ಗುರುವಾರ , ಮೇ 6, 2021
33 °C

ನಗರದ ವಿದ್ಯಾರ್ಥಿನಿಯರಿಗೆ ಟಿಮ್‌ಕೆನ್ ವಿದ್ಯಾರ್ಥಿವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರಿಗೆ ಟಿಮ್‌ಕೆನ್ ವಿದ್ಯಾರ್ಥಿವೇತನ ಲಭಿಸಿದೆ. 

ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ರಿಮಾ ವಾಸುದೇವನ್ ಅವರಿಗೆ 4 ವರ್ಷಗಳಿಗೆ 60 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ಲಭಿಸಿದೆ. ವರ್ಷಕ್ಕೆ 15 ಲಕ್ಷದಂತೆ 4 ವರ್ಷಗಳಿಗೆ 60 ಲಕ್ಷ ರೂಪಾಯಿಗಳನ್ನು ನೀಡಲಾಗುವುದು. ಇವರು ಮುಂದೆ ಅಮೆರಿಕದ ಅಕ್ರೋನ್ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಓದುವ ಕನಸನ್ನು ಹೊಂದಿದ್ದಾರೆ.ನಗರದ ಇನ್ನೊಬ್ಬ ವಿದ್ಯಾರ್ಥಿನಿ ಸ್ಮೃತಿ ಉಪಾಧ್ಯ ಅವರು ದೀಕ್ಷಾ ಸೆಂಟರ್ ಫಾರ್ ಲರ್ನಿಂಗ್ ಪಿಯು ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಇವರಿಗೆ ವರ್ಷಕ್ಕೆ 5 ಲಕ್ಷದಂತೆ ನಾಲ್ಕು ವರ್ಷಗಳಿಗೆ 20 ಲಕ್ಷ ವಿದ್ಯಾರ್ಥಿವೇತನ ದೊರೆತಿದೆ. ಮುಂದೆ ಇವರು ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ ಓದುವ ಕನಸನ್ನು ಹೊಂದಿದ್ದಾರೆ.ದಿ ಟಿಮ್‌ಕೆನ್ ಕಂಪೆನಿಯು ದತ್ತಿ ಮತ್ತು ಶಿಕ್ಷಣ ನಿಧಿಯಿಂದ ಈ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ಈ ವಿದ್ಯಾರ್ಥಿವೇತನವನ್ನು ಭಾರತದ ಒಟ್ಟು ಐದು ವಿದ್ಯಾರ್ಥಿನಿಯರು ಸೇರಿದಂತೆ ಆರು ದೇಶಗಳ ಒಟ್ಟು 38 ವಿದ್ಯಾರ್ಥಿನಿಯರಿಗೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.