ಶನಿವಾರ, ಮೇ 8, 2021
23 °C

ನಗರದಲ್ಲಿ ಇಂದು- ಏಪ್ರಿಲ್ 24, ಮಂಗಳವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಪೇಗೌಡನಗರ ನಾಗರಿಕರ ವೇದಿಕೆ: ನಂ 118, 1ನೇ ಅಡ್ಡರಸ್ತೆ, ವಿನಾಯಕ ಬಡಾವಣೆ, ಕೆ. ಜಿ. ನಗರ. ಡಾ. ರಾಜ್‌ಕುಮಾರ್ ಅವರ 84ನೇ ಹುಟ್ಟುಹಬ್ಬದ ಆಚರಣೆ. ಅಧ್ಯಕ್ಷತೆ- ಮಾಜಿ ಶಾಸಕ ಆರ್. ವಿ. ದೇವರಾಜ್, ಅತಿಥಿಗಳು- ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷ ಪ್ರೊ. ಎನ್. ವಿ. ನರಸಿಂಹಯ್ಯ, ಬಸವನಗುಡಿ ಬರಹಗಾರರ ಬಳಗದ ಅಧ್ಯಕ್ಷ ಕೆ. ಎಸ್. ನಾಗರಾಜ್. ಬೆಳಿಗ್ಗೆ 9.30.ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ: ಜಗಜ್ಜ್ಯೋತಿ ಶ್ರೀ ಬಸವೇಶ್ವರ ಉಚಿತ ವಿದ್ಯಾರ್ಥಿ ನಿಲಯ, ವಿಜಯನಗರ. ಜಗಜ್ಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಆಚರಣೆ. ಸಾನ್ನಿಧ್ಯ- ಅಟವೀ ಜಂಗಮ ಸುಕ್ಷೇತ್ರ ಚಿಕ್ಕತೊಟ್ಲುಕೆರೆ ಕ್ಷೇತ್ರಾಧ್ಯಕ್ಷ ಶಿವಲಿಂಗ ಸ್ವಾಮಿ. ಉಪನ್ಯಾಸ- ಕರ್ನಾಟಕ ಇತಿಹಾಸ ಅಕಾಡೆಮಿ ಸಾಹಿತಿ ಹಾಗೂ ಸಂಶೋಧಕ ಡಾ. ಎಂ. ಜಿ. ನಾಗರಾಜ್, ಅಧ್ಯಕ್ಷತೆ- ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ. ಎಸ್. ಪರಮಶಿವಯ್ಯ. ಸಂಜೆ 4.ವಿಶ್ವ ವೀರಶೈವ ಸಂಸ್ಥೆ: ಪ್ರವಚನ ಮಂದಿರ, ಹಜಾನನ ಸೇವಾ ಮಂಡಳಿ, 4ನೇ ಅಡ್ಡರಸ್ತೆ, ಎಚ್. ಎಂ. ಟಿ. ಬಡಾವಣೆ, ವಿ. ವಿ. ನಗರ, ಗಂಗಾನಗರ. ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ಮತ್ತು ಅಲ್ಲಮಪ್ರಭು ಇವರ ಕುರಿತು ಉಪನ್ಯಾಸ. ಉಪನ್ಯಾಸ- ಸೃಜನಶೀಲ ಅಧ್ಯಾಪನ ಕೇಂದ್ರದ ನಿರ್ದೇಶಕ ಡಾ. ಗುರುರಾಜ ಕರ್ಜಗಿ. ಸಂಜೆ 6.30.ಸಿವಿಜಿ ಇಂಡಿಯಾ: ಗಾಂಧಿ ಭವನ ಸಭಾಂಗಣ, ಕುಮಾರ ಪಾರ್ಕ್ ಪೂರ್ವ. `ಕುವೆಂಪು 108 ನೆನಪು ಮಾಲಿಕೆಯ 108 ಕೃತಿಗಳ ಲೋಕಾರ್ಪಣೆ~ ಹಾಗೂ ಸಿವಿಜಿ ಇಂಡಿಯಾ ಪುಸ್ತಕ ಮಳಿಗೆ ಪ್ರಾರಂಭೋತ್ಸವ. ಉದ್ಘಾಟನೆ- ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ್, ಲೋಕಾರ್ಪಣೆ- `ಮಾತೃಭೂಮಿ~ ದಿನ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ಎಂ. ಪಿ. ವೀರೇಂದ್ರಕುಮಾರ್. ಪುಸ್ತಕ ಮಳಿಗೆ ಪ್ರಾರಂಭೋತ್ಸವ- ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ. ಅತಿಥಿಗಳು- ದೇ. ಜವರೇಗೌಡ, ಶಾಸಕ ಸುರೇಶ್‌ಗೌಡ, ಸದಸ್ಯ ಅಶ್ವತ್ಥನಾರಾಯಣ, `ಕುವೆಂಪು ನೂರೆಂಟು ನೆನಪು~ ಮಾಲಿಕೆಯ ಸಂಪಾದಕ ಡಾ. ಬೈರಮಂಗಲ ರಾಮೇಗೌಡ. ಸಂಜೆ 5.

ಸಾಂಸ್ಕೃತಿಕ ಕಾರ್ಯಕ್ರಮಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ರವೀಂದ್ರ ಕಲಾಕ್ಷೇತ್ರ, ಜೆ. ಸಿ. ರಸ್ತೆ. ಬಸವ ಜಯಂತಿ ಉದ್ಘಾಟನಾ ಸಮಾರಂಭ. ಉದ್ಘಾಟನೆ- ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡ, ಅಧ್ಯಕ್ಷತೆ- ಡಾ. ಡಿ. ಹೇಮಚಂದ್ರ ಸಾಗರ್, ಅತಿಥಿಗಳು- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ, ಗೃಹ ಸಚಿವ ಆರ್. ಅಶೋಕ್, ಸಂಸದ ಅನಂತಕುಮಾರ್. ಸಂಜೆ 5.ಸಂಜೆ 4. 30ರಿಂದ ಜಾನಪದ ವೈವಿಧ್ಯ- ವೀರಗಾಸೆ, ಪೂಜಾಕುಣಿತ, ತಮಟೆ, ಡೊಳ್ಳುಕುಣಿತ, ಕಂಸಾಳೆ. ಸಂಜೆ 5ರಿಂದ ಯಶವಂತ ಹಳಿಬಂಡಿ ಅವರಿಂದ ನಾಡಗೀತೆ ಹಾಗೂ ವಚನ ಗಾಯನ, ಎಂ. ವೆಂಕಟೇಶ್ ಕುಮಾರ್ ಅವರಿಂದ ವಚನ ಗಾಯನ, ಶೇಖ್ ಅಬ್ದುಲ್ ಖಾಜಿ ಅವರಿಂದ ಬಾನ್ಸುರಿ ವಾದನ, ಸಂಗೀತ ಕಾಖಂಡಕಿ ಅವರಿಂದ ವಚನ ಸಂಗೀತ, ಶುಭ ಧನಂಜಯ ಮತ್ತು ತಂಡದಿಂದ ವಚನ ವೈಭವ- ನೃತ್ಯ ರೂಪಕ.

ವಿ-ಆ್ಯಸ್ಪೈರ್ ತಂಡ: ರಂಗಶಂಕರ. ಜೆ.ಪಿ.ನಗರ, 2ನೇ ಹಂತ. `ನಂ ತಿಂಮ್‌ತನ~ ಎಂಬ ಹೊಸ ನಾಟಕವನ್ನು ಪ್ರದರ್ಶಿಸಲಿದೆ.ಬೀಚಿಯವರ 99ನೇ ಹುಟ್ಟು ಹಬ್ಬದ ಪ್ರಯುಕ್ತ ಈ ನಾಟಕ ಹಮ್ಮಿಕೊಂಡಿದ್ದು, ಅವರ ಆಯ್ದ ಕಥೆಗಳನ್ನು ಒಳಗೊಂಡ ನಾಟಕ ಇದಾಗಿದೆ. ಪ್ರಸಾದ್ ಜೈನ್ ಈ ನಾಟಕ ನಿರ್ದೇಶಿಸಿದ್ದಾರೆ. ಸಂಜೆ 7.30.ಶ್ರೀ ಅರಬಿಂದೊ ಕಾಂಪ್ಲೆಕ್ಸ್ ಟ್ರಸ್ಟ್: ಸಾಂಸ್ಕೃತಿಕ ಸಭಾಭವನ, ಶ್ರೀ ಅರವಿಂದ ಮಾರ್ಗ, ಜೆ.ಪಿ.ನಗರ 1ನೇ ಹಂತ.ಬೆಳಿಗ್ಗೆ 7ಕ್ಕೆ ಸಾಮೂಹಿಕ ಧ್ಯಾನ. ವಸ್ತು ಪ್ರದರ್ಶನ. ಸಂಜೆ 4.30ಕ್ಕೆ ಭಾಸ್ಕರ ರೆಡ್ಡಿ ಅವರಿಂದ `ಇಮ್ಮಾರ್ಟಲ್ ರಿದಮ್ಸ~.ಸತ್ಯ ಸಾಯಿ ಸೇವಾ ಕ್ಷೇತ್ರ: ಸಾಯಿ ಗೀತಾಂಜಲಿ, ಸತ್ಯ ಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯ ರಸ್ತೆ, 7ನೇ ಕ್ರಾಸ್, ಜೆ. ಪಿ. ನಗರ. ಭಜನೆ. ಸಂಜೆ 6.15.ನಂಜನಗೂಡು ರಾಘವೇಂದ್ರ ಸ್ವಾಮಿ ಮಠ: ಪ್ಲಾಟ್‌ಫಾರಂ ರಸ್ತೆ, ಸ್ವಾತಿ ಕಾಂಪ್ಲೆಕ್ಸ್ ಹತ್ತಿರ, ಶೇಷಾದ್ರಿಪುರಂ. ಅಕ್ಷಯ ತದಿಗೆ ಪ್ರಯುಕ್ತ ರಾಘವೇಂದ್ರ ಸ್ವಾಮಿ ಮೃತ್ತಿಕಾ ಬೃಂದಾವನಕ್ಕೆ ಗಂಧ ಲೇಪನ ಅಲಂಕಾರ, ಹಾಗೂ ಬಾಲಪ್ರತಿಭೆ ಟಿ.ಎಸ್. ಅನ್ವಿತಾಳಿಂದ `ದಾಸರ ಪದಗಳ ಗಾಯನ~. ಸಂಜೆ 6.30.ಧಾರ್ಮಿಕ ಕಾರ್ಯಕ್ರಮಗಳು

ದೇವಗಿರಿ ಶ್ರೀ ಗುರು ಸೇವಾ ಸಮಿತಿ: ರಾಘವೇಂದ್ರ ಮಠದ ಆವರಣ, 24ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ. ರಂಗಚಾರ್ ಹಯಗ್ರೀವ ಅವರಿಂದ `ವೈಶಾಖ ಮಾಸದ ಮಹಾತ್ಮೆ~ ಕುರಿತು ಪ್ರವಚನ. ಸಂಜೆ 6.30.ಭಜನಾನಂದ ವೃಂದ: ವಾಲ್ಮೀಕಿ ಶ್ರೀ ಆಂಜನೇಯ ಸೇವಾ ಸಮಿತಿ, ನಂ 18, ಮಾರುಕಟ್ಟೆ ರಸ್ತೆ, ವಿಶ್ವೇಶ್ವರಪುರ. ಶ್ರೀ ರಾಮನವಮಿ ಪ್ರಯುಕ್ತ ಸ್ವಾಮಿ ನಿರ್ಭಯಾನಂದ ಸರಸ್ವತೀ ಹಾಗೂ ಸ್ವಾಮಿ ವೀರೇಶಾನಂದ ಸರಸ್ವತೀ ಅವರಿಂದ ವಿಶೇಷ ಸತ್ಸಂಗ ಕಾರ್ಯಕ್ರಮ. ಸಂಜೆ 4.30.ಶಿವಬಸವ ಟ್ರಸ್ಟ್: ಏರ್‌ಟೆಲ್ ಶೋ ರೂಮ್, 8ನೇ ಮುಖ್ಯ ರಸ್ತೆ, 3ನೇ ಹಂತ, ಬಸವೇಶ್ವರ ನಗರ. ಬಸವ ಜಯಂತಿ ಆಚರಣೆ. ಸಾನ್ನಿಧ್ಯ- ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮಿ. ಅಧ್ಯಕ್ಷತೆ- ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ. ಎಸ್. ಪರಮಶಿವಯ್ಯ. ಅತಿಥಿಗಳು- ಮೊನೊರೈಲ್ ಕಾರ್ಯನಿರ್ವಹಣಾಧಿಕಾರಿ ಎಂ. ಎಸ್. ನಾಗೇಂದ್ರ, ಶರಣ ಸೇವಾ ಸಮಾಜದ ಕಾರ್ಯದರ್ಶಿ ಎಚ್. ಎಸ್. ಶಿವಲಿಂಗಯ್ಯ, ಬಿ.ಬಿ.ಎಂ.ಪಿ ಸದಸ್ಯರಾದ ಆರ್. ಚಂದ್ರಶೇಖರ್, ಮೋಹನ್ ಕುಮಾರ್, ಮಂಜುನಾಥ್. ಬೆಳಿಗ್ಗೆ 10.30.ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್.ಎಸ್.ಎಂ.ಆರ್.ವಿ. ಪಿ.ಯು. ಕಾಲೇಜು, ಜಯನಗರ `ಟಿ~ ಬ್ಲಾಕ್. ಲಲಿತಾ ನಾರಾಯಣ ಸ್ವಾಮಿ ಅವರಿಂದ `ಲಲಿತಾ ಸಹಸ್ರನಾಮ~ ಕುರಿತು ಪ್ರವಚನ.ಸುಮಂಗಲಿ ಸೇವಾ ಆಶ್ರಮ: ಚೋಳನಾಯ್ಕನಹಳ್ಳಿ, ಆರ್.ಟಿ.ನಗರ. 37ನೇ ಶ್ರೀ ಬಸವೇಶ್ವರರ ಜಯಂತಿ. ಬೆಳಿಗ್ಗೆ 9ಕ್ಕೆ ಬಸವೇಶ್ವರರ ಪೂಜೆ. ನಂತರ ಉತ್ಸವ. ಸಂಜೆ 6ಕ್ಕೆ ಹೆಬ್ಬುಗೋಡಿಯ ವೀಣಾ ಮೋಹನ್ ಅವರಿಂದ ಭಕ್ತಿಗೀತೆಗಳ ಗಾಯನ.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ- ದಕ್ಷಿಣ ವಿಭಾಗ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ: ಘಟಕ 15, ಕೋರಮಂಗಲ. ಜಗಜ್ಯೋತಿ ಬಸವೇಶ್ವರರ 879ನೇ ಜಯಂತ್ಯುತ್ಸವ. ಅತಿಥಿಗಳು: ಮೂಡ್ನಾಕೂಡು ಚಿನ್ನಸ್ವಾಮಿ, ಜರಗನಹಳ್ಳಿ ಶಿವಶಂಕರ್, ಸಿ.ಜೆ.ಆನಂದ್, ಕೆ.ರಾಮಮೂರ್ತಿ, ಎ.ಸಿ.ಜೆ.ಬೆಥಲ್,ಡಾ.ಕೆ.ಎನ್.ಇಂಗಳಗಿ, ಎಲ್.ವಿ.ವಾಸುದೇವಮೂರ್ತಿ, ವ.ಚ.ಚನ್ನೇಗೌಡ, ವಿಶ್ವೇಶ್ವರಯ್ಯ, ಕೆ.ವೆಂಕಟೇಶ್.

ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನ, ತುಳಸಿಮಠ, ಹೊಸಪಾಳ್ಯ, ಅಗರ, ಕನಕಪುರ ರಸ್ತೆ, ಬೆಳಿಗ್ಗೆ 9ಕ್ಕೆ ವಿಶೇಷ ಗಂಧಲೇಪನ, ಕನಕಾಭಿಷೇಕ. ನಂತರ ಭಜನೆ.ಬೆಂಗಳೂರು ನಗರ ಕೋಟೆ: ಕೋಟೆ ಶ್ರೀ ಆಂಜನೇಯ ಸ್ವಾಮಿ: 6ನೇ ವಾರ್ಷಿಕ ಬ್ರಹ್ಮ ರಥೋತ್ಸವ. ರಾತ್ರಿ 8.30ಕ್ಕೆ ಹನುಮಂತೋತ್ಸವ.ರಾಮಾಂಜನೇಯ ಸ್ವಾಮಿ ದೇವಸ್ಥಾನ ಟ್ರಸ್ಟ್: ಚಲ್ಲಘಟ್ಟ, ಹಳೇ ವಿಮಾನ ನಿಲ್ದಾಣ ರಸ್ತೆ. ಶ್ರೀ ಅಭಯ ಆಂಜನೇಯ ಸ್ವಾಮಿ 27 ಅಡಿಯ ಏಕಶಿಲಾ ಸ್ಥಿರ ಬಿಂಬ ಪ್ರತಿಷ್ಠಾಪನಾ ಮಹಾ ಕುಂಭಾಭಿಷೇಕ. ಸಂಜೆ 5ಕ್ಕೆ ಧಾರ್ಮಿಕ ಕಾರ್ಯಕ್ರಮಗಳು.ಭೀಮನ ಕಟ್ಟೆ ಶ್ರೀ ರಾಘವೇಂದ್ರಸ್ವಾಮಿಗಳವರ ಮಠ, ಹರಿದಾಸ ಸೇವಾ ಸಮಿತಿ, ದಿಯಾ ಕಲಾಪ್ರತಿಷ್ಠಾನ; ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ ರಸ್ತೆ, ದಶಮನೋತ್ಸವ ಪ್ರಯುಕ್ತ ಸಾಮೂಹಿಕ ಶ್ರೀ ಶ್ರೀನಿವಾಸ ಕಲ್ಯಾಣ, ಗುರುರಾಜ ಭಜನಾ ಮಂಡಳಿಯಿಂದ ಭಜನೆ, ಸಂಜೆ 6ಕ್ಕೆ ಭೀಮನಕಟ್ಟೆ ಮಠದ ಶ್ರೀ ರಘುಮಾನ್ಯತೀರ್ಥ ಶ್ರೀಪಾದಂಗಳವರಿಂದ ಉದ್ಘಾಟನೆ.ಅತಿಥಿಗಳು: ನಟ ಶ್ರೀನಾಥ್, ಡಾ.ಎನ್.ಸುರೇಶ್. ವಿಮರ್ಶಕ ಮೈಸೂರು ವಿ.ಸುಬ್ರಹ್ಮಣ್ಯ, ಗಾಯಕ ಪುತ್ತೂರು ನರಸಿಂಹ ನಾಯಕ್, ಸಂಶೋಧಕರಾದ ಪ್ರೊ.ಎ.ವಿ.ನಾವಡ, ಡಾ.ಅನಸೂಯಾದೇವಿ, ದಾಸರ ಕೀರ್ತನೆಗಳ ಪ್ರಚಾರಕ ಭಾಸ್ಕರಶಾಸ್ತ್ರಿ ಅವರಿಗೆ ಶ್ರೀ ಭೀಮಸೇತು ಪುರಂದರ ಪ್ರಶಸ್ತಿ ಪ್ರದಾನ. ಸಂಜೆ 7ಕ್ಕೆ ದಾಸವಾಣಿ.ಸಂಕುಲ 3ಜಿ ಥಿಯೇಟರ್: ಕೆ.ಎಚ್.ಕಲಾಸೌಧ, ರಾಮಾಂಜನೇಯ ದೇವಸ್ಥಾನ ಆವರಣ, ಹನುಮಂತನಗರ. ಸಂಕುಲ 3ಜಿ ಥಿಯೇಟರ್ ತಂಡದಿಂದ ಮಂಗಳವಾರ `ನಾರ‌್ನಿಯಾ~ ನಾಟಕ ಪ್ರದರ್ಶನ.ಸ್ಕ್ರಿಪ್ಟ್: ವಿ.ಹಾಲಪ್ಪ, ಸಂಗೀತ ಇಸ್ಮಾಯಿಲ್ ಗೋನಾಲ್, ನಿರ್ದೇಶನ: ಅಶೋಕ್ ನಿಟ್ಟೂರು. ಸಿ.ಎಸ್.ಲೇವಿಸ್ ಅವರ ಕಾದಂಬರಿ `ದಿ ಮ್ಯಾಜಿಕಲ್ ವಾರ್ಡ್‌ರೋಬ್~ ಕಾದಂಬರಿ ಆಧಾರಿತ ನಾಟಕ ಇದಾಗಿದೆ. ಸಂಜೆ 7.30. ಟಿಕೆಟ್ ಹಾಗೂ ಮಾಹಿತಿಗೆ: 92434 22349

 

ಬಿಟಿಎಂ ಕಲ್ಚರಲ್ ಅಕಾಡೆಮಿ: ರಮಣ ಮಹರ್ಷಿ ಅಕಾಡೆಮಿ, 3ನೇ ಅಡ್ಡರಸ್ತೆ, 3ನೇ ಹಂತ, ಜೆ.ಪಿ.ನಗರ, 20ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ಆರ್.ಕೆ. ಪದ್ಮನಾಭ ಅವರಿಂದ ಗಾಯನ ಕಛೇರಿ. ಸಿ.ಎನ್.ಚಂದ್ರ ಶೇಖರ್ (ಪಿಟೀಲು), ಸಿ.ಚೆಲುವರಾಜು (ಮೃದಂಗ), ಎಂ.ಎ. ಕೃಷ್ಣಮೂರ್ತಿ (ಘಟ). ಸಂಜೆ 5.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.