ಹೊಸ್ಮಾರು(ಉಡುಪಿ): `ಬಂದೂಕು ಮತ್ತು ರಕ್ತಕ್ರಾಂತಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆ ವಿರುದ್ಧ ಹೋಗುತ್ತಿರುವ ಸಂಘಟನೆ ಜತೆಗೆ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಕ್ಸಲ್ ಪೀಡಿತ ಗ್ರಾಮ, ಕಾರ್ಕಳ ತಾಲ್ಲೂಕಿನ ಹೊಸ್ಮಾರುವಿನಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಸುನೀಲ್ ಕುಮಾರ್ ಪರ ಚುನಾವಣಾ ಪ್ರಚಾರ ಆರಂಭಿಸಿದ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

`ಬಂದೂಕಿನಿಂದ ಗೂಂಡಾಗಿರಿ ಮಾಡಿ ಸಮಾಜ ಪರಿವರ್ತನೆ ಮಾಡುತ್ತೇವೆ ಎಂದು ಜನಸಾಮಾನ್ಯರ ಮೇಲೆ ನಕ್ಸಲರು ಪ್ರಹಾರ ಮಾಡುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಕೋವಿ, ಕತ್ತಿ ಹಿಡಿದು ಹೋರಾಡುವವರ ವಿರುದ್ಧ ನಮ್ಮ ಸಮರ~ ಎಂದು ನಕ್ಸಲರಿಗೆ ಎಚ್ಚರಿಕೆ ನೀಡಿದ ಅವರು, `ಹಾಗಾಗಿಯೇ ಸ್ವಾಭಿಮಾನ, ಸ್ವಂತಿಕೆಯಿಂದ ಶ್ರಮಜೀವಿಗಳಾಗಿ ಬದುಕುತ್ತಿರುವ ಜನರಿರುವ ಈ ಭಾಗದಿಂದಲೇ ಮೊದಲ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ~ ಎಂದರು.

ಯುಪಿಎ `ಕಿಚನ್ ಫ್ರೆಂಡ್ಸ್~: `ದೇಶದ ದೊಡ್ಡ ರಾಜಕಾರಣಿ ಇಂದಿರಾ ಗಾಂಧಿ ಅವರು ಸ್ಪರ್ಧಿಸಿದ್ದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ದೇಶದ ರಾಜಕಾರಣಕ್ಕೆ ಬದಲಾವಣೆ ತಂದುಕೊಟ್ಟಿತು. ಅಲ್ಲದೇ ಇದು ಕಾಂಗ್ರೆಸ್ಗೆ ಎಚ್ಚರಿಕೆ ಗಂಟೆಯಾಗಿರುವ ಕ್ಷೇತ್ರವೂ ಹೌದು. ಈ ಬಾರಿಯ ಫಲಿತಾಂಶವೂ ಕಾಂಗ್ರೆಸ್ಗೆ ಎಚ್ಚರಿಕೆಯ ಗಂಟೆಯಾಗಲಿದೆ~ ಎಂದು ವಿಶ್ಲೇಷಿಸಿದರು.

`ಯುಪಿಎ ಸರ್ಕಾರದಲ್ಲಿ `ಕಿಚನ್ ಫ್ರೆಂಡ್ಸ್~ ಆಗಿರುವ ಸೋನಿಯಾ ಗಾಂಧಿ ಅವರ ಪರಮಾಪ್ತರೂ, ಈ ಭಾಗದವರೇ ಆಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರಾದ ವೀರಪ್ಪ ಮೊಯಿಲಿ, ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ ಇಷ್ಟೊಂದು ಸಲ ಆಯ್ಕೆಯಾಗಿ ಕರಾವಳಿ ಭಾಗಕ್ಕೆ ಮಾಡಿದ್ದಾದರೂ ಏನು?~ ಎಂದು ಪ್ರಶ್ನಿಸಿದ ಅವರು, `ಕಾಂಗ್ರೆಸ್ ಸಂಸದರು ಮಾಡದೇ ಇರುವ ಹಲವು ಅಭಿವೃದ್ಧಿ ಕೆಲಸಗಳನ್ನು ಸಂಸದನಾಗಿ ನಾನು ಮಾಡ್ದ್ದಿದೇನೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.