ಸೋಮವಾರ, ಜನವರಿ 20, 2020
27 °C

ಧೂಮಪಾನ ವ್ಯಸನಿಗಳಿಗೆ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮನುಷ್ಯನನ್ನು ನಿಧಾನವಾಗಿ ಗೋರಿಯೆಡೆಗೆಕೊಂಡೊಯ್ಯುವ ಹೊಗೆಯನ್ನು ನಿರಾಕರಿಸಬೇಕು' ಎಂದು ಆರ್ಟ್ ಆಫ್ ಲಿವಿಂಗ್‌ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಸಲಹೆ ನೀಡಿದರು.ಆರ್ಟ್ ಆಫ್ ಲಿವಿಂಗ್‌ನ ಜೀವನ ಕಲಾಸಂಸ್ಥೆ ಹಾಗೂ ಬಿಜಿಎಸ್ ಆಸ್ಪತ್ರೆ ವತಿಯಿಂದ ವಿಶ್ವ ತಂಬಾಕು ನಿರಾಕರಣೆ ದಿನದಂದು ಆಯೋಜಿಸಿದ್ದ ಕ್ಯಾನ್ಸರ್‌ನ ಬಗ್ಗೆ ಅರಿವು ಮೂಡಿಸುವ ಆಂದೋಲನದಲ್ಲಿ ಅವರು ಮಾತನಾಡಿದರು.ಜೀವನ ಕಲಾ ಸಂಸ್ಥೆಯು ತಂಬಾಕು ನಿಯಂತ್ರಣಕ್ಕೆ `ಧೂಮಪಾನ ನಿಲ್ಲಿಸಿ, ಜೀವನ ಆರಂಭಿಸಿ' ಎಂಬ ಏಳು ದಿನಗಳ ವಿಶೇಷ ಶಿಬಿರವನ್ನು ಆರಂಭಿಸಿದೆ. ವ್ಯಸನದಿಂದ ಹೊರಬರಲು ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯೆಗಳನ್ನು ಶಿಬಿರಾರ್ಥಿಗಳು ಅಭ್ಯಾಸ ಮಾಡಲಿದ್ದಾರೆ. ಈ ಶಿಬಿರ ವ್ಯಸನದಿಂದ ಮುಕ್ತಿ ಪಡೆಯಲು ಪರಿಣಾಮಕಾರಿ ಎಂದು ಚಿಕಿತ್ಸಕ ಸಂಶೋಧನಾಕಾರ ಹರೀಶ್ ರಾವತ್ ತಿಳಿಸಿದರು.ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಧೂಮಪಾನವನ್ನು ತೊರೆಯಲು ಸಾವಿರಾರು ವ್ಯಸನಿಗಳಿಗೆ ಈ ಶಿಬಿರ ಸಹಾಯಕವಾಗಿದೆ ಎಂದರು.ಯಶವಂತಪುರ ಶಾಸಕ ಎಸ್. ಟಿ.ಸೋಮಶೇಖರ್, ಗ್ಲೋಬಲ್ ಹಾಸ್ಪಿಟಲ್ಸ್ ಗ್ರೂಪ್‌ನ ವ್ಯವಸ್ಥಾಪಕ ಡಾ. ಕೆ. ರವೀಂದ್ರನಾಥ್ ಇದ್ದರು.

ಪ್ರತಿಕ್ರಿಯಿಸಿ (+)