ಆನೇಕಲ್: ಕಲಾವಿದನೊಬ್ಬ ನಾಯಕನಟನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದರೆ ಅವನ ಗುಣ ಹಾಗೂ ಅಭಿನಯದಿಂದ ಮಾತ್ರವೇ ಸಾಧ್ಯ ಎಂದು ಹಿರಿಯ ನಟ ರಾಜೇಶ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಪವನಸುತ ಕೇಸರಿ ಕಲಾ ಶಾಲೆಯ ವತಿಯಿಂದ ನಟ ದಿವಂಗತ ಉದಯ್ ಕುಮಾರ್ ಅವರ 81ನೇ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ‘ಕಲಾ ಕೇಸರಿ ಒಂದು ನೆನಪು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕನ್ನಡ ಚಲನಚಿತ್ರ ರಂಗದ ಕುಮಾರತ್ರಯರಲ್ಲಿ ಒಬ್ಬರಾಗಿದ್ದ ಉದಯ್ಕುಮಾರ್ ಅವರು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ನೆನಪು ಅಜರಾಮರ ಎಂದರು.

ಚಲನಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್ ಮಾತನಾಡಿ, ‘ಕಲಾವಿದನಿಗೆ ಸಾವಿಲ್ಲ ಎಂಬ ಮಾತಿನಂತೆ ಉದಯಕುಮಾರ್ ಅವರ ಚಿತ್ರಗಳು ಅಮರವಾಗಿವೆ’ ಎಂದರು.

ಕಾರ್ಯಕ್ರಮದ ಆಯೋಜಕ ಹಾಗೂ ಉದಯ್ಕುಮಾರ್ ಪುತ್ರ ವಿಕ್ರಂ ಉದಯ್ಕುಮಾರ್ ಮಾತನಾಡಿ 190 ಚಿತ್ರಗಳಲ್ಲಿ ನಟಿಸಿದ್ದ ಉದಯ್ಕುಮಾರ್ ಅವರು ಸಂಭಾಷಣೆ, ನಿರ್ದೇಶನ, ಸಂಗೀತ ಸಂಯೋಜನೆ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ನೆನಪು ಶಾಶ್ವತವಾಗಿ ಉಳಿಯುವಂತಾಗಲು ಉದಯ್ಕುಮಾರ್ ಬಗೆಗಿನ ಸಾಕ್ಷ್ಯಚಿತ್ರ ತಯಾರಿಸಲಾಗಿದೆ’ ಎಂದು ತಿಳಿಸಿದರು.

ಸಂಗೀತ ವಿದ್ವಾಂಸ ವೆಂಕಟರಾಘವನ್, ರಾಜಾಪುರ ಸಂಸ್ಥಾನ ಮಠದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಬಿ.ಶಿವಣ್ಣ, ಮಾಜಿ ಸಚಿವ ಎ.ನಾರಾಯಣ ಸ್ವಾಮಿ, ಖೋಡೇಸ್ ಗ್ರೂಪ್ನ ನಿರ್ದೇಶಕ ಹರಿ ಖೋಡೆ, ಚಿತ್ರ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ, ಸಾಹಿತಿ ತಾ.ನಂ.ಕುಮಾರಸ್ವಾಮಿ, ಆದೂರು ಪ್ರಕಾಶ್, ಮೋಹನ್ ಕುಮಾರ್ ಕದಂ, ಜಿ.ವೆಂಕಟೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.