ದೇಹಾರೋಗ್ಯ ಹದಗೆಟ್ಟಾಗ ಪ್ರತಿಯೊಬ್ಬರೂ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ಆರೋಗ್ಯ ಸಂಪೂರ್ಣ ಕುಸಿದರೂ ಕೆಲವರ ಮುಖದ ನಗು ಮಾಸುವುದೇ ಇಲ್ಲ. ಮತ್ತೆ ಕೆಲವರು ತಮಗಿರುವ ರೋಗ, ಅಸ್ವಸ್ಥತೆಯ ಸಂಪೂರ್ಣ ಮಾಹಿತಿ ಪಡೆಯುತ್ತಾರೆ. ಇನ್ನು ಕೆಲವರು ಏನೂ ಆಗಿಯೇ ಇಲ್ಲ ಎಂಬಂತೆ ಕೆಲಸಕ್ಕೆ ಹೋಗುತ್ತಾರೆ. ಇನ್ನೊಂದಿಷ್ಟು ಜನ ಖಿನ್ನತೆಗೆ ಜಾರಿ ಚಿಪ್ಪಿನೊಳಗೆ ಅಡಗಿಕೊಳ್ಳುತ್ತಾರೆ.

ನಮ್ಮ ವ್ಯಕ್ತಿತ್ವ ಹೇಗೇ ಇರಲಿ. ಅನಾರೋಗ್ಯಕ್ಕೆ ನಾವು ಹೇಗೆಯೇ ಪ್ರತಿಕ್ರಿಯಿಸಲಿ. ನಮಗೆಲ್ಲ ಬೇಕಾಗಿರುವುದು ಮನಸ್ಸಿನ ಶಕ್ತಿ. ಉಕ್ಕಿನಂತಹ ಮನೋಬಲ. ದೇಹ ಕುಸಿಯುತ್ತಿರುವಾಗ ಮನಸ್ಸು ಗಟ್ಟಿಯಾಗಿರಬೇಕು. ಇದು ಮದುವೆಯ ರೀತಿ. ಒಬ್ಬ ಸಂಗಾತಿ ಕುಸಿದು ಕುಳಿತಾಗ ಮತ್ತೊಬ್ಬ ಸಂಗಾತಿ ಬಂಡೆಯಷ್ಟು ಗಟ್ಟಿಯಾಗಿರಬೇಕು. ಸ್ಥಿರವಾಗಿರಬೇಕು.

ಶಕ್ತಿ ಎಂಬುದು ನಂಬಿಕೆಯ ಜತೆ ತಳಕು ಹಾಕಿಕೊಂಡಿದೆ. ಆ ನಂಬಿಕೆ, ವಿಶ್ವಾಸ ದೇವರ ಮೇಲೆ ಇಟ್ಟಿರಬಹುದು. ವಿಶ್ವ ನಿಯಮಗಳ ಮೇಲಿನ ನಂಬಿಕೆಯಾಗಿರಬಹುದು. ವಿಜ್ಞಾನ ಅಥವಾ ಬದುಕಿನ ಮೇಲಿನ ನಂಬಿಕೆಯಾಗಿರಬಹುದು. ಅಲ್ಲಾಡಿಸದಂತಹ ನಂಬಿಕೆ, ವಿಶ್ವಾಸ ಇಲ್ಲಿ ಮುಖ್ಯ.

ನನ್ನ ಸ್ನೇಹಿತೆಯೊಬ್ಬಳು ಅಸ್ವಸ್ಥಳಾದಾಗ ಅವಳು ತನ್ನ ದೇಹಾರೋಗ್ಯ ಕುಸಿದಿದೆ ಎಂದು ಹೇಳಲೂ ಇಲ್ಲ. ಆ ಬಗ್ಗೆ ಯೋಚಿಸಲೂ ಇಲ್ಲ. ಅದರಲ್ಲಿ ಯೋಚಿಸುವುದು ಏನಿದೆ, ಚಿಕಿತ್ಸೆ ಕೊಡಿಸಬೇಕು ಅಷ್ಟೇ ಅಂದಳು. ನಿತ್ಯದ ಕೆಲಸದಂತೆ ಚಿಕಿತ್ಸೆಯನ್ನೂ ಪಡೆಯತೊಡಗಿದಳು. ಹತ್ತು ದಿನಗಳಾದರೂ ಜ್ವರ ಇಳಿಯದಾಗ ಮಾತ್ರ ಆಕೆ ತಾನು ಸಾಯಬಹುದೇ ಎಂದು ಯೋಚಿಸಿದಳು. ಹಾಗೆ ಯೋಚಿಸುವಾಗಲೂ ಅವಳಲ್ಲಿ ಭಯ ಇರಲಿಲ್ಲ. ಒಂದು ತರಹದ ನಿರ್ಲಿಪ್ತ ಭಾವವಿತ್ತು.

ತಾನು ಸರಿಯಾದ ಔಷಧ ಪಡೆಯುತ್ತಿದ್ದೇನೆ ಎಂಬ ನಂಬಿಕೆ ಅವಳಲ್ಲಿತ್ತು. ಆ ನಂಬಿಕೆಯೇ ಅವಳನ್ನು ಭಯದಿಂದ ಮುಕ್ತವಾಗಿಸಿ ಗಟ್ಟಿಯಾಗಿಸಿತು. ಬದುಕಿನ ಬಗ್ಗೆ ಅವಳಲ್ಲಿ ವಿಶ್ವಾಸವಿತ್ತು. ಆ ವಿಶ್ವಾಸವೇ ಈ ಹಿಂದೆ ಅವಳ ದೈಹಿಕ, ಮಾನಸಿಕ ನೋವುಗಳನ್ನು ಗುಣಪಡಿಸಿತ್ತು.

ಜೀವನಪರ್ಯಂತ ನಿರ್ದಿಷ್ಟ ಮಾತ್ರೆಗಳನ್ನು ಆಕೆ ನುಂಗಬೇಕಿತ್ತು. ಪ್ರತಿನಿತ್ಯ ಅರ್ಧ ಗಂಟೆ ತಪ್ಪದೇ ನಡೆಯಬೇಕಿತ್ತು. ಕಡಿಮೆ ಕೊಬ್ಬಿನ, ಕಡಿಮೆ ಉಪ್ಪಿನ ಆಹಾರಗಳನ್ನು ಸೇವಿಸಬೇಕಿತ್ತು. ಆಕೆಯ ಜ್ವರ ಎಂದೋ ಕಡಿಮೆಯಾಗಿತ್ತು. ಉಳಿದ ರೋಗ ಲಕ್ಷಣಗಳು ಮಾಯವಾಗಿದ್ದವು. ಇದನ್ನೆಲ್ಲ ಮಾಡುತ್ತಲೂ ಆಕೆ ಕಚೇರಿಗೆ ಹೋಗುವುದನ್ನು ಮಾತ್ರ ತಪ್ಪಿಸಲಿಲ್ಲ.

ಅನಾರೋಗ್ಯದ ನಂತರ ಆರೋಗ್ಯ ಮತ್ತೆ ಸುಧಾರಿಸುತ್ತದೆ ಎಂಬ ಅಚಲ ವಿಶ್ವಾಸ ಅವಳಲ್ಲಿತ್ತು. ಅದು ಪ್ರಕೃತಿಯ ನಿಯಮ. ಅದು ಅವಳ ಬದುಕಿನ ಅನುಭವವೂ ಆಗಿತ್ತು. ಆ ಬಗ್ಗೆ ಅವಳಲ್ಲಿ ಸ್ವಲ್ಪವೂ ಅನುಮಾನ ಇರಲಿಲ್ಲ.

ತಮ್ಮ ಬದುಕಿನ ಅನುಭವಗಳನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಯಾರಾದರೂ ಇಂತಹ ವಿಶ್ವಾಸ ಬೆಳೆಸಿಕೊಳ್ಳಬಹುದು. ಹಿಂದೆ ಕಳೆದುಹೋದ ಕಾಲವನ್ನು, ನೋವಿನ ಅನುಭವಗಳನ್ನು ದುರಂತಮಯವಾಗಿ ಹೇಳಿಕೊಳ್ಳಬಹುದು. ಆದರೆ, ಇದು ನಿಮ್ಮನ್ನೇ ತೊಂದರೆಗೆ ದೂಡುತ್ತದೆ. ನಕಾರಾತ್ಮಕ ಮನೋಭಾವ ಪದೇ ಪದೇ ನಿಮ್ಮಲ್ಲಿ ಅನಾರೋಗ್ಯ ಹುಟ್ಟುಹಾಕುತ್ತದೆ. ರೋಗ ನಿರೋಧಕ ವ್ಯವಸ್ಥೆಯನ್ನು ಹಾಳುಗೆಡವುತ್ತದೆ. ನಿಮ್ಮನ್ನು ನೀವು ಆಳವಾಗಿ, ಪ್ರಾಮಾಣಿಕವಾಗಿ ಪ್ರೀತಿಸಿಕೊಂಡಲ್ಲಿ ಒಳಗಿನಿಂದ ಇಂತಹ ವಿಶ್ವಾಸ, ನಂಬಿಕೆ ಹುಟ್ಟುತ್ತದೆ. ಕಾಲ ಸರಿದಂತೆ ಎಲ್ಲವೂ ನಿಮಗೆ ನೆನಪಿರಲಾರದು. ಆದರೆ, ಆ ವಿಶ್ವಾಸ ಮಾತ್ರ ನಿಮ್ಮಲ್ಲಿ ಉಳಿದುಕೊಳ್ಳುತ್ತದೆ.

ಇಂತಹ ನಂಬಿಕೆ, ವಿಶ್ವಾಸ ಬೆಳೆಸಿಕೊಳ್ಳುವುದು ಹೇಗೆ ಎಂಬ ಅನುಮಾನ ನಿಮ್ಮಲ್ಲಿ ಇದ್ದಲ್ಲಿ ಅದು ಹೀಗೆ...

ನಿತ್ಯವೂ ಹೊಸ ದಿನ ಎಂಬಂತೆ ಬದುಕಿ. ಬೆಳಿಗ್ಗೆ ಕಣ್ಣುಬಿಟ್ಟಾಗ ಮತ್ತೊಂದು ದಿನವನ್ನು ವಿಶ್ವಾಸದಿಂದ ನನಗೆ ಕೊಡಲಾಗಿದೆ ಎಂದು ಅರಿಯಿರಿ. ಸೂರ್ಯನ ಬೆಳಕು ಅದೇ ನಂಬಿಕೆಯಿಂದ ಹೊಳೆಯುತ್ತದೆ. ಭೂಮಿ ತನ್ನ ಅಕ್ಷದ ಮೇಲೆ ಎಂದಿನ ನಂಬಿಕೆಯಿಂದ ತಿರುಗುತ್ತಿದೆ. ನಿಮ್ಮ ಹೃದಯವೂ ಲಯಬದ್ಧವಾಗಿ ಬಡಿಯುತ್ತಿದೆ. ನರ, ನಾಡಿಗಳಲ್ಲಿ ರಕ್ತ ಸರಾಗವಾಗಿ ಹರಿಯುತ್ತಿದೆ. ಪತ್ರಿಕೆಯೂ ಎಂದಿನಂತೆ ಬಾಗಿಲಿನ ಬಳಿ ಬಿದ್ದಿದೆ.

ನಂಬಿಕೆಯ ಬಗ್ಗೆ ಮಾತನಾಡಿ. ನಂಬಿಕೆಯ ಬಗ್ಗೆ ಯೋಚಿಸಿ. ಯಾರಾದರೂ ಕಷ್ಟದ ಸ್ಥಿತಿಯಲ್ಲಿದ್ದಾಗ, ಆರೋಗ್ಯ ಹದಗೆಟ್ಟಿದ್ದಾಗ ಪಾಪ ಎಂದು ಮರುಗಬೇಡಿ. ಸಕಾರಾತ್ಮಕ ಶಕ್ತಿಯನ್ನು ಅವರತ್ತ ಕಳುಹಿಸಿ. ನಿಮಗೆ ಮತ್ತಷ್ಟು ಬಲ ಬರಲಿ ಎಂದು ಪ್ರಾರ್ಥಿಸಿ.

`ನಂಬಿಕೆ ನನಗೆ ಸಮತೋಲನ, ಸಮಾಧಾನ ನೀಡುತ್ತದೆ. ಒತ್ತಡದ ಸನ್ನಿವೇಶಕ್ಕೆ ಸಿಲುಕಿದಾಗ, ಹವಾಮಾನ ಬದಲಾದಾಗ ನಾನು ಅಸ್ವಸ್ಥಳಾಗುವುದಿಲ್ಲ. ಡೆಡ್ಲೈನ್ಗಳ ಬಗ್ಗೆ ಚಿಂತಿತಳಾಗುವುದಿಲ್ಲ. ಹೊಯ್ದೊಡುವ ಸಮುದ್ರದ ಅಲೆಗಳ ಮಧ್ಯೆ ಹಡಗು ಸ್ಥಿರವಾಗಿ ಚಲಿಸುವಂತೆ ಬದುಕುತ್ತಿದ್ದೇನೆ' ಎಂದುಕೊಳ್ಳಿ.

ನಂಬಿಕೆ ಎಂಬುದು ಆಶಾಭಾವನೆ. ನಂಬಿಕೆ ಜ್ಞಾನೋದಯಕ್ಕೆ ದಾರಿಯಲ್ಲ. ಆದರೆ, ನಂಬಿಕೆಯಿಂದ ಜ್ಞಾನೋದಯವಾದಂತಹ ಸ್ಥಿತಿಯಲ್ಲಿ ಬದುಕಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.