ಮಂಗಳವಾರ, ಮೇ 24, 2022
31 °C

ನಗರದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರದಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಕೋಲಾರ: ನಗರದ ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಶಾಸಕ ವಿ.ಆರ್.ಸುದರ್ಶನ್, ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್, ಎನ್.ಶಾಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಬಾಬಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ವೇಕಟೇಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ರಮಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ವೆಂಕಟಾಚಲಪತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಯಶೋಧ, ನಾರಾಯಣ ಗೌಡ, ತೂಪಲ್ಲಿ ನಾರಾಯಣಸ್ವಾಮಿ, ವಾಲ್ಮೀಕಿ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟರಾಮ್, ಜಿಲ್ಲಾ ಘಟಕದ ಅಧ್ಯಕ್ಷ ಬಾಲಗೋವಿಂದ,  ಡಾ.ಎಂ.ಚಂದ್ರಶೇಖರ್, ಸುಬ್ರಮಣಿ ಹಾಗೂ ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.ಡಿಜಿಎಂಪಿ ಕಾಲೇಜು:
ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಡಿ.ಆರ್.ನಾಗರಾಜ್‌ಗೌಡ ಹಾಗೂ  ಸಿ.ವಿ.ನಾರಾಯಣಸ್ವಾಮಿ ಇದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.ವಿವಿಧೆಡೆ ವಾಲ್ಮೀಕಿ ಜಯಂತಿ

ಹೇಮಾದ್ರಿ ಶಿಕ್ಷಣ ಸಂಸ್ಥೆ
: ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಮುನಿವೆಂಕಟಪ್ಪ ಉದ್ಘಾಟಿಸಿದರು. ಆಡಳಿತಾಧಿಕಾರಿ ಸಿ.ಕೆ.ಮುನಿಭೈರಪ್ಪ ಹಾಗೂ ಜೆ.ಶ್ರೀನಿವಾಸಶೆಟ್ಟಿ, ವಿಜಯಕುಮಾರ್ ನರಸಿಂಹ ನಾಯ್ಕ ಹಾಜರಿದ್ದರು.ರಾಕ್‌ವ್ಯಾಲಿ ಶಿಕ್ಷಣ ಸಂಸ್ಥೆ: ಸಂಸ್ಥೆ  ವ್ಯವಸ್ಥಾಪಕ ಡಾ.ಕೆ.ಆರ್.ಪಿಳ್ಳಪ್ಪ,ಉಪ ನ್ಯಾಸಕ ರಾಜಣ್ಣ, ಸಂಸ್ಥೆ ಅಧ್ಯಕ್ಷೆ ರೂಪ, ಕೆ.ಸಿ.ಮಲ್ಲಿಕಾರ್ಜುನಯ್ಯ  ಹಾಜರಿದ್ದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು ರುಕ್ಮಿಣಿ ಸ್ವಾಗತಿಸಿದರು. ನಾಗೇಶ ವಂದಿಸಿದರು.ಅರುಣೋದಯ ವಿದ್ಯಾ ಸಂಸ್ಥೆ: ತಾಲ್ಲೂಕಿನ ಕ್ಯಾಲನೂರಿನಲ್ಲಿ ಅರುಣೋದಯ ಶಾಲೆಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ನಡೆಯಿತು. ಸಂಸ್ಥಾಪಕ ಡಿ.ಜಯರಾಂ, ಚಂದನ್ ಜಯರಾಮ್, ಜಯಶ್ರೀ , ಶಿಕ್ಷಕ ಆರ್.ಪ್ರಕಾಶ್  ನಾಗರತ್ನಮ್ಮ, ಪಾರ್ವತಮ್ಮ  ಹಾಜರಿದ್ದರು. ಹರ್ಷ, ಮೇಘ ಗಾಯನ ಪ್ರಸ್ತುತ ಪಡಿಸಿದರು. ಭೈರೇಗೌಡ ನಿರೂಪಿಸಿದರು. ಸತೀಶ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.