ಸೋಮವಾರ, ಏಪ್ರಿಲ್ 19, 2021
25 °C

ಧಾರವಾಡ: ನಾಲ್ವರ ಬಾಲ್ಯವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ನಾಲ್ವರ ಬಾಲ್ಯವಿವಾಹ

ಧಾರವಾಡ: ತಾಲ್ಲೂಕಿನ ಇಟಿಗಟ್ಟಿ ಗ್ರಾಮದಲ್ಲಿ ಶನಿವಾರ ನಾಲ್ವರು ಬಾಲಕಿಯರ ಬಾಲ್ಯವಿವಾಹ ಹಿರಿಯರ ಸಮ್ಮುಖದಲ್ಲಿಯೇ ನಡೆಯಿತು. ಈ ಸುದ್ದಿ ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸುವಷ್ಟರಲ್ಲಿಯೇ ಬಾಲ್ಯವಿವಾಹ ಮುಗಿದಿತ್ತು.ಇಟಿಗಟ್ಟಿ ಗ್ರಾಮದ ರೂಪಾ ಗಾಯಕವಾಡ     (17), ಯಶೋಧಾ ಶಿವಪ್ಪ ಸಾವಂತ (15), ನವಲೂರಿನ ಮಂಜುಳಾ ಜಾಲಿಹಾಳ (17) ಹಾಗೂ ಮುಗಳಿ ಗ್ರಾಮದ ಸುಮಂಗಲಾ ಸಿದ್ರಾಮನವರ ಎಂಬ ಬಾಲಕಿಯರೇ ವಿವಾಹ ಬಂಧನಕ್ಕೆ ಒಳಗಾದವರು.  ಈ ನಾಲ್ವರನ್ನು ಮದುವೆಯಾದ ಇಟಿಗಟ್ಟಿಯ ಗಿರಿಮಲ್ಲೇಶ ಗುಡ್ಡದ ಹೂಲಿಕಟ್ಟಿ, ಹೊಲ್ತಿಕೋಟಿಯ ನಾಗರಾಜ ಧಾರವಾಡ, ಇಟಿಗಟ್ಟಿಯ ಪರಮೇಶ್ವರ ಪೂಜಾರ, ರಮೇಶ ಗಾಯಕವಾಡ ಅವರಿಗೆ ಮದುವೆಗೆ ಅರ್ಹ ವಯಸ್ಸಾಗಿದೆ.‘ಇಟಿಗಟ್ಟಿ ಗ್ರಾಮದಲ್ಲಿ 14 ಜೋಡಿಗಳ ಸಾಮೂಹಿಕ ಮದುವೆ ಬಗ್ಗೆ ನಮಗೆ ಮಾಹಿತಿ ಇತ್ತು. ಈ ಪೈಕಿ ಒಂದು ಜೋಡಿ ವಯಸ್ಸು ಅರ್ಹವಿರದ ಕಾರಣ 13 ಜೋಡಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅದರಂತೆಯೇ 13 ಜೋಡಿಯ ಸಾಮೂಹಿಕ ವಿವಾಹ ನಡೆದಿದೆ. ಆದರೆ ಗ್ರಾಮದ ಮನೆ ಎದುರು ನಾಲ್ಕು ಜೋಡಿಗಳ ಬಾಲ್ಯವಿವಾಹ ಮಾಡುವುದರ ಬಗ್ಗೆ ತಿಳಿದಿರಲಿಲ್ಲ. ಶುಕ್ರವಾರ ರಾತ್ರಿ ಈ ಬಗ್ಗೆ ಮಾಹಿತಿ ಗೊತ್ತಾಯಿತು.

 

ಶನಿವಾರ ಸ್ಥಳಕ್ಕೆ ಹೋಗುವಷ್ಟರಲ್ಲಿಯೇ ಮದುವೆ ಆಗಿತ್ತು. ಬಾಲಕಿಯರ ಜನ್ಮ ದಾಖಲೆಗಳನ್ನು ಪರಿಶೀಲಿಸಿದಾಗ ಬಾಲ್ಯವಿವಾಹ ತಿಳಿದು ಬಂದಿದೆ. ಈ ನಾಲ್ವರು ದಂಪತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಕರೆತರಲಾಗಿತ್ತು. ನಂತರ ನಾಲ್ವರು ಬಾಲಕಿಯರನ್ನು ಹುಬ್ಬಳ್ಳಿ ಘಂಟಿಕೇರಿಯ ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಲಾಗಿದೆ ಎಂದು ಎಂದು ಶಿಶು ಅಭಿವೃದ್ಧಿ ಅಧಿಕಾರಿಗಳು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.