ನಗರದಲ್ಲಿ ಇಂದು/ ನಾಳೆ-ಏಪ್ರಿಲ್ 7, ಶನಿವಾರ , ಭಾನುವಾರ

ಏಪ್ರಿಲ್ 7, ಶನಿವಾರ
ನಮ್ಮ ಬೆಂಗಳೂರು: ನ್ಯಾಷನಲ್ ಕಾಲೇಜು ಆವರಣ, ಬಸವನಗುಡಿ. 2011ರ ನಮ್ಮ ಬೆಂಗಳೂರು ಪ್ರಶಸ್ತಿ ಪ್ರದಾನ ಸಮಾರಂಭ. ಸಂಜೆ 6.30.
ವಿ.ಇ.ಟಿ.ಬಿ.ವಿ.ಎಲ್. ಪಾಲಿಟೆಕ್ನಿಕ್: ಕಾಲೇಜು ಸಭಾಂಗಣ, 14ನೇ ಮುಖ್ಯರಸ್ತೆ, 2ನೇ ಹಂತ, ಜೆ.ಪಿ.ನಗರ. 26ನೇ ವಾರ್ಷಿಕೋತ್ಸವ ಸಮಾರಂಭ. ಅತಿಥಿ- ಶಾಸಕ ಬಿ. ಎನ್. ವಿಜಯ್ಕುಮಾರ್. ಬೆಳಿಗ್ಗೆ 10.
ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು: ಸ್ಪಂದನ ನರ್ಸಿಂಗ್ ಹೋಮ್, 549/46, 6ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ರಾಜಾಜಿನಗರ. ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ನಾಲ್ಕು ಆರೋಗ್ಯ ಪುಸ್ತಕಗಳ ಲೋಕಾರ್ಪಣೆ ಹಾಗೂ ಸ್ಪಂದನ ಆರೋಗ್ಯ ಪುಸ್ತಕ ಮಳಿಗೆ ಉದ್ಘಾಟನೆ. ಲೋಕಾರ್ಪಣೆ- ಮನೋವೈದ್ಯೆ ಡಾ. ಎಸ್. ಪ್ರೀತಿ, ಅತಿಥಿ- ಮನೋವೈದ್ಯ ಡಾ. ಮಹೇಶ್. ಆರ್. ಗೌಡ. ಉದ್ಘಾಟನೆ- ಸ್ಪಂದನ ಆಸ್ಪತ್ರೆ ನಿರ್ದೇಶಕ ಡಾ. ಎಂ. ಶ್ರೀನಿವಾಸ್. ಬೆಳಿಗ್ಗೆ 11.
ಡಾ. ಜಿ. ಎಸ್. ಎಸ್. ವಿಶ್ವಸ್ತ ಮಂಡಳಿ: ಡಾ. ಎಚ್. ನರಸಿಂಹಯ್ಯ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ. `ಶೇಕ್ಸ್ಪಿಯರ್ನ ನಾಟಕಗಳಲ್ಲಿ ಕ್ಷಣ ಮತ್ತು ಅನಂತಗಳ ಕಲ್ಪನೆ~ ಕುರಿತು ಪ್ರೊ. ಜಿ.ಕೆ. ಗೋವಿಂದರಾವ್ ಅವರಿಂದ ಉಪನ್ಯಾಸ. ಅಧ್ಯಕ್ಷತೆ- ಪ್ರೊ. ಓ.ಎಲ್. ನಾಗಭೂಷಣ್. ಬೆಳಿಗ್ಗೆ 11.
ನಾರಾಯಣ್ ಸೇವಾ ಸಂಸ್ಥಾನ: ಎನ್ಐಎಎಂ ಮ್ಯಾನೇಜ್ಮೆಂಟ್ ಕಾಲೇಜು, ಫುಡ್ ವರ್ಲ್ಡ್ ಮೇಲ್ಭಾಗ, ಜಯನಗರ 7ನೇ ಬ್ಲಾಕ್. ತಂಬಾಕು ನಿವಾರಣೆಯಲ್ಲಿ ಮುಂದಾಳತ್ವ ತರಬೇತಿ ಕಾರ್ಯಕ್ರಮ. ಬೆಳಿಗ್ಗೆ 9.
ಸಮಾಜ ಸೇವಾ ಸಮಿತಿ: ಕನ್ನಡ ಸಭಾಂಗಣ, ಪಶು ವೈದ್ಯಕೀಯ ವಿಶ್ವವಿದ್ಯಾಲಯ ಕ್ಯಾಂಪಸ್, ಪ್ರಾದೇಶಿಕ ಆವರಣ, ಹೆಬ್ಬಾಳ. `ಪರಿಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ~ ಕುರಿತು ರಾಜ್ಯಮಟ್ಟದ ಕಾರ್ಯಾಗಾರ. ಉದ್ಘಾಟನೆ- ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಅಧ್ಯಕ್ಷತೆ- ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ. ಎಸ್. ಸದಾಶಿವಯ್ಯ. ಸ್ಮರಣ ಸಂಚಿಕೆ ಬಿಡುಗಡೆ- ಅಖಿಲ ಭಾರತ ಪ್ರಚಾರಿಕಾ ಸಂಸ್ಥೆಯ ಕೃ. ರುಕ್ಮಿಣಿ. ಬೆಳಿಗ್ಗೆ 10. ಗಾನ ಸೌರಭ ಯಕ್ಷಗಾನ ಕಲಾ ತಂಡದಿಂದ `ಪರಿಸರ ಜಾಗೃತಿ ಪ್ರಸಂಗ~ ಯಕ್ಷಗಾನ. ನಿರ್ದೇಶನ- ಬೇಗಾರ್ ಶಿವಕುಮಾರ್. ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಕುರಿತು ಸಾಕ್ಷ್ಯಚಿತ್ರ. ಸಂಜೆ 7.30.
ತರಳಬಾಳು ಕೇಂದ್ರ: ತರಳುಬಾಳು ಮಾರ್ಗ, ಎರಡನೆಯ ಬ್ಲಾಕ್, ಆರ್. ಟಿ. ನಗರ. ಬೆಳದಿಂಗಳ ಕವಿಗೋಷ್ಠಿ. ಸಾನ್ನಿಧ್ಯ- ತರಳುಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ- ಸಾಹಿತಿ ಚಂದ್ರಶೇಖರ ಕಂಬಾರ, ಅಧ್ಯಕ್ಷತೆ- ಡಾ. ಎಚ್. ಎಸ್. ವೆಂಕಟೇಶ ಮೂರ್ತಿ, ಅತಿಥಿ- ಡಾ. ಕಮಲಾ ಹಂಪನಾ. ಭಾಗವಹಿಸುವ ಕವಿಗಳು- ಜಯಂತ ಕಾಯ್ಕಿಣಿ, ಬಿ. ಆರ್. ಲಕ್ಷ್ಮಣರಾವ್, ಡಾ. ಎಚ್. ಎಲ್. ಪುಷ್ಪ, ಎಚ್. ಡುಂಡಿರಾಜ್, ಜರಗನಹಳ್ಳಿ ಶಿವಕುಮಾರ್, ಡಾ. ಮಮತಾ ಜಿ. ಸಾಗರ್, ಜಿ. ಎನ್. ಮೋಹನ್, ಬಿ. ಟಿ. ಲಲತಾ ನಾಯಕ್, ಡಾ. ಸರಜೂ ಕಾಟ್ಕರ್, ಅಬ್ದುಲ್ ರಶೀದ್, ಡಾ.ಟಿ. ಸಿ. ಪೂರ್ಣಿಮಾ, ಡಾ. ಎಂ. ಎಸ್. ಶೇಖರ್, ಡಾ. ಲತಾ ಗುತ್ತಿ, ಡಾ. ವಿಕ್ರಂ ವಿಸಾಜಿ, ಜ. ನಾ. ತೇಜಶ್ರೀ, ವೀರಣ್ಣ ಮಡಿವಾಳರ. ಯಶವಂತ ಹಳಿಬಂಡಿ ಅವರಿಂದ ಭಾವಗೀತೆಗಳ ಗಾಯನ. ರಾತ್ರಿ 7.30
ಧಾರ್ಮಿಕ ಕಾರ್ಯಕ್ರಮ..
ಶ್ರೀ ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ನಂ 42/1, ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್. ಪುರಂ. ಚಂದ್ರೇಶಾನಂದಜಿಯವರಿಂದ `ಉಪನಿಷದ್ ಜ್ಞಾನಾಮೃತ ಭಾವಧಾರೆ~. ಸಂಜೆ 5.30.
ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ದೇವಸ್ಥಾನದ ಆವರಣ, ಮಹಾಲಕ್ಷ್ಮೀಪುರಂ. ಶ್ರೀಮಾತಾ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ. ಸಂಜೆ 6.30.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ವಾಡಿಯಾ ಸಭಾಂಗಣ, ನಂ. 6, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಸಿದ್ಧಾರ್ಥ ಅವರಿಂದ `ರಿ ಡಿಸ್ಕವರಿಂಗ್ ಅರ್ಥ್ ಸ್ಪಿರಿಚುಯಾಲಿಟಿ~ ಕುರಿತು ಉಪನ್ಯಾಸ. ಸಂಜೆ 6.30.
ಶ್ರೀ ರಾಮಸೇವಾ ಮಂಡಳಿ: ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು ಕೋಟೆ ಹೈಸ್ಕೂಲ್ ಆವರಣ. ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಮ್ಯಾಂಡೊಲಿನ್ ಅರವಿಂದ್ ಭಾರ್ಗವ್ ಮತ್ತು ತಂಡ ಹಾಗೂ ಸಂಜಯ್ ಸುಬ್ರಹ್ಮಣ್ಯನ್, ಎಸ್. ವರದರಾಜನ್, ಹರಿಕುಮಾರ್ ಬಿ, ವೆಂಕಟರಾಮನ್ ಎಸ್. ಇವರಿಂದ ಸಂಗೀತ ಕಾರ್ಯಕ್ರಮ. ಸಂಜೆ 5.15.
ಶಂಕರ ಜಯಂತಿ ಮಂಡಳಿ: ಶಂಕರಕೃಪಾ, ನಂ 45, ಶ್ರೀ ಶಂಕರ ಕೃಪಾ ರಸ್ತೆ, 16ನೇ ಅಡ್ಡರಸ್ತೆ, 3ನೇ ಬಡಾವಣೆ, ಜಯನಗರ. ಡಾ. ಎಸ್. ರಂಗನಾಥ್ ಅವರಿಂದ ಪ್ರಬೋಧ ಸುಧಾರಕ. ಸಂಜೆ 6.30.
ಎಕ್ಸ್ಪ್ರೆಸ್ ಪಬ್ಲಿಕೇಶನ್ಸ್: ಹೋಟೆಲ್ ಕೊನಾರ್ಕ್, ನಂ. 49, 2ನೇ ಮಹಡಿ, ಕಮರ್ಶಿಯಲ್ ಸ್ಟ್ರೀಟ್. ಮೂರನೇ ರಾಷ್ಟ್ರೀಯ ಕವಿಗೋಷ್ಠಿ. ಅತಿಥಿಗಳು- ಪತ್ರಕರ್ತ ಡಾ. ಮೊಹಮದ್ ಫಕ್ರ್ದ್ದುದೀನ್. ಬೆಳಿಗ್ಗೆ 9.30.
ರಾಘವೇಂದ್ರ ಗುರುಸೇವಾ ಮಂಡಳಿ: ನಂ 145, 13ನೇ ಎ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, ಗೋಕುಲ ಮೊದಲನೆ ಹಂತ. ಧಾರ್ಮಿಕ ಬೇಸಿಗೆ ಶಿಬಿರ. ಮಾಹಿತಿಗೆ: 9448069022.
ಸಾಂಸ್ಕೃತಿಕ ಕಾರ್ಯಕ್ರಮ...
ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ರಂಗಮಂದಿರ, ಕನ್ನಡ ಭವನ, ಜೆ. ಸಿ. ನಗರ. `ಚಿಗುರು~ ಕಾರ್ಯಕ್ರಮದಲ್ಲಿ ವಚನ. ಗಾಯನ- ವೈ. ಆರ್. ಅನಿರುದ್ಧ, ದ್ವಂದ್ವ ಗಾಯನ- ಜ್ಞಾನವಿ ಮತ್ತು ಸಿಂಧು ಶ್ರೀನಿಧಿ, ಭರತನಾಟ್ಯ- ಎಂ. ಅಂಜಲಿ ಮಧ್ಯಾಹ್ನ 3.
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪನ ಸಮಿತಿ: ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ, ಕೆಂಪೇಗೌಡರ ನಗರ. ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ಚಲನಚಿತ್ರ ಹಿನ್ನಲೆ ಗಾಯಕರಿಂದ ಸಂಗೀತ ರಸಸಂಜೆ. ಸಂಜೆ 7.
ಅಂತರಂಗ ಹವ್ಯಾಸಿ ನಾಟಕ ತಂಡ: ಕೆ. ಎಚ್. ಕಲಾಸೌಧ. ಮರಡಿ ಸುಬ್ಬಯ್ಯ ಛತ್ರದ ಬಳಿ, ಹನುಮಂತನಗರ. ರಂಗರಂಜನೆ ಉತ್ಸವದಲ್ಲಿ `ಉತ್ತರ ಭೂಪ ಬ್ಚೀಜಿ~ ಹಾಸ್ಯ ನಾಟಕ ಪ್ರದರ್ಶನ. ರಂಗ ರೂಪ- ಎನ್. ಸಿ. ಮಹೇಶ್. ಸಂಜೆ 7.30.
ಯುವಶ್ರೀ: ಸೇವಾ ಸದನ, 15ನೇ ಅಡ್ಡರಸ್ತೆ, ಮಲ್ಲೇಶ್ವರ. ಯುವಶ್ರೀ ರಂಗತಂಡದಿಂದ `ಮಳೆ ನಿಲ್ಲುವವರೆಗೆ~ ನಾಟಕ ಪ್ರದರ್ಶನ. ರಚನೆ- ಸುಧೀಂದ್ರ ಎಲ್. ಎಸ್, ನಿರ್ದೇಶನ- ಪ್ರದೀಪ್ ಎನ್. ಆರ್. ಸಂಜೆ 7.
ಶ್ರೀ ನಿಧಿ ಕಲೆ ಮತ್ತು ಕರಕುಶಲ ಪ್ರತಿಷ್ಠಾನ: ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ. ರಾಷ್ಟ್ರೀಯ ಕರಕುಶಲ ಸಂತೆಯಲ್ಲಿ ಸತೀಶ್ ಹಂಪಿಹೊಳಿ ಮತ್ತು ವೃಂದದವರಿಂದ ಸುಗಮ ಸಂಗೀತ. ಸಂಜೆ 6.
ಶ್ರೀ ವಾಣೀ ವಿದ್ಯಾ ಕೇಂದ್ರ: ಶಾಮವನ, ಸಿ. ಎ. ಸೈಟ್ ನಂ. 1, 4 `ಬಿ~ ಮುಖ್ಯ ರಸ್ತೆ, 3ನೇ ಹಂತ, ಬಸವೇಶ್ವರನಗರ. ರಾಮನವಮಿ ಸಂಗೀತೋತ್ಸವದಲ್ಲಿ ಸಮೀರ್ ಆತ್ರೇಯ ಅವರಿಂದ ಹಿಂದೂಸ್ತಾನಿ ಗಾಯನ. ತಬಲ- ವಿಕಾಸ್ ನರೇಗಲ್, ಹಾರ್ಮೋನಿಯಂ- ಮಧುಸೂದನ್ ಭಟ್. ಸಿಂಧು. ಆರ್ ಅವರಿಂದ ದಕ್ಷಿಣಾದಿ ಸಂಗೀತ ಗಾಯನ. ಪಿಟೀಲು- ಮಹತಿ ಟಿ. ಭಾರ್ಗವಪುರಿ, ಮೃದಂಗ- ಅಚ್ಯುತ ಎನ್. ಹೊಸಹಳ್ಳಿ, ಸಂಜನಾ ಅವರಿಂದ ಭಕ್ತಿಗೀತೆಗಳು. ತಬಲ- ರಾಘವೇಂದ್ರ ಜೋಶಿ, ಕೀಬೋರ್ಡ್- ವಸಂತಕುಮಾರ್ ಕುಂಬ್ಳೆ. ಸಂಜೆ 6.
ದೃಷ್ಟಿ ಆರ್ಟ್ ಫೌಂಡೇಶನ್: ಸತ್ಯಶ್ರೀ- ದಿ ಕಾಟೇಜ್, ನಂ 42, ಸಂಪಿಗೆಹಳ್ಳಿ, ಜಕ್ಕೂರು. `ಕಲಾಪೂರ್ಣಿಮಾ~ದಲ್ಲಿ ಆನೂರು ಅನಂತಕೃಷ್ಣ ಶರ್ಮಾ ಅವರಿಂದ ತಾಳವಾದ್ಯ, ತಾಂಡವ ತಂಡದಿಂದ ಭರತನಾಟ್ಯ ಮತ್ತು ಎಸ್. ಮಂಜುನಾಥಆಚಾರ್ಯ ಅವರಿಂದ ಶಿಲ್ಪಕಲೆ ಹಾಗೂ ಡೊಳ್ಳು ಕುಣಿತ ಕಾರ್ಯಕ್ರಮ. ಸಂಜೆ 6.
ಸಂಸ್ಕೃತಿ ಭವನ: 11ನೇ ಮುಖ್ಯ ರಸ್ತೆ, ಇಸ್ರೋ ಲೇಔಟ್, `ಸಂಸ್ಕೃತಿ ಉತ್ಸವ~ದಲ್ಲಿ ರಘುನಂದನ್ ಮತ್ತು ಮಾನಸಿ ರಘುನಂದನ್ ಅವರಿಂದ ಭರತನಾಟ್ಯ ನೃತ್ಯ ಪ್ರದರ್ಶನ. ಸಂಜೆ 6.15.
ರಾಜರಾಜೇಶ್ವರಿ ಕಲ್ಚರಲ್ ಅಸೋಸಿಯೇಷನ್: ಶ್ರೀ ಬಾಲಕೃಷ್ಣ ರಂಗಮಂದಿರ, ಬಿಇಎಂಎಲ್ ಲೇಔಟ್, ಆರ್. ಆರ್. ನಗರ, ರಾಮನವಮಿ ಸಂಗೀತೋತ್ಸವದಲ್ಲಿ ಶಂಕರ ಶಾನಭೋಗ್ ಮತ್ತು ತಂಡದಿಂದ ಲಘು ಸಂಗೀತ. ಸಂಜೆ 6.30.
ಅಯ್ಯಪ್ಪಸ್ವಾಮಿ ವಾರ್ಷಿಕೋತ್ಸವ
ಯಲಹಂಕ: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಸಿಂಗಾಪುರದಲ್ಲಿರುವ ಶ್ರೀ ಪ್ರಸನ್ನ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ದೇವಸ್ಥಾನದ 3ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ಏ. 8ರಿಂದ 10ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಏ.8ರ ಭಾನುವಾರ ಬೆಳಗ್ಗೆ 5.30ಕ್ಕೆ ದೀಪಾರಾಧನೆ, ಪ್ರಸಾ ದಸುದಿ, ಅಸ್ತ್ರಕಳಸ ಪೂಜೆ, ಪಡಿಪೂಜೆ ಕೊಡಿಯೆಟಂ ಪೂಜಾ ಕಾರ್ಯಗಳು ನಡೆಯಲಿವೆ. ಸೋಮವಾರ ಬೆಳಗ್ಗೆ 6ಕ್ಕೆ ಗಣಪತಿಹೋಮ, ಕಳಶಾಭಿಷೇಕಂ ಮತ್ತು ಸಂಜೆ 5.30ಕ್ಕೆ ದೀಪಾರಾಧನೆ, ತತ್ವಕಳಸ ಪೂಜೆ, ಬ್ರಹ್ಮಕಳಸ ಪೂಜೆ, ಆದಿವಾಸಂ ಪೂಜೆ ಹಾಗೂ ತಾಯಂಬಕ ಪೂಜಾ ಕಾರ್ಯಗಳು. ನಂತರ ಅಯ್ಯಪ್ಪಸ್ವಾಮಿ ಉತ್ಸವದ ಮೆರವಣಿಗೆ.
ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್: ಎನ್ಜಿಎಂಎ ಆಡಿಟೋರಿಯಂ, ನ್ಯಾಶನಲ್ ಗ್ಯಾಲರಿ ಆಫ್ ಮಾಡ್ರನ್ ಆರ್ಟ್, ಮಾಣಿಕ್ಯವೇಲು ಭವನ, ಅರಮನೆ ರಸ್ತೆ, ವಸಂತ ನಗರ. ಐಶ್ವರ್ಯ ವಾರಿಯರ್ ಅವರಿಂದ `ಮೋಹಿನಿ ಆಟ್ಟಂ~ ನೃತ್ಯ ಪ್ರದರ್ಶನ. ಸಂಜೆ 6.30.
ಏಪ್ರಿಲ್ 8, ಭಾನುವಾರ
ಶ್ರೀ ರಾಮಸೇವಾ ಮಂಡಳಿ: ಸರ್ಕಾರಿ ಜೂನಿಯರ್ ಕಾಲೇಜು, ಬೆಂಗಳೂರು ಕೋಟೆ ಹೈಸ್ಕೂಲ್ ಆವರಣ. ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವದಲ್ಲಿ ಬೆಳಿಗ್ಗೆ 10ಕ್ಕೆ ಸಂಸ್ಥಾಪಕರ ದಿನಾಚರಣೆ, ಸಂಜೆ 6.30ಕ್ಕೆ ಯು.ಶ್ರೀನಿವಾಸ್, ಯು.ರಾಜೇಶ್ (ಮ್ಯಾಂಡೊಲಿನ್-ದ್ವಂದ್ವ)-ಶ್ರೀನಿವಾಸ ರಾವ್ ವಿ.ವಿ.-ಮದಿರಿಮಂಗಳಂ ಸ್ವಾಮಿನಾಥನ್-ಟ್ರಿಚಿ ಮುರಳಿ
ಶ್ರೀ ವಾಣೀ ವಿದ್ಯಾ ಕೇಂದ್ರ: ಶಾಮವನ, ಸಿ.ಎ.ಸೈಟ್ ನಂ. 1, 4 `ಬಿ~ ಮುಖ್ಯ ರಸ್ತೆ, 3ನೇ ಹಂತ, ಬಸವೇಶ್ವರನಗರ. ರಾಮನವಮಿ ಸಂಗೀತೋತ್ಸವದಲ್ಲಿ ಎಂ.ಎಸ್.ಶೀಲಾ (ಗಾಯನ), ಜ್ಯೋತ್ಸ್ನಾ ಶ್ರೀಕಾಂತ್ (ಪಿಟೀಲು), ತುಮಕೂರು ಬಿ. ರವಿಶಂಕರ್ (ಮೃದಂಗ), ಎಂ.ಎ.ಕೃಷ್ಣಮೂರ್ತಿ (ಘಟ). ಸಂಜೆ 6.30.
ಸಮ್ಮಿಲನ: ವಲ್ಲಭನಿಕೇತನ, ಗಾಂಧಿಭವನದ ಬಳಿ, ಶಿವಾನಂದ ವೃತ್ತ, ಶೇಷಾದ್ರಿಪುರಂ, `ಡಾ. ರಾಜಕುಮಾರ್ ಸಂಸ್ಮರಣಾ ಕವಿಗೋಷ್ಠಿ ಹಾಗೂ ಗೀತಗಾಯನ~ ಅಧ್ಯಕ್ಷತೆ-ಕವಿ ಬಿ.ಎಸ್. ಶ್ರೀನಾಥ್, ಅತಿಥಿಗಳು-ಗಾಯಕ ಬಾಣವಾರ ಮಂಜುನಾಥ್, ಕಲಾವಿದ ಬಿ.ಶಾಂತಕುಮಾರ್. ಬೆಳಿಗ್ಗೆ 10.30.
ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿಪುರ, ಸ್ತುತಿವಾಹಿನಿ ಮತ್ತು ತಂಡದಿಂದ ಭಜನೆ. ಬೆಳಿಗ್ಗೆ 9.
ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ: ಸುಚಿತ್ರ ಸಭಾಂಗಣ, ನಂ.36, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ, ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಲೇಖಕಿ ಶಾಂತಾ ನಾಗರಾಜ್ ಅವರಿಂದ ` ವಿಭಿನ್ನ ಪ್ರತಿಮಾಲೋಕಗಳ ನಡುವೆ~ ಕುರಿತು ಉಪನ್ಯಾಸ, ಎನ್. ಮಂಗಳಾ ನಿರ್ದೇಶನದ `ವ್ಯಾನಿಟಿ ಬ್ಯಾಗ್~ ನಾಟಕ ಪ್ರದರ್ಶನ. ಸಂಜೆ 6.
ಮಹಾತ್ಮ ಗಾಂಧಿ ಸ್ಮೃತಿ ಸಮಿತಿ: ಬಸವೇಶ್ವರನಗರ, `ಭಗವಾನ್ ರಬ್ಬಿನಿತ್ಯಾನಂದಂ~ ಅವರ ಆರಾಧನಾ ಮಹೋತ್ಸವ ಬೆಳಿಗ್ಗೆ 9.30ಕ್ಕೆ ಚಳ್ಳಕೆರೆ ಸಹೋದರರಿಂದ ವೇದಘೋಷ, 10.45ಕ್ಕೆ ನಾಗನಂದಿನಿ ವಿಶ್ವನಾಥ್ ಮತ್ತು ತಂಡದಿಂದ ಭಜನೆ, ಮಧ್ಯಾಹ್ನ 12ಕ್ಕೆ ಜ್ಯೋತಿ ಪಟ್ಟಾಬಿರಾಮ್ ಅವರಿಂದ ಉಪನ್ಯಾಸ, 12.30ಕ್ಕೆ ಪಟ್ಟಾಭಿರಾಮ್ ಅವರಿಂದ ಧ್ಯಾನ ಮತ್ತು ಉಪನ್ಯಾಸ.
ವಿವೇಕಾನಂದ ವಿದ್ಯಾರ್ಥಿ ನಿಲಯ ಮತ್ತು ರಂಗನಾಯಕಿ ಕಲಾ ಮಂದಿರ: ನಂ.21/22, ಜೈನ್ ದೇವಸ್ಥಾನದ ರಸ್ತೆ, ಜೈನ್ ದೇವಸ್ಥಾನದ ಎದುರು, ವಿಶ್ವೇಶ್ವರಪುರಂ, `ನಾದ-ಭಾವ-ತರಂಗ~ ಕಾರ್ಯಕ್ರಮದಲ್ಲಿ ಸ್ಮಿತಾ ಬೆಳ್ಳೂರ್ ಅವರಿಂದ ಗಾಯನ,
ವ್ಯಾಖ್ಯಾನ- ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ. ಸಂಜೆ 6.
ಡಿಗ್ನಿಟಿ ಫೌಂಡೆಶನ್: ಪ್ರಮಿಳಾ ಬಾಯಿ ಮಾನೆ ಬಿಬಿಎಂಪಿ ಶಾಲೆ, 3ನೇ ಅಡ್ಡರಸ್ತೆ, ವಿದ್ಯಾರಣ್ಯ ನಗರ, ವಿಜಯನಗರ. `ಡಿಗ್ನಿಟಿ ಡೈಲಾಗ್~ (ಈಜಿಜ್ಞಜಿಠಿ ಜಿಚ್ಝಟಜ್ಠಛಿ) ನಿಯತಕಾಲಿಕೆಯ 17ನೇ ವಾರ್ಷಿಕೋತ್ಸವ.
ಅಮಿತಾಸನ ದಾಸ್ ಪ್ರಭು ಅವರಿಂದ `ಭಕ್ತಿ~ ಕುರಿತು ಉಪನ್ಯಾಸ, ನಂತರ ಮಾನಸಿ ಪ್ರಸಾದ್ ಅವರಿಂದ ಗಾಯನ. ಮಧ್ಯಾಹ್ನ 3.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.