ಬುಧವಾರ, ಜೂನ್ 23, 2021
22 °C

ನಗರದಲ್ಲಿ ವಾಹನ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಾರುಗಳು ಪ್ರತಿ ಕಿ.ಮೀ.ಗೆ ಸರಾಸರಿ 119 ಗ್ರಾಂ ಇಂಗಾಲದ ಡೈ ಆಕ್ಸೈಡ್‌  ಹೊರ ಹಾಕುತ್ತವೆ’ ಎಂದು ಸಾರಿಗೆ ಇಲಾಖೆ ಆಯುಕ್ತ ಕೆ.ಅಮರ ನಾರಾಯಣ ಅವರು ಹೇಳಿದರು.‘ಪಲ್ಸ್’ ಸಂಸ್ಥೆಯು ನಗರದ ಒರಾ ಯನ್ ಮಾಲ್‌ನಲ್ಲಿ ಆಯೋಜಿ ಸಿರುವ 3 ದಿನದ ‘ಫ್ಯುಯಲ್ ಆಟೋ ಎಕ್ಸ್‌ಪೊ–2014’ ಮೇಳವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.‘ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಗಿಂತ ಪರಿಸರ ಮತ್ತು ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳಿಂದಾಗಿ ವಾಹನಗಳ ಬಳಕೆಯ ಪ್ರಮಾಣವನ್ನು ತಗ್ಗಿಸಬೇಕು. ಪರ್ಯಾಯ ಇಂಧನಗ ಳಾದ ಜೈವಿಕ ಡೀಸೆಲ್ ಮತ್ತು ವಿದ್ಯುತ್‌ ಚಾಲಿತ ವಾಹನಗಳ ಬಳಕೆಯನ್ನು  ಉತ್ತೇಜಿಸಬೇಕು’ ಎಂದರು.ಮಾ.9ರ ವರೆಗೆ ನಡೆಯುವ ಮೇಳ ದಲ್ಲಿ ಸಾಮಾನ್ಯ ವಾಹನಗಳಲ್ಲೇ ಇಂಧ ನದ ಗರಿಷ್ಠ ಪ್ರಯೋಜನ ಪಡೆಯುವ ಚಾಲನಾ ಹವ್ಯಾಸಗಳ ಬಗ್ಗೆ ಮಾಹಿತಿ ನೀಡುವ  ವ್ಯವಸ್ಥೆ ಮಾಡಲಾಗಿದೆ. ಶನಿ ವಾರ ಮತ್ತು ಭಾನುವಾರ ಬೈಕ್ ಸಾಹಸ ಪ್ರದರ್ಶನ ಏರ್ಪಡಿಸಲಾಗಿದೆ.‘ಹೊಂಡಾ ಮೋಟರ್‌ ಸೈಕಲ್ಸ್’ ಸಂಸ್ಥೆಯು  ‘ಬೈಕ್ ಸಿಮ್ಯುಲೇಟರ್’ ಯಂತ್ರದ ಮೂಲಕ ಉಚಿತವಾಗಿ ದ್ವಿಚಕ್ರ ವಾಹನ ಚಾಲನಾ ತರಬೇತಿ ನೀಡುತ್ತಿದೆ. ‘ಕೆಲವು ವಾಹನಗಳನ್ನು ಹೊರತು ಪಡಿಸಿ ಹೊಸತೇನೂ ಇಲ್ಲ. ಹೆಚ್ಚಿನ ಇಂಧನ ದಕ್ಷತೆಯ ಯಾವ ವಾಹನವೂ ಇಲ್ಲ’ ಎಂದು ಕಾಲೇಜು ವಿದ್ಯಾರ್ಥಿ ರವಿಕುಮಾರ್ ಬೇಸರ ವ್ಯಕ್ತಪಡಿಸಿದರು.ವಿಶೇಷ ವಾಹನಗಳಿಗೆ ಮುಗಿಬಿದ್ದ ಯುವಜನರು

ಮೇಳದಲ್ಲಿ ಪ್ರದರ್ಶಿನಕ್ಕಿಟ್ಟಿರುವ ವಿಶಿಷ್ಟ ವಾಹನಗಳಿಗೆ ಯುವಜನರು ಮುಗಿಬಿದ್ದಿದ್ದರು.ಸಾಮಾನ್ಯ ವಾಹನಗಳತ್ತ ತಿರು ಗಿಯೂ ನೋಡದ ಮಂದಿ ಕೆಟಿಎಂ ಎಸ್‌ಎಕ್ಸ್‌ಎಫ್ 350 ಆಫ್‌ ರೋಡರ್, ಬಿಎಂಡಬ್ಲ್ಯು ಜಿಎಸ್ 1200 ಟೂರರ್ ದ್ವಿಚಕ್ರ ವಾಹನ ಗಳು, ಪೊಲಾರಿಸ್   ಎಟಿವಿ (ಆಲ್ ಟೆರೇನ್ ವೆಹಿಕಲ್), ಮಿನಿ ಕೂಪರ್ ಕಂಟ್ರಿಮನ್ ಮತ್ತು ಕನ್ವರ್ಟಬಲ್  ಕಾರುಗಳನ್ನು ಮುಟ್ಟಿ ನೋಡಲು ಸರತಿಯಲ್ಲಿ ನಿಂತಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.