ಶುಕ್ರವಾರ, ಜೂನ್ 18, 2021
27 °C

ಧಾರ್ಮಿಕ ಮುಖಂಡರ ಸಲ್ಲದ ನಡವಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಸ್ಲಿಂ ಸಂಘಟನೆಗಳ ರಾಜಕಾರಣ ಕುರಿತ ಮಹಮ್ಮದ್ ಮುಸ್ತಫಾ ಆತೂರು ಅವರ ಪತ್ರ (ಪ್ರ ವಾ ವಾ ಮಾರ್ಚ್ 15)  ಎಲ್ಲರ ಕಣ್ಣು ತೆರೆಸುವಂತಿದೆ. ಧರ್ಮ ಮತ್ತು ರಾಜಕಾರಣ ಎರಡು ಬೇರೆ ಬೇರೆ ಕ್ಷೇತ್ರಗಳು.

 

ಆದರೆ ಇಂದು ಧಾರ್ಮಿಕ ಮುಖಂಡರು ರಾಜಕಾರಣದಲ್ಲಿ ಮೂಗು ತೂರಿಸಿ ಇಡೀ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ. ಈ ಬೆಳವಣಿಗೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಸಮಾಜ, ಧರ್ಮವನ್ನು ಬಳಸಿಕೊಳ್ಳುವುದು ಹೊಸದಲ್ಲ. ಆದರೆ ಈ ವಿಷಯದಲ್ಲಿ ಧರ್ಮಾಧಿಕಾರಿಗಳು ಎಚ್ಚರದಿಂದಿರಬೇಕು. ಆದರೆ ಅವರೇ ಸರ್ಕಾರ ಮತ್ತು ರಾಜಕೀಯ ಪಕ್ಷಗಳನ್ನು  ಬೆಂಬಲಿಸುವ ನಡವಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಈ ಬೆಳವಣಿಗೆ ಜನತಂತ್ರ ವ್ಯವಸ್ಥೆಗೆ ಮಾರಕ.

 

ಧಾರ್ಮಿಕ ಮುಖಂಡರೇ ರಾಜಕೀಯ ಪಕ್ಷಗಳ ಪರವಾಗಿ ನಿಲ್ಲುವುದಾದರೆ ಜನರಿಗೆ ತಿಳುವಳಿಕೆ ಹೇಳುವವರು ಯಾರು? ಧಾರ್ಮಿಕ ಮುಖಂಡರಿಗೂ ಜನ ಸಾಮಾನ್ಯರಿಗೂ ವ್ಯೆತ್ಯಾಸ ಉಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಧರ್ಮಗಳ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.