ಸೋಮವಾರ, ಮೇ 23, 2022
21 °C

ನಕಲಿ ಕಂದಾಯ ನಿರೀಕ್ಷಕನಿಗೆ ಜೈಲು ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಬಾಗ: ತಾಲ್ಲೂಕಿನ ಕುಡಚಿ ಪಟ್ಟಣ ಪಂಚಾಯ್ತಿಯಲ್ಲಿ  28-7-2000 ರಿಂದ 31-5-2003ರ ವರೆಗೆ  ಖೊಟ್ಟಿ ಕಾಗದ ಪತ್ರಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕಂದಾಯ ನಿರೀಕ್ಷಕ ಎಂದು ಕಾರ್ಯ ನಿರ್ವಹಿಸಿದ ಆರೋಪದಡಿ ಶ್ರೀಧರ ಕಲ್ಲಪ್ಪ ಬೆಳವಿ ಮತ್ತು ಸುರೇಶ ಮಲ್ಲಪ್ಪ ಸಂಪಗಾಂವ ಅವರಿಗೆ ರಾಯಬಾಗದ ಜೆ.ಎಂ.ಎಫ್.ಸಿ. ನ್ಯಾಯಾಲಯ ಈ ಇಬ್ಬರೂ ಆರೋಪಿತರಿಗೆ ತಲಾ ಮೂರು ವರ್ಷ ಸಾದಾ ಸೆರೆ ವಾಸ ಮತ್ತು ಎಂಟು ಸಾವಿರ ದಂಡ ವಿಧಿಸಿದೆ.ಸದರಿ ಪ್ರಕರಣವನ್ನು 2004ರಲ್ಲಿ ಆಗಿನ ಚಿಕ್ಕೋಡಿ ಉಪವಿಭಾಗಧಿಕಾರಿಗಳು ಇಲ್ಲಿನ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು.  ಹೆಚ್ಚುವರಿ ನ್ಯಾಯಾಧೀಶ ವಿಜಯಕುಮಾರ  ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರಿ ವಕೀಲರಾಗಿ ಎಂ.ಪಿ.ಗಾಂವಕರ ವಾದಿಸಿದ್ದರು.ಹಾಸ್ಟೇಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಬೆಳಗಾವಿ: ನಗರದ ಗಣೇಶಪುರದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೇಲ್‌ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.ನಗರದ ಗಣಾಚಾರಿ ಗಲ್ಲಿ ನಿವಾಸಿ, 10ನೇ ತರಗತಿ ವಿದ್ಯಾರ್ಥಿ ವಿಶಾಲ್ ವಿಲಾಸ್ ಶಾರಬಿದರೆ (16) ಮೃತಪಟ್ಟ ದುರ್ದೈವಿಯಾಗಿದ್ದಾರೆ.ಮನೆಯಿಂದ ಶನಿವಾರವಷ್ಟೇ ವಿಶಾಲ್ ಹಾಸ್ಟೇಲ್‌ಗೆ ಬಂದಿದ್ದನು. ಪಾಲಕರು ಬೈದಿರುವುದಕ್ಕೆ ಮನನೊಂದು ಆತನು ಹಾಸ್ಟೇಲ್‌ನ ಊಟದ ಕೋಣೆಯಲ್ಲಿ ರಾತ್ರಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.