ಮಂಗಳವಾರ, ಜೂನ್ 15, 2021
21 °C

ನಗರದಲ್ಲಿ ರಸ್ತೆ ಅಪಘಾತ ಹೆಚ್ಚಳ

ಪ್ರಜಾವಾಣಿ ವಾರ್ತೆ/ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ನಗರದಲ್ಲಿ ದ್ವಿಚಕ್ರ ವಾಹನಗಳ ಅಪಘಾತ ಪ್ರಮಾಣ ಹೆಚ್ಚುತ್ತಿದೆ. ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರಲ್ಲಿ ಬಹುತೇಕರು 20 ರಿಂದ 40ರ ಆಸುಪಾಸಿನವರು. ಇದು ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.ಅಂಕಿ ಅಂಶಗಳ ಇಲಾಖೆ ಪ್ರಕಾರ ನಗರದಲ್ಲಿ 13,112 ವಾಹನಗಳಿವೆ. ಪ್ರತಿ ವರ್ಷ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ನೋಂದಣಿಯಾದ ಸಾವಿರಾರು ವಾಹನಗಳು ರಸ್ತೆಗೆ ಇಳಿಯುತ್ತಿವೆ. ಆದರೆ ರಸ್ತೆಗಳು ಮಾತ್ರ ಕಿರಿದಾಗೇ ಉಳಿದುಕೊಂಡಿವೆ. ಅಪಘಾತ ಹೆಚ್ಚಳಕ್ಕೆ ಇದೊಂದು ಕಾರಣ ಎಂದು ಅಧಿಕಾರಿಯೊಬ್ಬರು ತಿಳಿಸಿದರು.ಸುರಕ್ಷತಾ ಕ್ರಮವಿದ್ದರೂ ಅಪಘಾತ ಪ್ರಮುಖ ವೃತ್ತಗಳಲ್ಲಿ ಸಿಗ್ನಲ್‌ ದೀಪ, ಸಂಚಾರ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಇದಲ್ಲದೇ ವಾರಪೂರ್ತಿ ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ಜಾಗೃತಿ ಮೂಡಿಸಲಾಯಿತು. ಆದರೂ ವಾಹನ ಸವಾರರು ನಿಯಮ ಪಾಲಿಸುವುದೇ ಇಲ್ಲ ಎನ್ನುವುದು ಸಂಚಾರ ಪೊಲೀಸರ ಅನಿಸಿಕೆ.ಜಿಲ್ಲಾ ಆಸ್ಪತ್ರೆ ಸರ್ಜನ್‌ ಡಾ.ಮಂಜುಳಾ ಅವರ ಪ್ರಕಾರ ‘ಹೆಲ್ಮೆಟ್ ಕಡ್ಡಾಯವಾದರೆ ಗಂಭೀರವಾಗಿ ಗಾಯಗೊಳ್ಳುವುದು ಹಾಗೂ ಸಾವನ್ನಪ್ಪುವುದು  ತಪ್ಪುತ್ತದೆ’ ಎನ್ನುತ್ತಾರೆ. ಮೋಜಿನ ಅಸುರಕ್ಷಿತ ಚಾಲನೆ

ಈಚೆಗೆ ಮೋಜಿಗಾಗಿ ಬೈಕ್‌ ಖರೀದಿಸುವ ಮನೋಭಾವ ಯುವಕರಲ್ಲಿ ಮೂಡುತ್ತಿರುವುದರಿಂದ ಅಪಘಾತ ಹೆಚ್ಚಳವಾಗುತ್ತಿವೆ ಎಂದು ಬ್ಯಾಂಕ್‌ನ ನಿವೃತ್ತ ನೌಕರ ಸತ್ಯನಾರಾಯಣರಾವ್‌ ಹೇಳಿದರು.ನಾವು ಓದುತ್ತಿದ್ದಾಗ ಶಾಲಾ–ಕಾಲೇಜುಗಳಿಗೆ ಬಸ್‌, ಕಾಲ್ನಡಿಗೆಯಲ್ಲಿ ಹೋಗುತ್ತಿದ್ದೆವು. ಆದರೆ ಈಗಿನ ಯುವಕರಲ್ಲಿ ಕಂಡುಬರುತ್ತಿಲ್ಲ. ಅಪಘಾತವಾದರೆ ಸಾಯುವುದು ನಾವೇ ಹೊರತು ಬೈಕ್‌ ಅಲ್ಲ ಎಂಬುದನ್ನು ಯುವಕರು ಅರಿಯಬೇಕು ಎನ್ನುತ್ತಾರೆ.ಹಿಂದಿಕ್ಕುವ ವೇಗವು ಅಪಘಾತಕ್ಕೆ ಕಾರಣವಾಗುತ್ತವೆ ಎಂದು ಸಂಚಾರ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.ಹೆಲ್ಮೆಟ್‌ ಕಡ್ಡಾಯವಾಗಬೇಕು

ಬೆಂಗಳೂರಿನಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ಕಡ್ಡಾಯಗೊಳಿಸಲಾಗಿದೆ. ಇದನ್ನು ಇಲ್ಲಿಯೂ ಜಾರಿಗೊಳಿಸಬೇಕು ಎನ್ನುವುದು ತಜ್ಞರ ಅನಿಸಿಕೆ.57 ಅಪಘಾತದಲ್ಲಿ 13 ಸಾವು !

ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ 2013ರ ಜನವರಿಯಿಂದ ಡಿಸೆಂಬರ್‌ವರೆಗೆ  57 ಅಪಘಾತ ಪ್ರಕರಣ ಸಂಭವಿಸಿವೆ. 13 ಮಂದಿ ಮೃತಪಟ್ಟಿದ್ದಾರೆ. 2014ರ ಜನವರಿಯಿಂದ ಮಾರ್ಚ್‌ವರೆಗೆ 5 ರಿಂದ 6 ಅಪಘಾತ ಸಂಭವಿಸಿವೆ.  ಬಹುತೇಕ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 51,879 ದ್ವಿಚಕ್ರ ವಾಹನಗಳಿವೆ. ಅವುಗಳಲ್ಲಿ ಅತಿ ಹೆಚ್ಚು ವಾಹನಗಳು 13,112 ಚಿಕ್ಕಬಳ್ಳಾಪುರದಲ್ಲೇ ಇವೆ. ಪ್ರತಿ ದಿನವೂ ಸಾವಿರಾರು ದ್ವಿಚಕ್ರ ವಾಹನಗಳು ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ನೋಂದಣಿಯಾಗಿ ರಸ್ತೆಗೆ ಇಳಿಯುತ್ತಿವೆ. ಜನರಲ್ಲಿ ಜಾಗೃತಿ ಕೊರತೆ ಹಾಗೂ ಕಿರಿದಾಗಿರುವ ರಸ್ತೆಯಿಂದ ಅಪಘಾತಗಳು ಹೆಚ್ಚುತ್ತಲೆ ಇವೆ ಎನ್ನುತ್ತಾರೆ ಪೊಲೀಸರು.57 ಅಪಘಾತದಲ್ಲಿ 13 ಸಾವು !

ನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ 2013ರ ಜನವರಿಯಿಂದ ಡಿಸೆಂಬರ್‌ವರೆಗೆ  57 ಅಪಘಾತ ಪ್ರಕರಣ ಸಂಭವಿಸಿವೆ. 13 ಮಂದಿ ಮೃತಪಟ್ಟಿದ್ದಾರೆ. 2014ರ ಜನವರಿಯಿಂದ ಮಾರ್ಚ್‌ವರೆಗೆ 5 ರಿಂದ 6 ಅಪಘಾತ ಸಂಭವಿಸಿವೆ.  ಬಹುತೇಕ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.