ಸಾಗರ: ನಗರಸಭೆ ನಾಗರಿಕರಿಗೆ ಮೂಲಸೌಕರ್ಯ ಒದಗಿಸಲು ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಬುಧವಾರ ನಗರಸಭೆ ಎದುರು ಧರಣಿ ನಡೆಸಿದರು. ಬಿಜೆಪಿಯಲ್ಲಿನ ಭಿನ್ನಮತದಿಂದಾಗಿ ನಗರಸಭೆಯ ಆಡಳಿತ ಯಂತ್ರ ಸಂಪೂರ್ಣವಾಗಿ ಹದಗೆಟ್ಟಿದೆ. ಎಷ್ಟೇ ಟೀಕಿಸಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳದ ರೀತಿಯಲ್ಲಿಆಡಳಿತ ತನ್ನ ಪಂಚೇಂದ್ರಿಯವನ್ನು ಕಳೆದುಕೊಂಡಿದೆ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ನಗರಸಭೆ ಆಡಳಿತವನ್ನು ತರಾಟೆಗೆ ತೆಗೆದುಕೊಂಡರು.

ಹಿಂದಿನ ನಗರಸಭೆ ಆಡಳಿತಾವಧಿಯಲ್ಲಿ ಬಗರ್ಹುಕುಂ ಸಾಗುವಳಿದಾರರ ಪಟ್ಟಿ ಮಾಡಿ ಮಂಜೂರಾತಿಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಈಗ ಆ ಪಟ್ಟಿಯಲ್ಲಿ ಹೆಸರಿರುವ ಫಲಾನುಭವಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ತಾಲ್ಲೂಕು ಆಡಳಿತದಿಂದ ನಡೆದಿರುವುದು ಖಂಡನಾರ್ಹ. ಬಡವರ ಸಿಟ್ಟು ಬೀದಿಗೆ ಬಂದರೆ ಸರ್ಕಾರವೇ ನಾಶವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಕಳೆದ ಮೂರು ವರ್ಷದ ಅವಧಿಯಲ್ಲಿ ಬಡವರಿಗೆ ಯಾವುದೇ ನಿವೇಶನ ಅಥವಾ ಮನೆ ನಗರಸಭೆಯಿಂದ ವಿತರಣೆಯಾಗಿಲ್ಲ. ಅದರ ಬದಲಾಗಿ ಶ್ರೀಮಂತರಿಗೆ ಭೂಪರಿವರ್ತನೆಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಇದರಿಂದ ನಗರಸಭೆಯೆ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಕಳೆದ ಮೂರೂವರೆ ತಿಂಗಳಿನಿಂದ ಸ್ಥಾಯಿಸಮಿತಿ ಅಧ್ಯಕ್ಷರ ಹುದ್ದೆ ಖಾಲಿ ಉಳಿದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು ನಗರದ ಎಲ್ಲೆಡೆ ಕಳಪೆ ಕಾಮಗಾರಿ ನಡೆದಿದೆ. ಅದನ್ನು ತಡೆಯಬೇಕಾದ ಸ್ಥಾಯಿಸಮಿತಿ ಅಸ್ತಿತ್ವದಲ್ಲಿಲ್ಲದೇ ಸಾರ್ವಜನಿಕರಿಗೆ ಅನ್ಯಾಯವಾಗುತ್ತಿದೆ. ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಬಿಜೆಪಿ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡುವುದೇ ಒಳ್ಳೆಯದು ಎಂದು ಧರಣಿ ನಿರತರು ಹೇಳಿದರು.

ರಾಜೀವ್ಗಾಂಧಿ ಹಾಗೂ ಇತರ ವಸತಿ ಯೋಜನೆ ಅಡಿ ಕೂಡಲೇ ಫಲಾನುಭವಿಗಳ ಪಟ್ಟಿ ಮಾಡಬೇಕು. ಬಾಕಿ ಉಳಿದಿರುವ 94ಸಿ ಪ್ರಕರಣಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು. ಜಂಬಗಾರುವಿನ ನಾಗರಿಕರಿಗೆ ಅಕ್ರಮವಾಗಿ ನೀಡಿರುವ ನೋಟೀಸನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕಾಂಗ್ರೆಸ್ ಮುಖಂಡರಾದ ಹೊಳಿಯಪ್ಪ, ಮಕ್ಬುಲ್ ಅಹಮದ್, ತೀ.ನಾ. ಶ್ರೀನಿವಾಸ್, ಮಹಮದ್ ಖಾಸಿಂ, ಮಹಮದ್ ಕೋಯಾ, ಗಣಪತಿ ಸುಳಗೋಡು, ಮಲ್ಲಿಕಾರ್ಜುನ ಹಕ್ರೆ, ರಮೇಶ್ ಗಾಳಿಪುರ, ಸುಂದರ್ಸಿಂಗ್, ಐ.ಎನ್. ಸುರೇಶ್ಬಾಬು, ಡಿ. ದಿನೇಶ್, ಸುರೇಶ್ಕುಮಾರ್, ಜೆಡಿಎಸ್ ಮುಖಂಡರಾದ ಎಸ್.ಎಲ್. ಮಂಜುನಾಥ್, ಕನ್ನಪ್ಪ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.