ಮಂಗಳವಾರ, ಏಪ್ರಿಲ್ 13, 2021
32 °C

ಧೃತರಾಷ್ಟ್ರನಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  `ಕಪ್ಪು ಕನ್ನಡಕ ಧರಿಸಿದರೂ ಧೃತರಾಷ್ಟ್ರನಲ್ಲ...~ಅಣ್ಣನ ಮಗ ರಾಜ್ ಠಾಕ್ರೆ ಶಿವಸೇನೆಯಿಂದ ಹೊರನಡೆದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಟ್ಟಿದ ಸಂದರ್ಭದಲ್ಲಿ  ತಮ್ಮನ್ನು `ಧೃತರಾಷ್ಟ್ರ~ ಎಂದು ಕರೆದಾಗ ಬಾಳ ಠಾಕ್ರೆ ಈ ರೀತಿ ಪ್ರತಿಕ್ರಿಯಿಸಿದ್ದರು. ಪಕ್ಷದ ಮುಖವಾಣಿ `ಸಾಮ್ನಾ~ಗೆ ಸಂದರ್ಶನ ನೀಡಿದ್ದ ಸಂದರ್ಭದಲ್ಲಿ ರಾಜ್ ನಿರ್ಗಮನದ ಬಗ್ಗೆ ಠಾಕ್ರೆ ಮನಸ್ಸು ಬಿಚ್ಚಿ ಮಾತನಾಡಿದ್ದರು. `ಇಡೀ ಪ್ರಹಸನದಲ್ಲಿ ನಿಮ್ಮನ್ನು ಧೃತರಾಷ್ಟ್ರ ಎಂದು ಕರೆಯಲಾಗುತ್ತದೆ~ ಎಂಬ ಪ್ರಶ್ನೆಗೆ ಇದು ಅವರ ಉತ್ತರವಾಗಿತ್ತು.`ರಾಜ್ ನಿರ್ಗಮನದಿಂದ ನನಗೇನು ದುಃಖವಿಲ್ಲ~ ಎಂದಿದ್ದ ಅವರು, `ಗುಬ್ಬಚ್ಚಿ ಮರಿಗಳು ಗೂಡಿಗೆ ಬರಲೇ ಬೇಕು~ ಎಂದಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.