ಭಾನುವಾರ, ಮಾರ್ಚ್ 26, 2023
23 °C

ಧಾರ್ಮಿಕ ಸ್ವಾತಂತ್ರ್ಯ: ಚೀನಾಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋಪ್ ಬೆನೆಡಿಕ್ಟ್ ಕ್ರಿಸ್‌ಮಸ್ ಸಂದೇಶ

ವ್ಯಾಟಿಕನ್ ಸಿಟಿ (ಡಿಪಿಎ):
ವಿಶ್ವ ಶಾಂತಿ ಮತ್ತು ಐಕ್ಯತೆಯ ಸಂದೇಶವನ್ನು ಕ್ರಿಸ್‌ಮಸ್ ಶುಭಾಶಯದೊಂದಿಗೆ ಸಾರಿರುವ 16ನೇ ಪೋಪ್ ಬೆನೆಡಿಕ್ಟ್, ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಅನುಭವಿಸುತ್ತಿರುವ ಚೀನಾದಲ್ಲಿರುವ ಕ್ರೈಸ್ತರಿಗೆ ಸಾಂತ್ವನ ಹೇಳಿದ್ದಾರೆ.ಕ್ರಿಸ್‌ಮಸ್ ಆಚರಣೆ ಪ್ರಯುಕ್ತ ಸೇಂಟ್ ಪೀಟರ್ ಸ್ಕ್ವೇರ್‌ನಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಸೇರಿದ್ದ ಬೃಹತ್ ಸಮಾರಂಭದಲ್ಲಿ 65 ಭಾಷೆಗಳಲ್ಲಿ ಪೋಪ್ ಶುಭಾಶಯ ಹೇಳಿದರು.



‘ಚೀನಾದಲ್ಲಿರುವ ಕ್ರೈಸ್ತರಿಗೆ ಜೀಸಸ್‌ನ ಜನನ ದಿನವು ನಂಬಿಕೆ, ತಾಳ್ಮೆ ಮತ್ತು  ಧೈರ್ಯವನ್ನು ಇಮ್ಮಡಿಗೊಳಿಸಲಿ. ಧಾರ್ಮಿಕ ಆಚರಣೆ ಮತ್ತು ಧರ್ಮಪ್ರಜ್ಞೆ ಮೇಲೆ ನಿರ್ಬಂಧ ವಿಧಿಸುವ ಮೂಲಕ  ಚೀನಾ ಸರ್ಕಾರ ಹೃದಯಹೀನವಾಗದಿರಲಿ’ ಎಂದರು.‘ಕ್ರಿಸ್‌ಮಸ್ ಬೆಳಕು ಇಸ್ರೇಲ್ ಮತ್ತು ಪ್ಯಾಲಸ್ಟೀನ್ ನಡುವಿನ ಹೋರಾಟವನ್ನು ಶಾಂತಿ ಸೌಹಾರ್ದತೆಗೆ ಪ್ರೇರೇಪಿಸಲಿ’ ಎಂದು ಆಶಿಸಿದರು.



‘ಇರಾಕ್ ಮತ್ತು ಮಧ್ಯ ಪ್ರಾಚ್ಯದಾದ್ಯಂತ ಕ್ರಿಶ್ಚಿಯನ್ ಸಮುದಾಯದಲ್ಲಿ ಪರಿಣಾಮಕಾರಿ ಏಕತೆ ಮೂಡಿಸಬೇಕು ಎಂದು ಅವರು ವಿಶ್ವ ಮುಖಂಡರಿಗೆ ಕರೆ ನೀಡಿದರು.ಕ್ರಿಸ್‌ಮಸ್ ಸೊಮಾಲಿಯಾ, ಸೂಡಾನ್‌ನ ಡಾರ್ಫುರ್ ಪ್ರದೇಶ, ಐವರಿ ಕೋಸ್ಟ್‌ಗಳಲ್ಲಿ ಶಾಂತಿ ಹಾಗೂ ಮಡಗಾವಸ್ಕರ್‌ನಲ್ಲಿ ರಾಜಕೀಯ- ಸಾಮಾಜಿಕ ಸ್ಥಿರತೆ ತರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.



‘ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭದ್ರತೆ, ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ನಡುವಿನ ಮಾತುಕತೆಗಳಿಗೆ ಉತ್ತೇಜನ ನೀಡುವುದು ಅಗತ್ಯ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.