ನವದೆಹಲಿ (ಪಿಟಿಐ): ದೇಶದ ಒಟ್ಟು ಕಾರು ಮಾರಾಟವು 2011-12ನೇ ಸಾಲಿನಲ್ಲಿ ಕೇವಲ ಶೇ. 2.19ರಷ್ಟು ಪ್ರಗತಿ ಕಂಡಿದೆ. ಕಳೆದ ಎರಡು ವರ್ಷಗಳಲ್ಲಿ ಇದು ಕನಿಷ್ಠ ಪ್ರಗತಿ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್ಐಎಎಂ) ಹೇಳಿದೆ.

ಕಳೆದ ವರ್ಷ ಒಟ್ಟು 20,16,115 ಕಾರುಗಳು ಮಾರಾಟವಾಗಿವೆ. 2010-11ರಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ 19,72,845ರಷ್ಟಿತ್ತು. ಬಜೆಟ್ ಹಿನ್ನೆಲೆಯಲ್ಲಿ, ಕಳೆದ ಮಾರ್ಚ್ನಲ್ಲಿ ಮಾತ್ರ ಮಾರಾಟದಲ್ಲಿ ಉತ್ತಮ ಏರಿಕೆ ಕಂಡಿದೆ. ಇದನ್ನು ಹೊರತುಪಡಿಸಿದರೆ ಉಳಿದೆಲ್ಲ ತಿಂಗಳುಗಳಲ್ಲಿ ಮಂದಗತಿ ಮಾರಾಟ ನಡೆದಿದೆ ಎಂದು `ಎಸ್ಐಎಎಂ~ ಅಧ್ಯಕ್ಷ ಎಸ್.ಶಾಂಡಿಲ್ಯ ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

2008-09ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ದೇಶದ ಕಾರು ಮಾರಾಟ ಶೇ 1.4ರಷ್ಟು ಪ್ರಗತಿ ಕಂಡಿತ್ತು. ಅದನ್ನು ಹೊರತು ಪಡಿಸಿದರೆ 2011-12ನೇ ಸಾಲಿನಲ್ಲಿ ಕನಿಷ್ಠ ಮಾರಾಟ ದಾಖಲಾಗಿದೆ. ಹಣದುಬ್ಬರ, ಬಡ್ಡಿ ದರ ಏರಿಕೆ, ತೈಲ ಬೆಲೆ ಹೆಚ್ಚಳ ಇತ್ಯಾದಿ ಸಂಗತಿಗಳು ಕಾರು ಮಾರಾಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ ಎಂದರು.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮುಂಬರುವ ದಿನಗಳಲ್ಲಿ ಅಲ್ಪಾವಧಿ ಬಡ್ಡಿ ದರಗಳನ್ನು ತಗ್ಗಿಸುವ ಸೂಚನೆ ನೀಡಿದೆ. ಇದರ ಜತೆಗೆ ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 7.5ರಿಂದ ಶೇ 8ಕ್ಕೆ ಪ್ರಗತಿ ಕಾಣುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ 2012-13ನೇ ಸಾಲಿನಲ್ಲಿ ದೇಶದ ಒಟ್ಟು ಕಾರು ಮಾರಾಟ ಶೇ 10ರಿಂದ ಶೇ 12ರಷ್ಟು ಮತ್ತು ದ್ವಿಚಕ್ರ ವಾಹನ ಮಾರಾಟ ಶೇ 11ರಿಂದ 13ರಷ್ಟು ಪ್ರಗತಿ ಕಾಣಬಹುದು ಎಂದು ಶಾಂಡಿಲ್ಯ ವಿಶ್ವಾಸ ವ್ಯಕ್ತಪಡಿಸಿದರು.

ಮಾರುತಿ ಸುಜುಕಿ 2011-12ರಲ್ಲಿ ಒಟ್ಟು 8,55,730 ಕಾರು ಮಾರಾಟ ಮಾಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ.11.46ರಷ್ಟು ಕುಸಿತ ಕಂಡಿದೆ. ಕಂಪನಿಯ ಮಾನೇಸರ ತಯಾರಿಕೆ ಘಟಕದಲ್ಲಿ ಕಾರ್ಮಿಕರು ನಡೆಸಿದ ಮುಷ್ಕರ ಕೂಡ ಮಾರಾಟದ ಮೇಲೆ ಪರಿಣಾಮ ಬೀರಿದೆ. ಹುಂಡೈ ಮೋಟಾರ್ ಇಂಡಿಯ 3,87,168 ಕಾರು ಮಾರಾಟ ಮಾಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 7.88ರಷ್ಟು ಪ್ರಗತಿ ಕಂಡಿದೆ.

ಕಾರು ತಯಾರಿಕೆಯಲ್ಲಿ ಭಾರತ ಪ್ರಪಂಚದಲ್ಲಿ ಐದನೇ ಸ್ಥಾನದಲ್ಲಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲಿ ಕಾರುಗಳ ಮಾರಾಟ 20 ಲಕ್ಷದ ಗಡಿ ದಾಟಿದೆ. 2011-12ರಲ್ಲಿ ಒಟ್ಟು 1 ಕೋಟಿ ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 12ರಷ್ಟು ಪ್ರಗತಿ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.