ನಾಗಪುರ(ಪಿಟಿಐ): `ಅಣ್ಣಾ ತಂಡದವರು ನಕ್ಸಲ್ರಂತೆ ವರ್ತಿಸುತ್ತಿದ್ದಾರೆ~ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಆಪಾದಿಸಿದ್ದಾರೆ.ಭ್ರಷ್ಟಾಚಾರ ವಿರೋಧಿ ಜನ ಲೋಕಪಾಲ ಬಗ್ಗೆ ಪ್ರಸ್ತಾಪಿಸುತ್ತಿರುವ ಅಣ್ಣಾ ತಂಡ ಸಮಸ್ಯೆ ಪರಿಹಾರದ ಬಗ್ಗೆ ಹೆಚ್ಚು ಒತ್ತು ಕೊಡದೆ, ವ್ಯವಸ್ಥೆಯ ಹಳಿ ತಪ್ಪಿಸುವ ಬಗ್ಗೆ ಒಲವು ತೋರಿಸುತ್ತಿದೆ ಎಂದು ಕಿಡಿ ಕಾರಿದ್ದಾರೆ.

`ಮ್ಯಾಗ್ಸೆಸೆ ಪ್ರಶಸ್ತಿ ಗಳಿಸಿರುವವರು ಮಾತ್ರ ರಾಷ್ಟ್ರದ ಜನತೆಗೆ ಪಾಠ ಕಲಿಸುವ ಬುದ್ಧಿವಂತರಲ್ಲ~ ಎಂದೂ ಸ್ವಾಮಿ ಅಪರೋಕ್ಷವಾಗಿ ಅಣ್ಣಾ ತಂಡದ ಕಿರಣ್ ಬೇಡಿಯವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂದು ಸಮಾಲೋಚನೆ (ಪುಣೆ ವರದಿ): ಭ್ರಷ್ಟಾಚಾರ ವಿರೋಧಿ ಜನ ಲೋಕಪಾಲ ಮಸೂದೆ ಕುರಿತ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳುವ ಮುನ್ನ ಶುಕ್ರವಾರ ತಮ್ಮ ತಂಡದ ಸದಸ್ಯರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಅಣ್ಣಾ ಹಜಾರೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.