ಶುಕ್ರವಾರ, ಜೂನ್ 18, 2021
28 °C
ತಿರುಗಿಬಿದ್ದ ಲಕ್ಷೀನಾರಾಯಣ

ದ್ರೋಹ ಸರಿಯೇ? ಬಿಎಸ್‌ವೈಗೆ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಅವರ ಆಪ್ತ, ವಿಧಾನ ಪರಿಷತ್‌ ಸದಸ್ಯ  ಎಂ.ಡಿ.ಲಕ್ಷ್ಮೀನಾರಾಯಣ ಅವರೇ ತಿರುಗಿಬಿದ್ದಿದ್ದಾರೆ. 15 ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಯಡಿಯೂರಪ್ಪಗೆ ಬಹಿರಂಗ ಪತ್ರ ಬರೆದಿದ್ದಾರೆ.‘ಬಿಜೆಪಿ ವರಿಷ್ಠರ ವಿರುದ್ಧ ಹೇಳಿಕೆ ನೀಡಲು ಪ್ರೋತ್ಸಾಹಿಸಿದ್ದು ಯಾರು? ನಿಮ್ಮನ್ನು ನಂಬಿ ಪ್ರಾಣ ಕೊಡಲು ಸಿದ್ಧ­ರಿದ್ದ ಮುಖಂಡರನ್ನು ಕೈಬಿಟ್ಟು ಬಿಜೆಪಿ ಸೇರಿದ್ದು ಸರಿಯೇ? ನಿಮ್ಮ ಸಲುವಾಗಿ ಸಚಿವ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರನ್ನು ಬೀದಿ ಪಾಲು ಮಾಡಿದ್ದು ತಪ್ಪಲ್ಲವೇ’ ಎಂದು ಪ್ರಶ್ನಿಸಿದ್ದಾರೆ.‘ಬಿಜೆಪಿ ವರಿಷ್ಠರನ್ನು ಬೈದಿದ್ದರು ಎನ್ನುವ ಕಾರಣಕ್ಕೆ ಧನಂಜಯ­ಕುಮಾರ್‌, ಜಿ.ಎಸ್‌.ಬಸವರಾಜ ಸೇರಿ  ಹಲವರನ್ನು ಬಿಜೆಪಿಗೆ ಸೇರಿಸಿಕೊಳ್ಳು­ತ್ತಿಲ್ಲ. ಈ ವಿಷಯ ಗೊತ್ತಿದ್ದೂ ಎಲ್ಲ­ರನ್ನೂ ಬಿಟ್ಟು ನೀವು ಬಿಜೆಪಿ ಸೇರಿದ್ದು ಯಾಕೆ’ ಎಂದು ಖಾರವಾಗಿ ಕೇಳಿದ್ದಾರೆ.ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಜೆಡಿಎಸ್‌, ಕಾಂಗ್ರೆಸ್‌ ಮತ್ತು ಪಕ್ಷೇತರರ ಜತೆ (ಮೈಸೂರಿನಲ್ಲಿ ಜೆಡಿಎಸ್‌ಗೆ ಮತ್ತು ಚಿತ್ರದುರ್ಗದಲ್ಲಿ ಪಕ್ಷೇತರ ಮತ್ತು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ಗೆ) ರಹಸ್ಯ ಹೊಂದಾಣಿಕೆ ಮಾಡಿಕೊಂಡು, ಕೆಜೆಪಿ ಕಾರ್ಯಕರ್ತ­ರಲ್ಲಿ ಗೊಂದಲ ಮೂಡಿ­ಸಿದ್ದು ಸರಿಯೇ ಎಂದೂ ಲಕ್ಷ್ಮೀನಾರಾಯಣ ಕೇಳಿದ್ದಾರೆ.ಕೆಜೆಪಿ ಕಟ್ಟುವುದಾಗಿ ಇತರ ಪಕ್ಷ­ಗಳಲ್ಲಿನ ಮುಖಂಡರು, ಕಾರ್ಯಕರ್ತ­ರನ್ನು ಕರೆತಂದು, ಈಗ ಅವರೆಲ್ಲರನ್ನೂ ಬಿಟ್ಟು ಬಿಜೆಪಿ ಸೇರಿದ್ದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣೆಗೆ ಸಜ್ಜಾಗಿ ಎಂದು 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನೂ ಘೋಷಣೆ ಮಾಡಿ, ಕೊನೆಗಳಿಗೆಯಲ್ಲಿ ಬಿಜೆಪಿ ಸೇರಿದ್ದು ಯಾಕೆ ಎಂದು ಅವರು ಕೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.