ಗುರುವಾರ , ಜೂನ್ 24, 2021
28 °C

ನಗರದಲ್ಲಿ ಇಂದು- ಮಾರ್ಚ್ 4, ಭಾನುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾರ್ಚ್ 4, ಭಾನುವಾರ

ಉತ್ತರ ಕನ್ನಡ ಸಮುದಾಯ ಭವನ: ನಂದಿನಿ ಬಡಾವಣೆ, ಮಾಣಿಕ ಪ್ರಭು ಸಂಸ್ಥಾನದ ಪೀಠಾಧಿಪತಿಗಳಾದ ಡಾ.ಜ್ಞಾನರಾಜ ಮಾಣಿಕ ಪ್ರಭು ಮಹಾರಾಜರಿಂದ ಶ್ರೀ ಚಕ್ರ ಪೂಜೆ, ಅನುಗ್ರಹ ಭಾಷಣ, ಸಂಗೀತಾ ಕಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ, ಬೆಳಿಗ್ಗೆ 10 ರಿಂದ ಮಧ್ಯಾಹ್ನ2 ರವರೆಗೆ.ಅಖಿಲ ಭಾರತ ಬಾಬು ಜಗಜೀವನರಾಂ ದಲಿತ ಅಭಿವೃದ್ಧಿ ಒಕ್ಕೂಟ: ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ. `ರಾಜಕೀಯದಲ್ಲಿ ಜಾಂಬವ ಜನಾಂಗ~ ಕುರಿತು ವಿಚಾರ ಸಂಕಿರಣ. ಅತಿಥಿಗಳು-  ಸಚಿವರಾದ ಕೆ.ಎಚ್.ಮುನಿಯಪ್ಪ, ಎ.ನಾರಾಯಣಸ್ವಾಮಿ, ಸಾಹಿತಿ ಬಂಜಗೆರೆ ಜಯಪ್ರಕಾಶ್, ಪಾಲಿಕೆ ಸದಸ್ಯ ಎನ್.ಚಂದ್ರು. ಬೆಳಿಗ್ಗೆ 10.30.ಅಂಕಿತ ಪುಸ್ತಕ: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಕವಿ ಜಯಂತ ಕಾಯ್ಕಿಣಿ ಅವರ `ಚಾರ್‌ಮಿನಾರ್~ ಹಾಗೂ `ಎಲ್ಲೋ ಮಳೆಯಾಗಿದೆ~ ಕೃತಿಗಳು ಬಿಡುಗಡೆ- ಸಾಹಿತಿಗಳಾದ ಅ.ರಾ. ಮಿತ್ರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ, ಚಿತ್ರ ಸಾಹಿತಿಗಳಾದ ಸಿ.ವಿ.ಶಿವಶಂಕರ್, ದೊಡ್ಡರಂಗೇಗೌಡ, ವಿ.ಮನೋಹರ್, ಎಂ.ಎನ್.ವ್ಯಾಸರಾವ್, ಕೆ.ಕಲ್ಯಾಣ್, ಬಿ.ಎಲ್.ಲಕ್ಷ್ಮಣರಾವ್. ಬೆಳಿಗ್ಗೆ 10.30.ನವಕರ್ನಾಟಕ ಪ್ರಕಾಶನ: ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ಡಾ.ಸಿ.ಆರ್. ಚಂದ್ರಶೇಖರ್ ಅವರ `ವೃದ್ಧರ ಮನಸ್ಸು ಹೀಗೇಕೆ~, `ನಿದ್ರೆ-ಕನಸು, 50 ಪ್ರಶ್ನೆಗಳು~, ಡಾ.ವಿ.ಪರಮೇಶ್ವರ ಅವರ `ಬೊಜ್ಜುದೇಹ~, ಶ್ವೇತಾ ನರಗುಂದ ಅವರ `ಮಗುವಿರಲಿ ಮನೆಯಲ್ಲಿ ನಗುವಿರಲಿ ಮನದಲ್ಲಿ~, ಡಾ.ಗಣೇಶ್‌ರಾವ್ ನಾಡಿಗೇರ್ ಅವರ `ಮಾನಸಿಕ ಅಸ್ವಸ್ಥರ ಪುನಶ್ಚೇತನ: ಏಕೆ ಹೇಗೆ~, ಡಾ.ಎಂ.ಎಸ್.ಎಸ್.ಮೂರ್ತಿ ಅವರ `ಐವಿಎಫ್ ಇರುವಾಗ ಬಂಜೆತನದ ಅಂಜಿಕೆ ಏಕೆ?~ ಕೃತಿಗಳು ಬಿಡುಗಡೆ- ಡಾ.ಪದ್ಮಿನಿ ಪ್ರಸಾದ್. ಡಾ.ನಾ.ಸೋಮೇಶ್ವರ. ಬೆಳಿಗ್ಗೆ 9.30.ಕೆ.ಎಸ್.ಮುದ್ದಪ್ಪ ಸ್ಮಾರಕ  ಟ್ರಸ್ಟ್-ಕೃಷ್ಣಾಪುರದೊಡ್ಡಿ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ. ಬಿ ಪಾರ್ಥಸಾರಥಿ ಅವರ `ಕಾರ‌್ಯಭಾರದ ನೆನಪುಗಳು~ ಪುಸ್ತಕ ಬಿಡುಗಡೆ- ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ ರಂಗನಾಥ್. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ, ಕವಿ ಎಸ್. ಜಿ.ಸಿದ್ದರಾಮಯ್ಯ, ಬಿಬಿಎಂಪಿ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್. ಬೆಳಿಗ್ಗೆ 11.ಕೋಟಿಗೊಬ್ಬ ವಿಷ್ಣುವರ್ಧನ್ ಅಭಿಮಾನಿಗಳ ಸಂಘ: ಲಗ್ಗೆರೆ, ವಿಷ್ಣುವರ್ಧನ ಅವರ ಕಂಚಿನ ಪ್ರತಿಮೆ ಅನಾವರಣ ಮತ್ತು ಲಗ್ಗೆರೆ ಮುಖ್ಯರಸ್ತೆಗೆ `ಡಾ. ವಿಷ್ಣುವರ್ಧನ್ ರಸ್ತೆ~ ನಾಮಕರಣ ಸಮಾರಂಭ. ಉದ್ಘಾಟನೆ- ಭಾರತಿ ವಿಷ್ಣುವರ್ಧನ್, ಪುತ್ಥಳಿಗೆ ಮಾಲಾರ್ಪಣೆ- ನಟ ಅನಿರುದ್ಧ್, ಅಧ್ಯಕ್ಷತೆ- ಶಾಸಕ ಎಂ. ಶ್ರೀನಿವಾಸ್. ಬೆಳಿಗ್ಗೆ 11.ಶ್ರದ್ಧಾ ಸಂಗೀತ ಕಲಾ ಯುವಜನ ಮಹಿಳಾ ಕಲ್ಯಾಣ ಸಮಿತಿ: ಗಾಂಧಿ ಭವನ, ಕುಮಾರ ಪಾರ್ಕ್ ರಸ್ತೆ, 8ನೇ ವಾರ್ಷಿಕೋತ್ಸವದ ಸಂಗೀತೋತ್ಸವ ಹಾಗೂ ಸಾಂಸ್ಕೃತಿಕ ಸಮಾರಂಭ. ಉದ್ಘಾಟನೆ- ಮಾಜಿ ಸಚಿವ ಆರ್.ಬಿ.ತಿಮ್ಮಪ್ಪ, ಅತಿಥಿಗಳು- ಶಾಸಕ ಕೃಷ್ಣ ಬೈರೇಗೌಡ, ಪಾಲಿಕೆ ಸದಸ್ಯರಾದ ಇಂದಿರಾ, ಸಂಗೀತಾ ಕಟ್ಟಿ ಕುಲಕರ್ಣಿ. ಬೆಳಿಗ್ಗೆ 10.ನೃತ್ಯಾಂಜಲಿ ಟ್ರಸ್ಟ್: ಭಾರತೀಯ ವಿದ್ಯಾಭವನ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಂಜಲಿ ಸಂತೋಷ್ ಮತ್ತು ಎಲ್.ನರೇಂದ್ರ ಅವರಿಂದ `ಶಕ್ತಿ~ ನೃತ್ಯರೂಪಕ ಪ್ರದರ್ಶನ. ಅತಿಥಿ- ಚನ್ನಮ್ಮ ದೇವೇಗೌಡ. ಸಂಜೆ 6.ರಾಮ ಲಲಿತ ಕಲಾ ಮಂದಿರ: ಗಾಯನ ಸಮಾಜ ಸಭಾಂಗಣ, ಚಾಮರಾಜಪೇಟೆ. ಆರ್.ಕೆ. ಶ್ರೀಕಂಠನ್ ಅವರಿಗೆ `ಸಂಗೀತ ವೇದಾಂತ ಧುರೀಣ~ ಬಿರುದು ಪ್ರದಾನ. ಅಧ್ಯಕ್ಷತೆ- ನಿವೃತ್ತ ಹೆಚ್ಚುವರಿ  ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್. ಆರ್. ಕೆ.ಶ್ರೀಕಂಠನ್ ಅವರಿಂದ ಗಾಯನ, ಸಹ ಗಾಯನ- ಆರ್.ಎಸ್.ರಮಾಕಾಂತ, ಪಿಟೀಲು- ಎಚ್.ಕೆ.ವೆಂಕಟರಾಂ, ಮೃದಂಗ- ವಿ.ರಾಜಾರಾವ್ ಮತ್ತು ಎಚ್.ಎಸ್. ಸುಧೀಂದ್ರ. ಸಂಜೆ 5.ಕರ್ನಾಟಕ ಕೈಗಾರಿಕಾ ಮತ್ತು ವಾಣಿಜೋದ್ಯಮ ಕನ್ನಡ ಸಂಘಗಳ ಒಕ್ಕೂಟ: ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಕನ್ನಡದ ಅಂಗಳದಲ್ಲಿ ತಿಂಗಳ ಬೆಳಕು ಕಾರ್ಯಕ್ರಮ. ಅತಿಥಿ- ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ. ಸಂಜೆ 5.ಯಾದವ ಸಾಂಸ್ಕೃತಿಕ ಅಕಾಡೆಮಿ: ಪುರಭವನ, ಜೆ.ಸಿ.ರಸ್ತೆ. ಉದ್ಘಾಟನಾ ಸಮಾರಂಭ. ಅತಿಥಿಗಳು- ಮಾಜಿ ಸಚಿವ ಎ.ಕೃಷ್ಣಪ್ಪ, ಕರ್ನಾಟಕ ರಾಜ್ಯ ಯಾದವರ ಸಂಘದ ಅಧ್ಯಕ್ಷ ಲಕ್ಷ್ಮಿನಾರಾಯಣ ಯಾದವ್. ಬೆಳಿಗ್ಗೆ 10.ಮೈಕೊ ಒಕ್ಕಲಿಗರ ಕ್ರಿಯಾ ಸಮಿತಿ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ವಾರ್ಷಿಕೋತ್ಸವ ಅತಿಥಿಗಳು- ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮೀಜಿ, ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್. ಬೆಳಿಗ್ಗೆ 9.

 

ರಂಗದರ್ಶಿ

ಸಂದೇಶ: ಕನ್ನಡ ಭವನ, ಜೆ.ಸಿ.ರಸ್ತೆ, ಪರ್ವತವಾಣಿಯವರ ಜನ್ಮ ಶತಮಾನೋತ್ಸವ ಪ್ರಯುಕ್ತ `ನಾಟಕೋತ್ಸವ~. `ಮಂಗಮಾಯ~ ಮತ್ತು `ಗೀತಾ ರಾಕ್ಷಸ~ ನಾಟಕ ಪ್ರದರ್ಶನ. ರಚನೆ: ಪರ್ವತವಾಣಿ, ನಿರ್ದೇಶನ- ಎಸ್. ಕೆ.ಮಾಧವರಾವ್, ಬೆಳಕು: ಶಶಿಧರ್ ಕುಂದಾಪುರ. ಉದ್ಘಾಟನೆ- ಕೆನರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಡಾ.ಎಸ್. ಟಿ.ರಾಮಚಂದ್ರ. ಸಂಜೆ 6.ಉದಯಭಾನು ಕಲಾಸಂಘ: ಉದಯಭಾನು ಸಾಂಸ್ಕೃತಿಕ ಭವನ, ಕೆಂಪೇಗೌಡನಗರ. ದರ್ಶನರಂಗ ತಂಡದಿಂದ ಪಿ.ಲಂಕೇಶ್ ಅವರ `ಗುಣಮುಖ~ ನಾಟಕ ಪ್ರದರ್ಶನ. ನಿರ್ದೇಶನ-ಕೆ.ಚೌಡಯ್ಯ, ಸಹಕಾರ- ಮಾಲತೇಶ ಬಡಿಗೇರ. ಉದ್ಘಾಟನೆ- `ಪುಸ್ತಕಮನೆ~ ಹರಿಪ್ರಿಯ. ಸಂಜೆ 6.30.

 

ಧಾರ್ಮಿಕ ಕಾರ್ಯಕ್ರಮಗಳು:

 ಸದ್ಗುರು ಚೈತನ್ಯ ಮಂದಿರ: ಪಟಾಲಮ್ಮ ದೇವಸ್ಥಾನದ ಸಮೀಪ, ಉತ್ತರಹಳ್ಳಿ, ಕೆಂಗೇರಿ ರಸ್ತೆ. ಪ್ರತಿಷ್ಠಾ ಕುಂಭಾಭಿಷೇಕ. ಅತಿಥಿಗಳು- ಶಂಕರಾಚಾರ್ಯ ಭಾರತೀತೀರ್ಥ ಸ್ವಾಮೀಜಿ, ಡಾ.ವಿ.ಆರ್. ಗೌರಿಶಂಕರ್. ಬೆಳಿಗ್ಗೆ 10.30.ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮಿ ಪುರ. ಮಾರುತಿ ಪ್ರಸಾದ್ ಮತ್ತು ತಂಡದಿಂದ ಭಜನೆ. ಬೆಳಿಗ್ಗೆ 9.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.