ಗುರುವಾರ , ಜನವರಿ 30, 2020
18 °C
ಟೆನ್‌ಪಿನ್

ಧ್ರುವ್‌, ಸಬೀನಾ ಮುಡಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನವದೆಹಲಿಯ ಧ್ರುವ್‌ ಸರ್ದಾ ಹಾಗೂ ತಮಿಳು ನಾಡಿನ ಸಬೀನಾ ಭಾನುವಾರ ಇಲ್ಲಿ ಕೊನೆಗೊಂಡ 25ನೇ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗ ದಲ್ಲಿ ಚಾಂಪಿಯನ್‌ ಆಗಿದ್ದಾರೆ.ಒರಾಯನ್‌ ಮಾಲ್‌ನ ‘ಬ್ಲೂ ಒ’ ಬೌಲಿಂಗ್‌ ಸೆಂಟರ್‌ನಲ್ಲಿ ನಡೆದ ಪುರುಷರ ವಿಭಾಗದ ಕೊನೆಯ ದಿನದ ಸ್ಪರ್ಧೆಯಲ್ಲಿ ಧ್ರುವ್‌ 414–369ರಿಂದ ಕರ್ನಾಟಕದ ಆಕಾಶ್‌ ಅಶೋಕ್‌ ಕುಮಾರ್‌ ಅವರನ್ನು ಮಣಿಸಿದರು. ನಾಕ್‌ಔಟ್‌ ಹಂತದಲ್ಲಿ ಎರಡು ಸುತ್ತುಗಳ ಫೈನಲ್‌ ಸ್ಪರ್ಧೆ ನಡೆಯಿತು. ಹೋದ ಬಾರಿ ಕೂಡ ಧ್ರುವ್‌ ಚಾಂಪಿಯನ್‌ ಆಗಿದ್ದರು.ಮಹಿಳೆಯರ ವಿಭಾಗದಲ್ಲಿ ಸಬೀನಾ 353–307ರಿಂದ ಕರ್ನಾಟಕದ ಜೂಡಿ ಅಲ್ಬಾನ್‌ ಎದುರು ಗೆದ್ದರು. ಸಬೀನಾ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡರು.

ಪ್ರತಿಕ್ರಿಯಿಸಿ (+)