ಸೋಮವಾರ, ಮೇ 16, 2022
28 °C

ನಂದಿ ವಿಗ್ರಹಕ್ಕೆ ಕುಂಕುಮ ಅಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದ ಸಮೀಪದ 15 ಅಡಿ ಎತ್ತರದ ಕಣಿವೆ ನಂದಿ ವಿಗ್ರಹಕ್ಕೆ ಸೋಮವಾರ ವಿಶಿಷ್ಟ ರೀತಿಯಲ್ಲಿ ಪೂಜಾಭಿಷೇಕ ಸಾಂಗೋಪಾಂಗವಾಗಿ ಜರುಗಿತು.ಪೂಜಾಭಿಷೇಕದ ಪ್ರಯುಕ್ತ 500ಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ನಗರದ ಸತ್ಯಜ್ಞಾನ ಸಿದ್ಧಾಶ್ರಮ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಭಿಷೇಕ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲದವರೆಗೆ ನಡೆಯಿತು. ಇದೇ ವೇಳೆ ಸುತ್ತಲಿನ ಗಾಯಕರಿಂದ ಮತ್ತು ಭಜನಾ ತಂಡದಿಂದ ಸಂಗೀತ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು.ಇಡೀ ಪೂಜಾಭಿಷೇಕ ಪೂರ್ಣಗೊಳ್ಳುವವರೆಗೆ ಸಂಗೀತ ಕಾರ್ಯಕ್ರಮ ನಡೆಯಿತು. ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಮಾಡುವುದರಿಂದ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ನಂಬಿಕೆಯಿದೆ.

ಬರಗಾಲಕ್ಕೆ ತುತ್ತಾಗಿರುವ ನಮ್ಮ ಬಯಲುಸೀಮೆ ಜಿಲ್ಲೆಯಲ್ಲಿ ಮಳೆಯಾಗಬೇಕು. ಬಸವೇಶ್ವರ ಮೂರ್ತಿಯ ಈ ಭಾಗದಲ್ಲಿ ದೊಡ್ಡ ಮೂರ್ತಿಯಾಗಿದ್ದು, ಇಲ್ಲಿನ ಗ್ರಾಮಸ್ಥರಿಗೆ ಮೂರ್ತಿಯ ಮೇಲೆ ಗಾಢವಾದ ನಂಬಿಕೆಯಿದೆ ಎಂದು ಟ್ರಸ್ಟ್ ಪ್ರತಿನಿಧಿ ಅರುಣ್ ಭಗವಾನ್ `ಪ್ರಜಾವಾಣಿ~ಗೆ ತಿಳಿಸಿದರು.  ನಂದಿಬೆಟ್ಟ, ದೊಡ್ಡಬಳ್ಳಾಪುರ, ತುಮಕೂರು ಮುಂತಾದ ಕಡೆ    ಹೋಗುವ ಜನರು ಪ್ರಯಾಣ ಮುಂದುವರೆಸುವ ಮುನ್ನ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಪೂಜೆ ನಂತರವಷ್ಟೇ ಪ್ರಯಾಣ ಬೆಳೆಸುತ್ತಾರೆ~ ಎಂದು ತಿಳಿಸಿದರು. ಅಪಾರ ಜನಸ್ತೋಮ ನೆರೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.