ಧಾರವಾಡ: ಕೊಲೆ ಸೇರಿದಂತೆ ಹಲವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಯೊಬ್ಬ ಪೊಲೀಸ್ ಸಿಬ್ಬಂದಿಯ ಕೈಕಚ್ಚಿ, ಹಲ್ಲೆ ನಡೆಸಿ ತನಗಾಗಿ ಕಾದುನಿಂತಿದ್ದ ಬೈಕ್ ಏರಿ ಪರಾರಿಯಾದ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಕಮ್ಮರಡಿ ಗ್ರಾಮದ ಹನೀಫ್ ಬ್ಯಾರಿ ಪರಾರಿಯಾದ ಕೈದಿ. ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. 9 ವರ್ಷಗಳಿಂದ ಇದೇ ಜೈಲಿನಲ್ಲಿ ಇದ್ದ ಹನೀಫ್, ಗುರುವಾರ ಯಾವುದೋ ಅರ್ಜಿ ಕೊಡುವ ನೆಪಮಾಡಿ ಜೈಲು ಅಧೀಕ್ಷಕರ ಕೊಠಡಿಗೆ ಬಂದಿದ್ದಾನೆ.

ಬೇರೆಯವರು ಹೊರ ಹೋಗಲು ಜೈಲಿನ ಬಾಗಿಲು ತೆರೆಯುವ ಸಂದರ್ಭವನ್ನು ಬಳಸಿಕೊಂಡು ಬಾಗಿಲ ಬಳಿ ಭದ್ರತೆಗೆ ನಿಯೋಜಿತರಾಗಿದ್ದ ವಿಠ್ಠಲ ಕಿಲಾರಿ ಎಂಬ ಪೊಲೀಸ್ ಕಾನ್ಸ್ಟೇಬಲ್ ಕೈ ಕಚ್ಚಿದ್ದಲ್ಲದೆ ಅವರನ್ನು ಹೊರಗೆ ನಿಲ್ಲಿಸಿದ್ದ ಬೈಕ್ವರೆಗೂ ಎಳೆದುಕೊಂಡು ಹೋಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಕುರಿತು ಜೈಲಿನ ಅಧೀಕ್ಷಕ ಶಂಕರಾನಂದ ಹುಲ್ಲೂರ ಅವರು ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.