ಮಂಗಳವಾರ, ಮೇ 18, 2021
28 °C

ನಗರಾಡಳಿತ ಹೊಸ ಅನುಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ನಗರಾಡಳಿತದಲ್ಲಿ ಅನುಭವ ಇಲ್ಲದಿದ್ದರೂ ಶೀಘ್ರ ಅದನ್ನು ಕರಗತ ಮಾಡಿಕೊಳ್ಳುತ್ತೇನೆ. ಶಾಸಕಾಂಗ ಕೈಗೊಂಡ ನಿರ್ಧಾರಗಳನ್ನು ಕಾರ್ಯಾಂಗ ಅನುಷ್ಠಾನಕ್ಕೆ ತರುತ್ತಿಲ್ಲ ಎಂಬ ಆರೋಪ ನಿಜ. ಇದಕ್ಕೆ ಆಸ್ಪದ ಕೊಡದಂತೆ ಕೆಲಸ ಮಾಡುತ್ತೇನೆ~ ಎಂದು ಮಂಗಳೂರು ಮಹಾನಗರ ಪಾಲಿಕೆ ನೂತನ ಆಯುಕ್ತ ಹರೀಶ್ ಕುಮಾರ್ ಹೇಳಿದ್ದಾರೆ.ಗುರುವಾರ ಪಾಲಿಕೆ ಕಚೇರಿಯಲ್ಲಿ ಕೆ.ಎನ್.ವಿಜಯಪ್ರಕಾಶ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ  ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಗರಾಭಿವೃದ್ಧಿ ಆಡಳಿತದಲ್ಲಿ ಹೊಸಬನಾಗಿರುವುದರಿಂದ ಹೊಸತನಗಳಿಗೆ ತೆರೆದುಕೊಂಡು ಕೆಲಸ ಮಾಡುವುದು ಸುಲಭ.ಜನೋಪಯೋಗಿ ಕೆಲಸಗಳಿಗೆ ಆದ್ಯತೆ ನೀಡಿ ಅದನ್ನು ಜಾರಿಗೆ ತರಲು ಯತ್ನಿಸುತ್ತೇನೆ. ಉತ್ತಮ ಕೆಲಸ ಮಾಡಿದ ಅಧಿಕಾರಿಯ ನಿರ್ಗಮನದ ಬಳಿಕ ಬರುವ ಅಧಿಕಾರಿಯ ಬಗ್ಗೆಯೂ ಬಹಳ ನಿರೀಕ್ಷೆ ಇರುತ್ತದೆ, ಅದು ಹುಸಿಯಾಗದಂತೆ ನೋಡಿಕೊಳ್ಳುವೆ ಎಂದರು.ಕೆ.ಎನ್.ವಿಜಯಪ್ರಕಾಶ್ ಅವರು ಆಯುಕ್ತರಾಗಿ ಎರಡು ವರ್ಷಗಳ ತಮ್ಮ ಅನುಭವ ವಿಶಿಷ್ಟವಾದುದು ಎಂದರಲ್ಲದೆ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಪರಿಚಯ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ಎಂ.ಎಸ್ಸಿಯಲ್ಲಿ ಚಿನ್ನದ ಪದಕ ಗಳಿಸಿದ ಹರೀಶ್ ಕುಮಾರ್, ಹೆಬ್ರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1999ರಲ್ಲಿ ಕೆಎಎಸ್ ಉತ್ತೀರ್ಣರಾದ ಅವರು, 2006ರಲ್ಲಿ ಮೊದಲಿಗೆ ಭಟ್ಕಳದ ಉಪವಿಭಾಗಾಧಿಕಾರಿಯಾಗಿ ನಿಯುಕ್ತರಾದರು. ಕಳೆದ ಮೂರು ವರ್ಷಗಳಿಂದ ಪುತ್ತೂರು ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.