಾಗೂ ಕುಟುಂಬದೊಂದಿಗೆ ಈ ದಿನವನ್ನು ಸರಳವಾಗಿ ಆಚರಿಸಿಕೊಳ್ಳುವುದು ನನಗಿಷ್ಟ~ ಎಂದೂ ಹೇಳಿರುವ ಶಾರುಖ್ಗೆ ವಯಸ್ಸಿನ ಬಗ್ಗೆ ಯಾವತ್ತಿಗೂ ಚಿಂತೆ ಕಾಡಿಲ್ಲವಂತೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.