ಗುರುವಾರ , ಮೇ 6, 2021
23 °C

ಧಾರ್ಮಿಕ ಶಿಕ್ಷಣದಿಂದ ಬದುಕು ಉತ್ತಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರ:`ಆಧುನಿಕ ಮತ್ತು ತಾಂತ್ರಿಕ ಯುಗದಲ್ಲಿ ಧಾರ್ಮಿಕತೆ ಕುಸಿಯುತ್ತಿದ್ದು ಅಧರ್ಮ ಹೆಚ್ಚಾಗತೊಡಗಿದೆ.  ಪ್ರತಿಯೊಬ್ಬರೂ ಧರ್ಮದಿಂದ ನಡೆದರೆ ಸಮಾಜ ಉತ್ತಮವಾಗಿ ನಡೆಯಬಲ್ಲದು.  ಧಾರ್ಮಿಕ ಶಿಕ್ಷಣದಿಂದ   ಉತ್ತಮ ಬದುಕು ಸಾಧ್ಯ~ ಎಂದು ಪಂ. ಪ್ರಭಂಜನಾಚಾರ್ಯ ಉಪಾಧ್ಯೆ ಹೇಳಿದರು.ನಗರದ ಕೋಟೆಯ ಉತ್ತರಾದಿಮಠದಲ್ಲಿ ಮಧ್ವ ಸೇವಾ ಸಂಘದ ಆಶ್ರಯದಲ್ಲಿ ಈಚೆಗೆ ಏಳು ದಿನಗಳ ಕಾಲ ಏರ್ಪಡಿಸಿದ್ದ ಧಾರ್ಮಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪಂ.ಭೀಮಾಚಾರ್ಯ ಚಿಮ್ಮಲಗಿ ಮಾತನಾಡಿ, ಇಂದಿನ ಯುವ ಪೀಳಿಗೆ ಧಾರ್ಮಿಕ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ದೇಶಿ ಸಂಸ್ಕೃತಿ, ಧರ್ಮವನ್ನು ಅರಿತುಕೊಳ್ಳಬಹುದು ಎಂದರು.ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ಸಂಧ್ಯಾವಂದನೆ, ದೇವ ಪೂಜಾಪದ್ಧತಿ, ದೇವರ, ಗುರುಗಳ ಸ್ತೋತ್ರಗಳನ್ನು ಕಲಿಸಲಾಗುವುದು ಎಂದು ಸಮಿತಿಯವರು ತಿಳಿಸಿದರು.  ಹುಬ್ಬಳ್ಳಿ, ಧಾರವಾಡ, ಶಿಗ್ಗಾಂವಿ, ಸವಣೂರು, ರಾಣೇಬೆನ್ನೂರಿಂದ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.ಮಧ್ವ ಸಂಘದ ಅಧ್ಯಕ್ಷ ಪಿ.ಕೆ.ಹಂಚಿನಮನಿ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ ನಾಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗವಿಠ್ಠಲಾಚಾರ್ಯ ಚಂದಿ  ನಿರೂಪಿಸಿದರು. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.