ನವದೆಹಲಿ (ಪಿಟಿಐ): ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಾಗಿ ವಾಸವಿರುವ ಬ್ಲಾಕ್ ಹಾಗೂ ಗ್ರಾಮ ಸಮುದಾಯಗಳನ್ನು ವಿವಿದೋದ್ದೇಶ ಅಭಿವೃದ್ಧಿ ಕಾರ್ಯಕ್ರಮದ ಘಟಕಗಳನ್ನಾಗಿ (ಎಂಎಸ್ಡಿಪಿ) ಪರಿವರ್ತಿಸುವುದು ಸೇರಿದಂತೆ ಹಲವು ಪ್ರಮುಖ ಪ್ರಸ್ತಾವಗಳಿಗೆ ಕೇಂದ್ರ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

ಆಂಧ್ರಪ್ರದೇಶ, ಛತ್ತೀಸ್ಗಢ, ಗುಜರಾತ್, ಪಂಜಾಬ್ ರಾಜಸ್ತಾನ ಹಾಗೂ ತ್ರಿಪುರಾ ರಾಜ್ಯಗಳನ್ನು ಸಹ ಈ ಯೋಜನೆಗೆ ಒಳಪಡಿಸಲಾಗಿದೆ.

ನಕ್ಸಲ್ಪೀಡಿತ 9 ರಾಜ್ಯಗಳ 2,199 ಸ್ಥಳಗಳಲ್ಲಿ ರೂ 3,046 ಕೋಟಿ ವೆಚ್ಚದಲ್ಲಿ ಬಿಎಸ್ಎನ್ಎಲ್ ಮೊಬೈಲ್ ಟವರ್ಗಳನ್ನು ಒಂದು ವರ್ಷ ಅವಧಿಯಲ್ಲಿ ಅಳವಡಿಸಲು ಕೂಡ ಸಂಪುಟ ನಿರ್ಣಯ ತೆಗೆದುಕೊಂಡಿದೆ.

ಗಣಿ ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರು ಸೇರಿದಂತೆ ಟ್ಯಾಕ್ಸಿ ಚಾಲಕರು, ರಿಕ್ಷಾ ತಳ್ಳುವವರು, ಚಿಂದಿ ಆಯುವವರಿಗೂ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ವಿಸ್ತರಿಸಲು ಅನುಮತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.