ಭುವನೇಶ್ವರ (ಪಿಟಿಐ): ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಬಿಡುಗಡೆಗೆ ಪ್ರತಿಯಾಗಿ, ಜೈಲಿನಲ್ಲಿರುವ ತಮ್ಮ 13 ಅನುಯಾಯಿಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕೆಂಬ ನಕ್ಸಲೀಯರ ಬೇಡಿಕೆಯನ್ನು ಒಡಿಶಾ ಸರ್ಕಾರ ಒಪ್ಪಿಕೊಂಡಿದೆ.

ತಮ್ಮ ಬೇಡಿಕೆ ಈಡೇರಿಕೆಗೆ ನಕ್ಸಲೀಯರು ವಿಧಿಸಿದ್ದ ಗಡುವು ಬುಧವಾರ ಸಂಜೆ 5 ಗಂಟೆಗೆ ಕೊನೆಗೊಂಡ ಬಳಿಕ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ.

`13 ಜನರ ವಿರುದ್ಧದ ಪ್ರಕರಣಗಳನ್ನು ಕಾನೂನಿನ ಪ್ರಕಾರ ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ. ಇದರಿಂದ ತೃಪ್ತರಾಗಿ ನಕ್ಸಲೀಯರು ಶಾಸಕರ ಬಿಡುಗಡೆಗೆ ಮುಂದಾಗುವರು ಎಂಬ ವಿಶ್ವಾಸ ಇದೆ~ ಎಂದು ಗೃಹ ಕಾರ್ಯದರ್ಶಿ ಯು.ಎನ್.ಬೆಹೆರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಮೊದಲು, ತಮ್ಮ ಗಡುವಿನ ಸಮಯ ಹತ್ತಿರ ಬರುತ್ತಿದ್ದರೂ ಸರ್ಕಾರದಿಂದ ಯಾವುದೇ ನಿರ್ಧಾರ ಹೊರಬೀಳದ್ದನ್ನು ಕಂಡು ಬಂಡುಕೋರರು ಕುಪಿತರಾಗಿದ್ದರು. ಮತ್ತೆ ಗಡುವು ವಿಸ್ತರಣೆಗೆ ನಿರಾಕರಿಸಿದ್ದ ಅವರು, ಒಡಿಶಾ ಸರ್ಕಾರದಲ್ಲಿ ತಾವು ವಿಶ್ವಾಸ ಕಳೆದುಕೊಂಡಿರುವುದರಿಂದ 37 ವರ್ಷದ ಶಾಸಕರ ಭವಿಷ್ಯವನ್ನು ತಮ್ಮ `ಪ್ರಜಾ ನ್ಯಾಯಾಲಯ~ವೇ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದ್ದರು.

ಈ ಕುರಿತು ಮಾಧ್ಯಮವೊಂದಕ್ಕೆ ಸಂದೇಶ ಕಳುಹಿಸಿದ್ದ ಸಿಪಿಐ (ಮಾವೊವಾದಿ) ಆಂಧ್ರ- ಒಡಿಶಾ ಗಡಿ ವಿಶೇಷ ವಲಯ ಸಮಿತಿ ಮುಖಂಡರೊಬ್ಬರು, ನಕ್ಸಲೀಯರ ಬಿಡುಗಡೆ ವಿಷಯವನ್ನು ಸರ್ಕಾರ ಲಘುವಾಗಿ ತೆಗೆದುಕೊಂಡಿದೆ ಎಂದು ಟೀಕಿಸಿದ್ದರು.

ನಕ್ಸಲೀಯರ ಷರತ್ತಿನಂತೆ ಅವರ ಸಹವರ್ತಿಗಳ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದರಿಂದ ಹಿಕಾಕ ಅವರ ಬಿಡುಗಡೆಯಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಭರವಸೆ ವ್ಯಕ್ತಪಡಿಸಿದ ಬೆನ್ನಲ್ಲೇ ಮಾವೊ ಮುಖಂಡರಿಂದ ಈ ಸಂದೇಶ ಹೊರಬಿದ್ದಿತ್ತು.

`ಈಗಾಗಲೇ ನಾಲ್ಕು ಬಾರಿ ಗಡುವನ್ನು ವಿಸ್ತರಿಸಲಾಗಿದೆ. ಮುಂದೆಂದೂ ಅದನ್ನು ವಿಸ್ತರಿಸುವ ಸಾಧ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಪ್ರಜಾ ನ್ಯಾಯಾಲಯ ನಡೆಯಲಿದ್ದು ಅದರ ಸ್ಥಳ ಮತ್ತು ಸಮಯವನ್ನು ಬಳಿಕ ನಿರ್ಧರಿಸಲಾಗುವುದು~ ಎಂದು ನಕ್ಸಲ್ ಪರ ನ್ಯಾಯವಾದಿ ನಿಹಾರ್ ರಂಜನ್ ಪಟ್ನಾಯಕ್ ತಿಳಿಸಿದ್ದರು.

ಬಿಡುಗಡೆಗೊಳಿಸಬೇಕಾದ ತಮ್ಮ ಬೆಂಬಲಿಗರನ್ನು ಸಂಪೂರ್ಣವಾಗಿ ಆರೋಪ ಮುಕ್ತಗೊಳಿಸಬೇಕು ಎಂದು ವಲಯ ಸಮಿತಿ ಸರ್ಕಾರಕ್ಕೆ ಷರತ್ತು ವಿಧಿಸಿತ್ತು.

55 ಪೊಲೀಸರ ಹತ್ಯೆಗೆ ಕಾರಣನಾದ ಚೆಂದ ಭೂಷಣಂ ಅಲಿಯಾಸ್ ಘಾಸಿ ಅವರ ಹೆಸರನ್ನು ವಲಯ ಸಮಿತಿ ಬೇಡಿಕೆ ಪಟ್ಟಿಯಿಂದ ಕೈಬಿಟ್ಟಿತ್ತು.

ಸುರಕ್ಷಿತವಾಗಿರುವೆ- ಹಿಕಾಕ
ಒತ್ತೆಯಾಳು ಹಿಕಾಕ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ.ಕೆ.ಪಟ್ನಾಯಕ್ ಮತ್ತು ಕೊರಾಪುಟ್ ಜಿಲ್ಲಾಧಿಕಾರಿ ಜೆ.ಎಸ್.ರಾಮಚಂದ್ರ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ತಾವು ಸುರಕ್ಷಿತರಾಗಿರುವುದಾಗಿ ತಿಳಿಸ್ದ್ದಿದಾರೆ. ಕೊರಾಪುಟ್ ಸಂಸದ ಬಿಜೆಡಿಯ ಜಯರಾಮ್ ಪಾಂಗಿ ಜೊತೆಯೂ ಶಾಸಕರು ಮಾತುಕತೆ ನಡೆಸಿದರು.

ಬುಧವಾರ ಸಂಜೆ 5 ಗಂಟೆಗೆ ಹಿಕಾಕ ಅವರನ್ನು ಬಿಡುಗಡೆ ಮಾಡಿದರೆ ಮಾತ್ರ ಸೆರೆಮನೆಯಲ್ಲಿರುವ ಮಾವೊವಾದಿಗಳ ಮೇಲಿರುವ ಆರೋಪಗಳಲ್ಲಿ `ಸೂಕ್ತ~ವಾದುದನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪಂಚಾಯತ್ ರಾಜ್ ಕಾರ್ಯದರ್ಶಿ ಪಿ.ಕೆ.ಜೆನಾ ಈ ಮುನ್ನ ತಿಳಿಸಿದ್ದರು.

ಸುಪ್ರೀಂಕೋರ್ಟ್ಗೆ ಅರ್ಜಿ: ಇಂದೇ ವಿಚಾರಣೆ
ಶಾಸಕರ ಬಿಡುಗಡೆಗೆ ಪ್ರತಿಯಾಗಿ ನಕ್ಸಲೀಯರನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯುವಂತೆ ನಿರ್ದೇಶನ ನೀಡಬೇಕೆಂದು ಕೋರಿ ನಿವೃತ್ತ ಸೇನಾಧಿಕಾರಿಯೊಬ್ಬರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಗುರುವಾರವೇ ಇದರ ವಿಚಾರಣೆ ನಡೆಸಲಿದೆ.

ಮಾವೊವಾದಿಗಳು ಸರ್ಕಾರಕ್ಕೆ ನೀಡಿದ್ದ ಗಡುವು ಪೂರ್ಣಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇದ್ದಂತೆಯೇ ನಕ್ಸಲ್ ವಿರೋಧಿ ಕಾರ್ಯಾಚರಣೆ ಪರಿಣತರಾದ ನಿವೃತ್ತ ಮೇಜರ್ ಜನರಲ್ ಗಗನ್ದೀಪ್ ಸಿಂಗ್ ಈ ಅರ್ಜಿ ಸಲ್ಲಿಸಿದರು.

ಭದ್ರತಾ ಪಡೆ ಸಿಬ್ಬಂದಿ ತಮ್ಮ ಪ್ರಾಣವನ್ನು ಒತ್ತೆಯಾಗಿಟ್ಟು ನಕ್ಸಲೀಯರನ್ನು ಬಂಧಿಸಿರುವುದರಿಂದ ಅವರನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಅವರು ಕೋರಿದ್ದಾರೆ. ಅಲ್ಲದೆ ಬುಧವಾರಕ್ಕೆ ಗುಡುವು ಕೊನೆಗೊಳ್ಳುವುದರಿಂದ ಕೂಡಲೇ ತಮ್ಮ ಅರ್ಜಿಯ ವಿಚಾರಣೆ ನಡೆಸಬೇಕೆಂದೂ ಅವರು ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.